Morarji Selection List PDF 2024: ಕರ್ನಾಟಕದ ಉಚಿತ ವಸತಿ ಮತ್ತು ಶಾಲೆ ಸಂಸ್ಥೆಗಳಲ್ಲಿ ಒಂದಾದ ಮುರಾರ್ಜಿ ದೇಸಾಯಿ ಸಂಸ್ಥೆಯು 6ನೇ ತರಗತಿಗೆ ಪ್ರವೇಶ ಪರೀಕ್ಷೆಯನ್ನು ಫೆಬ್ರವರಿ 18ರಂದು ನಡೆಸಿತ್ತು, ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ವಿದ್ಯಾರ್ಥಿಗಳ ಅಂತಿಮ ಮೆರಿಟ್ ಪಟ್ಟಿಗಳನ್ನು ಬಿಡುಗಡೆಗೊಳಿಸಿದೆ. ಸದ್ಯದಲ್ಲೇ ಫಲಿತಾಂಶವನ್ನು ಕೂಡ ಪ್ರಕಟ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿದ್ಧತೆ ಮಾಡಿಕೊಂಡಿದೆ.
ಪಾಲಕರು ಮತ್ತು ವಿದ್ಯಾರ್ಥಿಗಳು ತಮ್ಮ ಅಧಿಕೃತ ನೊಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು, ಬಳಸಿ ಲಾಗಿನ್ ಮಾಡಿ ತಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಫೆಬ್ರವರಿ 18 ರಂದು ಮೊರಾರ್ಜಿ ದೇಸಾಯಿ ಪರೀಕ್ಷೆಯನ್ನು ನಡೆಸಿದ್ದು ಈ ನಿಟ್ಟಿನಲ್ಲಿ ಆಯ್ಕೆಯಾಗಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಜಿಲ್ಲಾವಾರು ವಿದ್ಯಾರ್ಥಿಗಳ ಅಂಕ ಮತ್ತು Rank ಗಳನ್ನು ಪ್ರಕಟಿಸಿದೆ.
ಪ್ರತಿ ಜಿಲ್ಲೆಯ ಹೆಸರಿನಲ್ಲಿ ಪ್ರತ್ಯೇಕ PDF ಗಳನ್ನು ಬಿಡುಗಡೆ ಮಾಡಿದ್ದು, ಇದನ್ನು ಡೌನ್ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ನೋಡಬಹುದಾಗಿದೆ.
Morarji Result 2024: {Selection List PDF} ಆಯ್ಕೆ ಪಟ್ಟಿ ಬಿಡುಗಡೆ, ಇಲ್ಲಿ ಡೌನ್ಲೋಡ್ ಮಾಡಿ
How to Check Morarji Selection List PDF 2024
ಕರ್ನಾಟಕ ಮೊರಾರ್ಜಿ ದೇಸಾಯಿ ಪರೀಕ್ಷೆ ಫಲಿತಾಂಶ 2024 ನೋಡುವುದು ಹೇಗೆ?
- ಮೊದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ cetonline.karnataka.gov.in, ಲಿಂಕ್ ಕ್ಲಿಕ್ ಮಾಡುವ ಮೂಲಕ ವೆಬ್ಸೈಟ್ಗೆ ಭೇಟಿ ನೀಡಿ.
- ನಂತರ ಮೇಲೆ ಕಾಣಿಸುವ ಪ್ರವೇಶವಾತಿ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ಕಾಣಿಸುವ ಮುರಾರ್ಜಿ ದೇಸಾಯಿ ಶಾಲೆಗಳ ಫಲಿತಾಂಶದ ಮೇಲೆ ಕ್ಲಿಕ್ ಮಾಡಿ.
- KRIES 2024 ಮೆರಿಟ್ ಪಟ್ಟಿಯನ್ನು pdf ಫಾರ್ಮ್ಯಾಟ್ನಲ್ಲಿ ಕಾಣಿಸುತ್ತದೆ.
- KRIES ಮೊರಾರ್ಜಿ ದೇಸಾಯಿ ಫಲಿತಾಂಶ 2024 ಅನ್ನು ಹುಟ್ಟಿದ ದಿನಾಂಕ, ಹೆಸರು ಮತ್ತು ನೋಂದಣಿ ಸಂಖ್ಯೆಯೊಂದಿಗೆ ಹುಡುಕಿ.
- KRIES ಮೊರಾರ್ಜಿ ದೇಸಾಯಿ ಆಯ್ಕೆ ಪಟ್ಟಿ 2024 ನಿಮ್ಮ ಜಿಲ್ಲೆಯ ಹೆಸರಿನ pdf ಡೌನ್ಲೋಡ್ ಮಾಡಿ.
- ಭವಿಷ್ಯದ ಉಲ್ಲೇಖಕ್ಕಾಗಿ KRIES ಮೊರಾರ್ಜಿ ದೇಸಾಯಿ ಫಲಿತಾಂಶ 2024 ಪಟ್ಟಿಯ ಮುದ್ರಣವನ್ನು ತೆಗೆದುಕೊಳ್ಳಿ.
ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳು ಮುಂದಿನ ಸುತ್ತುಗಳಿಗೆ ಹಾಜರಾಗಬೇಕು. ಪರೀಕ್ಷಾ ಪ್ರಾಧಿಕಾರವು ಅಧಿಕೃತ ಪೋರ್ಟಲ್ನಲ್ಲಿ ಪ್ರವೇಶ ಮತ್ತು ಕೌನ್ಸೆಲಿಂಗ್ ವಿವರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಇತ್ತೀಚಿನ ನವೀಕರಣಗಳಿಗಾಗಿ KREIS ನ ಅಧಿಕೃತ ಪೋರ್ಟಲ್ ಪರಿಶೀಲಿಸಲು ಸೂಚಿಸಲಾಗಿದೆ.
Important Links:
Official Website | KEA Online |
More Updates | KarnatakaHelp.in |