ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ 2024ರ ಅಕ್ಟೋಬರ್ 14 ರಂದು 449 ಜೂನಿಯರ್ ಪವರ್‌ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಸದರಿ ನೇಮಕಾತಿ ಸಂಬಂಧ ಸಹನಾ ಶಕ್ತಿ ಪರೀಕ್ಷೆಯ ದಿನಾಂಕ, ಅರ್ಹರಾದ ಅಭ್ಯರ್ಥಿಗಳ 1:5 ಅನುಪಾತದ ಪಟ್ಟಿ ಹಾಗೂ ಶೇಕಡಾವಾರು ಕಟ್-ಆಫ್ ಅಂಕಗಳನ್ನು ಪ್ರಕಟಿಸಲಾಗಿದೆ.
ಜೂನಿಯರ್ ಪವರ್‌ಮ್ಯಾನ್ ಹುದ್ದೆಯ ಮೊದಲನೇಯ ಹಂತದ ದಾಖಲಾತಿ ಪರಿಶೀಲನೆಯ ನಂತರ, ಸಹನ ಶಕ್ತಿ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ 1:5 ಅನುಪಾತದ ಪಟ್ಟಿ ಹಾಗೂ ಶೇಕಡಾವಾರು ಕಟ್-ಆಫ್ (Cut-Off) ಅಂಕಗಳನ್ನು ಸಿದ್ಧಪಡಿಸಿ ಮೆಸ್ಕಾಂನ ಅಂತರ್ಜಾಲ mescom.karnataka.gov.in ನಲ್ಲಿ ಪ್ರಕಟಿಸಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಸಹನಾ ಶಕ್ತಿ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿ
ಅರ್ಹರಾಗಿರುವ ಅಭ್ಯರ್ಥಿಗಳ 1:5 ಅನುಪಾತದ ಪಟ್ಟಿಯು ಆಯ್ಕೆ ಪಟ್ಟಿಯಾಗಿರುವುದಿಲ್ಲ ಹಾಗೂ ಈ ಪಟ್ಟಿಯಲ್ಲಿನ ಅಭ್ಯರ್ಥಿಗಳ ಆಯ್ಕೆಯು ಅವರ ದಾಖಲಾತಿ ಸಲ್ಲಿಕೆ ಹಾಗೂ ಸಹನ ಶಕ್ತಿ ಪರೀಕ್ಷೆಯ ಅರ್ಹತೆಗೆ ಒಳಪಟ್ಟಿರುತ್ತದೆ. ಆದಾಗ್ಯೂ, ಮೊದಲನೇ ಹಂತದಲ್ಲಿ ದಾಖಲಾತಿಗಳನ್ನು ಆನ್‌ಲೈನ್ ಮೂಲಕ ಅಪ್-ಲೋಡ್ ಮಾಡದೇ ಇರುವ ಅಭ್ಯರ್ಥಿಗಳನ್ನು ಸಹ ಪ್ರಸ್ತುತ 1:5 ಅನುಪಾತದ ಪಟ್ಟಿಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಪರಿಗಣಿಸಲಾಗಿರುತ್ತದೆ.
ಸಹನಾ ಶಕ್ತಿ(MESCOM JPM Physical Dates 2025) ನಡೆಯುವ ಪ್ರಮುಖ ದಿನಾಂಕಗಳು:
ಮೇ 27 ರಿಂದ ಮೇ 30ರವೆಗೆ ಮಂಗಳೂರು, ಉಡುಪಿ ಮತ್ತು ಶಿವಮೊಗ್ಗದ ವಿವಿಧ ಕೇಂದ್ರಗಳಲ್ಲಿ ಸಹನ ಶಕ್ತಿ ಪರೀಕ್ಷೆಯನ್ನು ನಡೆಸಲಾಗುವುದು.
ಮೇ 27 ರಿಂದ ಮೇ 30ರವೆಗೆ ವರೆಗೆ ಮಂಗಳೂರಿನ ಮಣ್ಣಗುಡ್ಡ ಮಂಗಳ ಕ್ರೀಡಾಂಗಣದಲ್ಲಿ, ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಹಾಗೂ ಶಿವಮೊಗ್ಗದ ನವಿಲೆ ಸವಳಂಗ ರಸ್ತೆ, ಕೃಷಿ ಮಹಾವಿದ್ಯಾಲಯ ಇಲ್ಲಿ ಸಹನ ಶಕ್ತಿ ಪರೀಕ್ಷೆಯನ್ನು ನಡೆಸಲಾಗುವುದು.
ವಿಶೇಷ ಸೂಚನೆ
- ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವಾಗ ಅಂಕಗಳನ್ನು ತಪ್ಪಾಗಿ ನಮೂದಿಸಿದ್ದಲ್ಲಿ, ಮೂಲ ಅಂಕಪಟ್ಟಿಯನ್ನು ಪರಿಶೀಲಿಸಿ, ಅಭ್ಯರ್ಥಿಯ ಶೇಕಡಾವಾರು ಅಂಕವು ನಿಗದಿಪಡಿಸಿದ ವರ್ಗದ (Category) ಕಟ್-ಅಫ್‌ಗಿಂತ ಹೆಚ್ಚಿದ್ದಲ್ಲಿ ಮಾತ್ರ ಸಹನ ಶಕ್ತಿ ಪರೀಕ್ಷೆಗೆ ಪರಿಗಣಿಸಲಾಗುವುದು.
- ಒಂದು ವೇಳೆ ಶೇಕಡಾವಾರು ಅಂಕವು ನಿಗದಿಪಡಿಸಿದ ಕಟ್-ಆಫ್‌ಗಿಂತ ಕಡಿಮೆ ಇದ್ದಲ್ಲಿ ಅಂತಹವರನ್ನು ಸಹನ ಶಕ್ತಿ ಪರೀಕ್ಷೆಗೆ ಪರಿಗಣಿಸಲಾಗುವುದಿಲ್ಲ.
- ನೇರ ಮತ್ತು ಸಮತಳ ಮೀಸಲಾತಿಯಲ್ಲಿ ನೀಡಿರುವ ಮಾಹಿತಿಯು ತಪ್ಪು ಎಂದು ಕಂಡು ಬಂದಲ್ಲಿ, ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ಅಭ್ಯರ್ಥಿಗಳು ಮೊಬೈಲ್, ಸ್ಮಾರ್ಟ್ ವಾಚ್ ಹಾಗೂ ಇನ್ನಿತರ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಕ್ರೀಡಾಂಗಣದೊಳಗೆ ತರಲು ಅವಕಾಶವಿರುವುದಿಲ್ಲ.
Important Direct Links:
MESCOM JPM Physical Date 2025/1:5 List PDF | Download |
Official Website | mescom.karnataka.gov.in |
More Updates | Karnataka Help.in |