ದೇಶದ ಹಳೆಯ ಖಾಸಗಿ ವಲಯದ ಪ್ರಮುಖ ಬ್ಯಾಂಕಾಗಿರುವ ದಿ ನೈನಿತಾಲ್ ಬ್ಯಾಂಕ್ ಲಿಮಿಟೆಡ್ನಲ್ಲಿ ಕಸ್ಟಮರ್ ಸರ್ವಿಸ್ ಅಸೋಸಿಯೇಟ್ (CSA), ಪ್ರೊಬೇಷನರಿ ಅಧಿಕಾರಿ (PO) (ಸಾಮಾನ್ಯ ಮತ್ತು ವಿಶೇಷ) ಮತ್ತು ವಿಶೇಷ ಅಧಿಕಾರಿಗಳು (SO) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 185 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು 2026ರ ಜನವರಿ 01 ರೊಳಗೆ ನೈನಿತಾಲ್ ಬ್ಯಾಂಕ್ ನ ಅಧಿಕೃತ ಜಾಲತಾಣ https://www.nainitalbank.bank.in/english/recruitment.aspxದಲ್ಲಿ ಲಭ್ಯವಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾತಿಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ -ಡಿಸೆಂಬರ್ 12, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 01, 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜನವರಿ 02, 2026
- ಆನ್ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ – ಜನವರಿ 18, 2026
ಖಾಲಿ ಇರುವ ಹುದ್ದೆಗಳ ವಿವರ:
ಗ್ರಾಹಕ ಸೇವಾ ಸಹಾಯಕ (CSA) – 71 ಹುದ್ದೆಗಳು
ಪ್ರೊಬೇಷನರಿ ಅಧಿಕಾರಿಗಳು – 40 ಹುದ್ದೆಗಳು
ರಿಸ್ಕ್ ಆಫೀಸರ್ – 03 ಹುದ್ದೆಗಳು
ಚಾರ್ಟರ್ಡ್ ಅಕೌಂಟೆಂಟ್ (CA) – 03 ಹುದ್ದೆಗಳು
ಮಾಹಿತಿ ತಂತ್ರಜ್ಞಾನ (ಐಟಿ) ಅಧಿಕಾರಿ – 15 ಹುದ್ದೆಗಳು
ಕಾನೂನು ಅಧಿಕಾರಿ – 02 ಹುದ್ದೆಗಳು
ಕ್ರೆಡಿಟ್ ಆಫೀಸರ್ – 10 ಹುದ್ದೆಗಳು
ಕೃಷಿ ಕ್ಷೇತ್ರ ಅಧಿಕಾರಿ – 10 ಹುದ್ದೆಗಳು
ಮಾನವ ಸಂಪನ್ಮೂಲ ಅಧಿಕಾರಿ (HR) – 04 ಹುದ್ದೆಗಳು
ವ್ಯವಸ್ಥಾಪಕರು-ಮಾಹಿತಿ ತಂತ್ರಜ್ಞಾನ – 15 ಹುದ್ದೆಗಳು
ಮ್ಯಾನೇಜರ್ – 02 ಹುದ್ದೆಗಳು
ಮ್ಯಾನೇಜರ್-ಚಾರ್ಟರ್ಡ್ ಅಕೌಂಟೆಂಟ್ (CA) – 05 ಹುದ್ದೆಗಳು
ಮ್ಯಾನೇಜರ್- ಕಾನೂನು – 02 ಹುದ್ದೆಗಳು
ವ್ಯವಸ್ಥಾಪಕ- ಭದ್ರತಾ ಅಧಿಕಾರಿ – 03 ಹುದ್ದೆಗಳು
ಒಟ್ಟು – 185 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಪದವಿ/ಸ್ನಾತಕೋತ್ತರ ಪದವಿ/ಬಿ.ಇ/ಬಿ.ಟೆಕ್/ಚಾರ್ಟೆಡ್ ಅಕೌಂಟೆಂಟ್/ಎಲ್.ಎಲ್.ಬಿ/ಎಂಬಿಎ ಪದವಿ ಪೂರ್ಣಗೊಳಿಸಿರಬೇಕು.
ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ವಿದ್ಯಾರ್ಹತೆ ವಿವರಗಳಿಗಾಗಿ ತಪ್ಪದೆ ಸಂಪೂರ್ಣ ಅಧೀಸೂಚನೆಯನ್ನು ಓದಬೇಕು.
ವಯೋಮಿತಿ:
03-11-2025 ರಂತೆ;
✓ ಗ್ರಾಹಕ ಸೇವಾ ಸಹಾಯಕ (CSA), ಪ್ರೊಬೇಷನರಿ ಅಧಿಕಾರಿಗಳು, ರಿಸ್ಕ್ ಆಫೀಸರ್, ಚಾರ್ಟರ್ಡ್ ಅಕೌಂಟೆಂಟ್, ಮಾಹಿತಿ ತಂತ್ರಜ್ಞಾನ (ಐಟಿ) ಅಧಿಕಾರಿ, ಕಾನೂನು ಅಧಿಕಾರಿ, ಕ್ರೆಡಿಟ್ ಆಫೀಸರ್, ಕೃಷಿ ಕ್ಷೇತ್ರ ಅಧಿಕಾರಿ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ (HR) ಹುದ್ದೆಗಳಿಗೆ;
ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 32 ವರ್ಷಗಳು
✓ ವ್ಯವಸ್ಥಾಪಕರು-ಮಾಹಿತಿ ತಂತ್ರಜ್ಞಾನ, ಮ್ಯಾನೇಜರ್, ಮ್ಯಾನೇಜರ್-ಚಾರ್ಟರ್ಡ್ ಅಕೌಂಟೆಂಟ್ (CA) ಹಾಗೂ ಮ್ಯಾನೇಜರ್- (ಕಾನೂನು) ಹುದ್ದೆಗಳಿಗೆ;
ಕನಿಷ್ಠ ವಯಸ್ಸಿನ ಮಿತಿ – 25 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು
✓ ವ್ಯವಸ್ಥಾಪಕ- ಭದ್ರತಾ ಅಧಿಕಾರಿ ಹುದ್ದೆಗಳಿಗೆ;
ಗರಿಷ್ಠ ವಯಸ್ಸಿನ ಮಿತಿ – 45 ವರ್ಷಗಳು
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ವೈಯಕ್ತಿಕ ಸಂದರ್ಶನ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ 24050ರೂ. ಗಳಿಂದ 93960ರೂ. ವರೆಗೆ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಕಸ್ಟಮರ್ ಸರ್ವಿಸ್ ಅಸೋಸಿಯೇಟ್ (CSA) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ – 1000ರೂ.
ಪ್ರೊಬೇಷನರಿ ಆಫೀಸರ್ (PO) ಮತ್ತು ವಿಶೇಷ ಅಧಿಕಾರಿಗಳ (SO) ಅಭ್ಯರ್ಥಿಗಳಿಗೆ – 1500ರೂ.
ಅರ್ಜಿ ಸಲ್ಲಿಸುವ ಸುಲಭ ವಿಧಾನ ಇಲ್ಲಿದೆ;
• ಮೊದಲಿಗೆ ನೈನಿತಾಲ್ ಬ್ಯಾಂಕ್ ನ ಅಧಿಕೃತ ಜಾಲತಾಣ https://www.nainitalbank.bank.in/english/recruitment.aspxಕ್ಕೆ ಭೇಟಿ ನೀಡಿ.
• ಪ್ರಸ್ತುತ ತೆರೆಯುವಿಕೆಗಳು ವಿಭಾಗದ ಕೆಳಗೆ ನೀಡಲಾಗಿರುವ “ಗ್ರಾಹಕ ಸೇವಾ ಸಹವರ್ತಿ (CSA), ಪ್ರೊಬೇಷನರಿ ಅಧಿಕಾರಿ (ಜನರಲಿಸ್ಟ್ ಮತ್ತು ಸ್ಪೆಷಲಿಸ್ಟ್) ಹುದ್ದೆಗಳಿಗೆ ಅಧಿಸೂಚನೆ” ಅರ್ಜಿ ನಮೂನೆ ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಈಗಾಗಲೇ ನೋಂದಾಯಿಸಿದ್ದಲ್ಲಿ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ ವಿವರ, ನಮೂದಿಸಿ, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಿ.
• ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | www.nainitalbank.bank.in |
| More Updates | KarnatakaHelp.in |



