ಭಾರತೀಯ ಪರಮಾಣು ವಿದ್ಯುತ್ ನಿಗಮ (NPCIL) ಖಾಲಿ ಇರುವ ಕಾರ್ಯನಿರ್ವಾಹಕ ತರಬೇತಿದಾರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ನಿಗಮದಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕ ತರಬೇತಿದಾರರು ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಒಟ್ಟು 400 ಕಾರ್ಯನಿರ್ವಾಹಕ ತರಬೇತಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು NPCIL ನ ಅಧಿಕೃತ ವೆಬ್ ಸೈಟ್ npcil.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಹಾಗೂ ಇತರೆ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
Highlights Of Job News
Organization – Nuclear Power Corporation of India Limited (NPCIL)
Post Name – Executive Trainees
Total Vacancy – 400
Job Location – All India
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಏಪ್ರಿಲ್ 10 ರಿಂದ ಪ್ರಾರಂಭವಾಗಿ, ಏಪ್ರಿಲ್ 30, 2025ರಂದು ಕೊನೆಗೊಳ್ಳಲಿದೆ.
ಖಾಲಿ ಇರುವ ಹುದ್ದೆಗಳ ವಿವರ:
• ಮೆಕ್ಯಾನಿಕಲ್ – 150
• ಕೆಮಿಕಲ್ – 60
• ಎಲೆಕ್ಟ್ರಿಕಲ್ – 80
• ಎಲೆಕ್ಟ್ರಾನಿಕ್ – 45
• ಇನ್ಸ್ಟ್ರುಮೆಂಟೇಶನ್ – 20
• ಸಿವಿಲ್ – 45
ಒಟ್ಟು – 400
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮೆಕ್ಯಾನಿಕಲ್, ಕೆಮಿಕಲ್ ,ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್, ಇನ್ಸ್ಟ್ರುಮೆಂಟೇಶನ್, ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್/ ಬಿಇನಲ್ಲಿ ಕನಿಷ್ಠ 60% ಅಂಕಗಳನ್ನು ಪೂರ್ಣಗೊಳಿಸಿರಬೇಕು + GATE-2023/2024/2025 ಹೊಂದಿರಬೇಕು.
- ಮೆಕ್ಯಾನಿಕಲ್ ಹುದ್ದೆಗೆ– ಮೆಕ್ಯಾನಿಕಲ್ ಪ್ರೊಡಕ್ಷನ್
- ಕೆಮಿಕಲ್ ಹುದ್ದೆಗೆ– ಕೆಮಿಕಲ್ ಎಲೆಕ್ಟ್ರೋ-ಕೆಮಿಕಲ್ ಇಂಜಿನಿಯರಿಂಗ್
- ಎಲೆಕ್ಟ್ರಿಕಲ್ ಹುದ್ದೆಗೆ– ಎಲೆಕ್ಟ್ರಿಕಲ್ / ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್
- ಎಲೆಕ್ಟ್ರಾನಿಕ್ ಹುದ್ದೆಗೆ– ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ/ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ/ಎಲೆಕ್ಟ್ರಾನಿಕ್ಸ್ ಮತ್ತು ನಿಯಂತ್ರಣಗಳು/ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಎಂಜಿನಿಯರಿಂಗ್
- ಇನ್ಸ್ಟ್ರುಮೆಂಟೇಶನ್ ಹುದ್ದೆಗೆ – ಇನ್ಸ್ಟ್ರುಮೆಂಟೇಶನ್/ಉಪಕರಣ ಮತ್ತು ನಿಯಂತ್ರಣಗಳು/ಅಪ್ಲೈಡ್ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್ ಇಂಜಿನಿಯರ್./
ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್ - ಸಿವಿಲ್ ಹುದ್ದೆಗೆ – ಸಿವಿಲ್
ವಯೋಮಿತಿ:
30/04/2025 ರಂತೆ ವಯಸ್ಸಿನ ಮಿತಿಯು ಈ ಕೆಳಗಿನಂತಿರಬೇಕು;
- ಸಾಮಾನ್ಯ/ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ – 26 ವರ್ಷಗಳು
- ಒಬಿಸಿ (ಪುರುಷ) ಅಭ್ಯರ್ಥಿಗಳಿಗೆ – 29 ವರ್ಷಗಳು
- ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳಿಗೆ – 31 ವರ್ಷಗಳು
- ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 36 ರಿಂದ 41 ವರ್ಷಗಳು
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 31 ವರ್ಷಗಳು
ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ಪ್ರಕ್ರಿಯೆ:
- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮಾಡುವುದು
- ಸಂದರ್ಶನ
- ಅಂತಿಮ ಆಯ್ಕೆ
ಅರ್ಜಿ ಶುಲ್ಕ:
- ಸಾಮಾನ್ಯ/ ಇಡಬ್ಲ್ಯೂಎಸ್/ ಒಬಿಸಿ (ಪುರುಷ) ಅಭ್ಯರ್ಥಿಗಳಿಗೆ – 500 ರೂ
- ಎಸ್ ಸಿ/ ಎಸ್ ಟಿ/ ಪಿಡಬ್ಲ್ಯೂ ಬಿ ಡಿ/ ಮಾಜಿ ಸೈನಿಕರು/ ಮಹಿಳಾ/ NPCIL ಉದ್ಯೋಗಿಗಳಿಗೆ – ಯಾವುದೇ ಶುಲ್ಕವಿಲ್ಲ ಅರ್ಜಿ ಸಲ್ಲಿಸುವ ವಿಧಾನ ಹೇಗೆ
How to Apply for NPCIL Executive Trainee Recruitment 2025
- NPCIL ನ ಅಧಿಕೃತ ವೆಬ್ ಸೈಟ್ npcil.nic.in ಗೆ ಭೇಟಿ ನೀಡಿ.
- ಆನ್ ಲೈನ್ ಅರ್ಜಿ ಸಲ್ಲಿಸು ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಕೇಳಲಾಗುವ ಸ್ವ-ವಿವರ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಪರಿಶೀಲಿಸಿ ಸಲ್ಲಿಸಿ.
Important Direct Links:
Official Notification PDF | Download |
Online Application Form Link(From 10/04/2025) | Apply Now |
Official Website | www.npcil.nic.in |
More Updates | Karnataka Help.in |