ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(NABARD)ನ ಗ್ರಾಮೀಣಾಭಿವೃದ್ಧಿ ಬ್ಯಾಂಕಿಂಗ್ ಸೇವೆಯ (ಲೀಗಲ್/ಪ್ರೋಟೋಕಾಲ್ ಸೆಕ್ಯೂರಿಟಿ ಸರ್ವಿಸ್) ನಲ್ಲಿ ಸಹಾಯಕ ವ್ಯವಸ್ಥಾಪಕರ ಗ್ರೇಡ್ ‘ಎ’ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 91 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಸದರಿ ನೇಮಕಾತಿಗೆ ಅರ್ಜಿ ಸಲ್ಲಿಸ ಬಯಸುವ ಅರ್ಹ ಮತ್ತು ಆಸಕ್ತ ಉದ್ಯೋಗಾಕಾಂಕ್ಷಿಗಳು ನ.30 ರೊಳಗೆ ಅಧಿಕೃತ ಜಾಲತಾಣ https://www.nabard.org/careers-notices1.aspxಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ನವೆಂಬರ್ 30, 2025
ಶೈಕ್ಷಣಿಕ ಅರ್ಹತೆ:
NABARD ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ, ಅರ್ಜಿ ಸಲ್ಲಿಸಲು ನಿಗದಿತ ವಿದ್ಯಾರ್ಹತೆ ಹೊಂದಿರಬೇಕು. ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ಅಭ್ಯರ್ಥಿಗಳು ತಪ್ಪದೇ ಅಧಿಕೃತ ಅಧಿಸೂಚನೆಯನ್ನು ಓದಿ.
Nabard Assistant Manager Online Application Form 2025Nabard Assistant Manager Online Application Form 2025Nabard Assistant Manager Online Application Form 2025
ವಯೋಮಿತಿ:
01-11-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು
ವಯೋಮಿತಿ ಸಡಿಲಿಕೆ; ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪ.ಜಾತಿ, ಪ. ಪಂಗಡ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10-15 ವರ್ಷಗಳು
ಆಯ್ಕೆ ವಿಧಾನ:
ಹಂತ-I ಪೂರ್ವಭಾವಿ ಪರೀಕ್ಷೆ ಹಂತ-II (ಮುಖ್ಯ ಪರೀಕ್ಷೆ) ಹಂತ III (ಸೈಕೋಮೆಟ್ರಿಕ್ ಪರೀಕ್ಷೆ) ಸಂದರ್ಶನ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ 44,500-1,00,000ರೂ.ವರೆಗೆ ಮಾಹೆಯಾನ ವೇತನ ಹಾಗೂ ಇತರ ಭತ್ಯೆಗಳನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಪ.ಜಾತಿ, ಪ. ಪಂಗಡ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 150ರೂ. ಇತರೆ ಎಲ್ಲಾ ಅಭ್ಯರ್ಥಿಗಳಿಗೆ – 850ರೂ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
• IBPS ನ ಅಧಿಕೃತ ಜಾಲತಾಣ https://ibpsreg.ibps.in/nbardamoct25/ ಕ್ಕೆ ಭೇಟಿ ನೀಡಿ.
Nabard Assistant Manager Online Application Form 2025
• ಬಳಿಕ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಣಿ ಮಾಡಿ ಅಥವಾ ನೋಂದಣಿ, ಸಂಖ್ಯೆ ಪಾಸ್ವರ್ಡ್ ಹಾಗೂ ಭದ್ರತಾ ಕೋಡ್ ನಮೂದಿಸಿ ಲಾಗಿನ್ ಆಗಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌಗ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.