ರಾಷ್ಟ್ರೀಯ ಪರೀಕ್ಷಾ ಮಂಡಳಿ (NBE) NEET PG 2024 ಪ್ರವೇಶ ಪತ್ರವನ್ನು ಆಗಸ್ಟ್ 8, 2024 ರಂದು ಬಿಡುಗಡೆ ಮಾಡಿದೆ. ಆಗಸ್ಟ್ 11 ರಂದು ನಡೆಯಲಿರುವ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು NBE ಅಧಿಕೃತ ವೆಬ್‌ಸೈಟ್ natboard.edu.in ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ನೊಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಸಹಾಯದಿಂದ ಲಾಗಿನ್ ಮಾಡಿ ಪ್ರವೇಶ ಪತ್ರ ಪಡೆದುಕೊಳ್ಳಬಹುದು. ಈ ಲೇಖನದಲ್ಲಿ ನಾವು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುವುದರ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ.
How to Download NEET PG Admit Card 2024?
ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
- NBE ಅಧಿಕೃತ ವೆಬ್‌ಸೈಟ್ natboard.edu.in ಗೆ ಭೇಟಿ ನೀಡಿ.
- ‘NEET-PG’ ಟ್ಯಾಬ್ ಕ್ಲಿಕ್ ಮಾಡಿ.
- ‘ಅರ್ಜಿ’ ಲಿಂಕ್ ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
- ‘ಸಲ್ಲಿಸು’ ಕ್ಲಿಕ್ ಮಾಡಿ.
- ನಿಮ್ಮ ಪ್ರವೇಶ ಪತ್ರ ಪರದೆಯ ಮೇಲೆ ಪ್ರದರ್ಶನಗೊಳ್ಳುತ್ತದೆ.
- ಪ್ರವೇಶ ಪತ್ರದ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ಮಾಡಿ.
ಪ್ರವೇಶ ಪತ್ರದಲ್ಲಿನ ಪ್ರಮುಖ ವಿವರಗಳು:
- ಅಭ್ಯರ್ಥಿಯ ಹೆಸರು
- ರೋಲ್ ನಂಬರ್
- ನೋಂದಣಿ ಸಂಖ್ಯೆ
- ಫೋಟೋ
- ಪರೀಕ್ಷಾ ಕೇಂದ್ರದ ವಿವರಗಳು
- ಪರೀಕ್ಷಾ ಸಮಯ
ಪ್ರಮುಖ ಅಂಶಗಳು:
- ಪ್ರವೇಶ ಪತ್ರವು ಪರೀಕ್ಷಾ ಕೇಂದ್ರಕ್ಕೆ ಮಾನ್ಯ ದಾಖಲೆಯಾಗಿದೆ.
- ಪರೀಕ್ಷಾ ದಿನದಂದು ಪ್ರವೇಶ ಪತ್ರ ಮತ್ತು ಒಂದು ಐಡಿ ಪುರಾವೆಯನ್ನು ಒಟ್ಟಿಗೆ ತರಲು ಮರೆಯದಿರಿ.
- ಪ್ರವೇಶ ಪತ್ರದಲ್ಲಿನ ಯಾವುದೇ ದೋಷಗಳನ್ನು ತಕ್ಷಣವೇ NBE ಗೆ ತಿಳಿಸಿ.
Important Direct Links:
NEET PG Admit Card 2024 Download Link | Click Here |
NEET PG 2024 Notification | Details |
Official Website | natboard.edu.in |
More Updates | KarnatakaHelp.in |