ಭಾರತ ಸರ್ಕಾರದ ಮಹತ್ವದ ಯೋಜನೆಯಲ್ಲಿ ಒಂದಾಗಿರುವ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ “ರಾಷ್ಟ್ರೀಯ ಜಾನುವಾರು ಮಿಷನ್ (NLM Scheme Karnataka 2025)” ಅನ್ನು 2014-15ನೇ ಹಣಕಾಸು ವರ್ಷದಿಂದ ಈ ಯೋಜನೆಯನ್ನು ಜಾರಿಗೆ ತಂದಿತು.
NLM EDP ಉದ್ಯಮಶೀಲ ಕಾರ್ಯಕ್ರಮದಡಿ ಗ್ರಾಮೀಣ ಕೋಳಿ ಉದ್ಯಮಶೀಲತೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಪ್ರಾರಂಭಿಸಲು ಆರ್ಥಿಕ ನೆರವು ನೀಡುವ ಮೂಲಕ ಸಹಾಕಾರ ನೀಡುತ್ತದೆ. ಈ ಮೂಲಕ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡುವುದು ಮತ್ತು ರೈತರ ಆದಾಯ ದ್ವಿಗುಣಗೊಳಿಸುವ ಸದ್ದುದೇಶದಿಂದ ಈ ಯೋಜನೆಯನ್ನು ಮಾಡಲಾಗಿದೆ.
ಗ್ರಾಮೀಣ ಕೋಳಿ ಉದ್ದಿಮೆ, ಕುರಿ-ಮೇಕೆ ತಳಿ ಸಂವರ್ಧನಾ ಘಟಕ, ಹಂದಿ ತಳಿ ಸಂವರ್ಧನಾ ಘಟಕ, ರಸಮೇವು ಉತ್ಪಾದನಾ ಘಟಕ, ಪ್ರಾರಂಭಿಸಲು ಸರ್ಕಾರದಿಂದ ಶೇಕಡಾ 50% ಸಹಾಯಧನವನ್ನು ಬ್ಯಾಂಕಿನ ಮೂಲಕ ನೀಡಲಾಗುತ್ತದೆ.
NLM Scheme Subsidy Amount Details 2025
ಉದ್ಯಮ ಘಟಕಗಳು
ಘಟಕ
ಗರಿಷ್ಠ ಸಹಾಯಧನ
ಗ್ರಾಮೀಣ ಕೋಳಿ ಸಾಕಾಣಿಕೆ ಘಟಕ
1000+100
ರೂ.25 ಲಕ್ಷ
ಕುರಿ /ಮೇಕೆ ತಳಿ ಸಂವರ್ಧನಾ ಘಟಕ
500+25
ರೂ.50 ಲಕ್ಷ
ಹಂದಿ ತಳಿ ಸಂವರ್ಧನಾ ಘಟಕ
100+10
ರೂ.30 ಲಕ್ಷ
ಮೇವು ಬಿಲ್ಲೆ/ ರಸಮೇವು ಘಟಕ
100+10
ರೂ.50 ಲಕ್ಷ
ಆಸಕ್ತ ಅರ್ಹ ಅರ್ಜಿದಾರರು ನೇರವಾಗಿ ಸರ್ಕಾರದ ಅಧಿಕೃತ ವೆಬ್ ಸೈಟ್ https://nlm.udyamimitra.in ಭೇಟಿ ನೀಡಿ, ಅಗತ್ಯ ವಿವರಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆ(Livestock insurance scheme)ಯ ಹಣವನ್ನು ಅನುಷ್ಠಾನ ಜಾರಿಗೆ ಮೂಲ ಬಂಡಾವಳದಲ್ಲಿ ಶೇ. 50ರಷ್ಟು ಸಹಾಯಧನವನ್ನು ಎರಡು ಕಂತುಗಳ ರೂಪದಲ್ಲಿ ಫಲಾನುಭವಿಗಳಿಗೆ ಒದಗಿಸಲಾಗುವುದು.
Documents Required for NLM Scheme
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು;
ವಿಸ್ತ್ರತ ಯೋಜನಾ ವರದಿ (Detailed Project Report)
ಭೂಮಿ ದಾಖಲೆ ಪಹಣಿ (RTC).
ಭೂಮಿ ಇಲ್ಲದವರು ಬಾಡಿಗೆ ಅಥವಾ ಗುತ್ತಿಗೆಗೆ ಭೂಮಿ ಪಡೆದ, ನೋಂದಾಯಿತ ಕರಾರು ಪತ್ರ.
ಆಧಾರ್ ಸಂಖ್ಯೆ, Pan Card, Voter ID
ಪ್ರಾಜೆಕ್ಟ್ ಸೈಟ್ ಜಿಪಿಎಸ್ ಫೋಟೋ.
ಬ್ಯಾಂಕ್ ಖಾತೆ ಪುಸ್ತಕದ ಪ್ರತಿ(Bank Passbook)
ತರಬೇತಿ ಪ್ರಮಾಣ ಪತ್ರ / ಅನುಭವ ಹೊಂದಿರುವ ಬಗ್ಗೆ ಪ್ರಮಾಣ ಪತ್ರ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ…?
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ www.nlm.udyamimitra.in ಭೇಟಿ ನೀಡಿ ಅರ್ಜಿ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳಿಗೆ ಸಲ್ಲಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ
ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ https://nlm.udyamimitra.in or https://ahf.karnataka.gov.in ಅಥವಾ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
I have intrested to NLM scheme please send full detials
Yes i have interested
Yes i have in intrested
I have informed NLM schem plz send full details