WhatsApp Channel Join Now
Telegram Group Join Now

Navy SSC Executive IT Officer Recruitment 2024: ನೌಕಾಪಡೆಯ ಎಕ್ಸಿಕ್ಯೂಟಿವ್ ಐಟಿ ಅಧಿಕಾರಿ ಹುದ್ದೆಗಳ ನೇಮಕಾತಿ

Navy SSC Executive IT Officer Recruitment 2024: ಭಾರತೀಯ ನೌಕಾಪಡೆಯಲ್ಲಿ SSC IT ಅಧಿಕಾರಿಗಳ ಹುದ್ದೆಗೆ ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಭಾರತೀಯ ನೌಕಾಪಡೆಯು SSC ಆಫೀಸರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಒಟ್ಟು 18 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು MCA ಜೊತೆಗೆ BCA/ B.Sc ಪದವಿಯಲ್ಲಿ ಶೇಕಡ 60ರಷ್ಟು ಅಂಕಗಳೊಂದಿಗೆ ಪಾಸ್ ಮಾಡಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

Navy Ssc Executive It Officer Recruitment 2024
Navy Ssc Executive It Officer Recruitment 2024

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಭಾರತೀಯ ನೌಕಾಪಡೆಯ ಅಧಿಕೃತ www.joinindiannavy.gov.in ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ Navy SSC Executive IT Officer Recruitment 2024 ನೇಮಕಾತಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of Navy SSC Executive IT Officer Recruitment 2024

Organization Name – Indian Navy
Post Name – Navy SSC Executive (IT) Officer
Total Vacancy – 18
Application Process: Online
Job Location – All Over India

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಆಗಸ್ಟ್ 2, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 16, 2024

ವಿದ್ಯಾರ್ಹತೆ:

M.Sc./ BE/BTech./ M.Tech (ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್/ ಕಂಪ್ಯೂಟರ್ ಇಂಜಿನಿಯರಿಂಗ್/ ಮಾಹಿತಿ ತಂತ್ರಜ್ಞಾನ/ ಸಾಫ್ಟ್‌ವೇರ್ ಸಿಸ್ಟಮ್ಸ್/ ಸೈಬರ್ ಸೆಕ್ಯುರಿಟಿ/ ಸಿಸ್ಟಮ್ ಅಡ್ಮಿನಿಸ್ಟ್ರೇಷನ್ & ನೆಟ್‌ವರ್ಕಿಂಗ್/ ಕಂಪ್ಯೂಟರ್ ಸಿಸ್ಟಮ್ಸ್ & ನೆಟ್‌ವರ್ಕಿಂಗ್/ ಡೇಟಾ ಅನಾಲಿಟಿಕ್ಸ್/ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್),

ಅಥವಾ

MCA ಜೊತೆಗೆ BCA/ B.Sc. (ಕಂಪ್ಯೂಟರ್ ಸೈನ್ಸ್/ಮಾಹಿತಿ ತಂತ್ರಜ್ಞಾನ)

ವಯಸ್ಸಿನ ಮಿತಿ:

  • ಕನಿಷ್ಠ ವಯಸ್ಸು : 19 ವರ್ಷಗಳು
  • ಗರಿಷ್ಠ ವಯಸ್ಸು : 24 ವರ್ಷಗಳು

ಆಯ್ಕೆ ಪ್ರಕ್ರಿಯೆ:

  • ಶಾರ್ಟ್‌ಲಿಸ್ಟಿಂಗ್: ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ಅರ್ಹತೆಗಳು ಮತ್ತು ಇತರ ಮಾನದಂಡಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
  • ಸಂದರ್ಶನ: ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸೇವೆಗಳ ಆಯ್ಕೆ ಮಂಡಳಿ (SSB) ಸಂದರ್ಶನಕ್ಕೆ ಕರೆಯಲಾಗುವುದು, ಇದರಲ್ಲಿ ಮಾನಸಿಕ ಪರೀಕ್ಷೆಗಳು, ಗುಂಪು ಕಾರ್ಯಗಳು ಮತ್ತು ವೈಯಕ್ತಿಕ ಸಂದರ್ಶನಗಳನ್ನು ನಡೆಸಲಾಗುತ್ತದೆ.
  • ವೈದ್ಯಕೀಯ ಪರೀಕ್ಷೆ: SSB ಸಂದರ್ಶನದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ.
  • ಅಂತಿಮ ಮೆರಿಟ್ ಪಟ್ಟಿ: ಆಯ್ಕೆಯು SSB ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಅಂತಿಮ ಮೆರಿಟ್ ಪಟ್ಟಿಯಲ್ಲಿ ಪ್ರಕಟಿಸಲಾಗುತ್ತದೆ.

ಅರ್ಜಿ ಶುಲ್ಕ:

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

Also Read: IBPS PO Notification 2024(OUT): ವಿವಿಧ ಬ್ಯಾಂಕ್ ಗಳಲ್ಲಿ ಬೃಹತ್ ಉದ್ಯೋಗಾವಕಾಶ

How to Apply for Navy SSC Executive IT Officer Recruitment 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ

  • ಮೊದಲಿಗೆ joinindiannavy.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ NEWS ವಿಭಾಗದಲ್ಲಿ Navy SSC Executive IT Officer Recruitment 2024 “Apply online” ಲಿಂಕ್ ಅನ್ನು ಕ್ಲಿಕ್ ಮಾಡಿ, ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  • ನಂತರ ಲಾಗಿನ್ ಮಾಡಿ ಮತ್ತು ನೌಕಾಪಡೆಯ SSC IT ಅಧಿಕಾರಿ ಆನ್‌ಲೈನ್ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ .
  • ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ನಮೂನೆಯನ್ನು ಸಲ್ಲಿಸಿ.

Important Direct Links:

SSC (IT) Entry Jan 2025 Official Notification PDF(Dated on 02/08/2024)Download
Official Short Notification PDFDownload
Online Application form LinkLogin
_________
Register
Official WebsiteJoin Indian Navy
More UpdatesKarnataka Help.in

Leave a Comment