Indian Navy SSR Medical Assistant Recruitment 2024
ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಮೆಡಿಕಲ್ ಬ್ರ್ಯಾಂಚ್‌ನಲ್ಲಿ ಮೆಡಿಕಲ್ ಅಸಿಸ್ಟಂಟ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಭಾರತೀಯ ನೌಕಾಪಡೆಯು ಮೆಡಿಕಲ್ ಬ್ರ್ಯಾಂಚ್‌ನಲ್ಲಿ ಮೆಡಿಕಲ್ ಅಸಿಸ್ಟಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಅಹ್ವಾನಿಸಲಾಗಿದೆ. ಹುದ್ದೆಗಳನ್ನು 2024 ರ ನವೆಂಬರ್ ಬ್ಯಾಚ್‌ನಲ್ಲಿ ನೇಮಕ ಮಾಡಲಿದೆ. 10+2 ನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಬಯೋಲಜಿ (ಪಿಸಿಬಿ) ವಿಷಯಗಳಲ್ಲಿ, ಶೇಕಡ.50 ಅಂಕಗಳೊಂದಿಗೆ ಪಾಸ್ ಮಾಡಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರು ಗಳಿಸಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಐಎನ್‌ಎಸ್ ಚಿಲ್ಕಾ, ಒಡಿಶಾದಲ್ಲಿ ಪ್ರೊಫೇಶನಲ್ ಟ್ರೈನಿಂಗ್ ನೀಡಲಾಗುತ್ತದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳ Indian Navy SSR Medical Assistant Recruitment 2024 ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ www.joinindiannavy.gov.in ಗೆ ಭೇಟಿ ನೀಡಿ, ಸೆಪ್ಟೆಂಬರ್ 17 ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ Indian Navy SSR Medical Assistant Vacancy 2024ರ ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.
Indian Navy Ssr Medical Assistant Recruitment 2024
Shortview of Indian Navy SSR Medical Assistant Notification 2024
Organization Name: Indian Navy Post Name: Medical Assistant Application Process: Online Job Location: All over India
ನೇಮಕಾತಿಯ ಪ್ರಮುಖ ದಿನಾಂಕಗಳು:
ಆನ್‌ಲೈನ್ ಮೂಲಕ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: ಸೆಪ್ಟೆಂಬರ್ 07, 2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಸೆಪ್ಟೆಂಬರ್ 17, 2024
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸರ್ಕಾರದಿಂದ ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ 10+2 ನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಬಯೋಲಜಿ (ಪಿಸಿಬಿ) ವಿಷಯಗಳಲ್ಲಿ, ಶೇಕಡ.50 ಅಂಕಗಳೊಂದಿಗೆ ಪಡೆದಿರಬೇಕು.
ಮತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಎತ್ತರ ಕನಿಷ್ಠ 157 ಸೆ.ಮೀ ಕಡ್ಡಾಯವಾಗಿ ಹೊಂದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ 01-11-2003 ಮತ್ತು 30-04-2007ರ ನಡುವೆ ಇರಬೇಕು
ವೇತನ ಶ್ರೀಣಿ:
ಆಯ್ಕೆಯಾದವರಿಗೆ ಮೊದಲು ತರಬೇತಿ ನೀಡಲಾಗುತ್ತದೆ. ನಂತರ ಹುದ್ದೆಗೆ ಲೆವೆಲ್ 8 ಡಿಫೆನ್ಸ್ ಪೇ ಮೆಟ್ರಿಕ್ಸ್ ರೂ.47,600-1,51,100 ವರೆಗೆ ವೇತನ ಇರುತ್ತದೆ.
ಇತರೆ ವಿಶೇಷ ಭತ್ಯೆಗಳು, ಇನ್ಸುರೆನ್ಸ್ ಸೌಲಭ್ಯಗಳು ಇರುತ್ತವೆ.
ಆಯ್ಕೆ ಪ್ರಕ್ರಿಯೆ:
ಮೆರಿಟ್ ಪಟ್ಟಿ
ದೈಹಿಕ ಪರೀಕ್ಷೆ
ಲಿಖಿತ ಪರೀಕ್ಷೆ
ವೈದ್ಯಕೀಯ ಪರೀಕ್ಷೆ
How to Apply for Navy SSR Medical Assistant Recruitment 2024
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ…?
ಮೊದಲಿಗೆ ಅಧಿಕೃತ ವೆಬ್ ಸೈಟ್ www.joinindiannavy.gov.in ಗೆ ಭೇಟಿ.
ಮುಖಪುಟದಲ್ಲಿ ಕಾಣುವ Navy SSR Medical Assistant ನಲ್ಲಿ Apply online ಲಿಂಕ್ ಕ್ಲಿಕ್ ಮಾಡಿ.
ಲಾಗಿನ್ ವಿವರಗಳನ್ನು ನಮೂದಿಸಿ ಖಾತೆಯನ್ನು ರಚಿಸಿ.
ನಂತರ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ ಮತ್ತು ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಿ.