NTA CUET UG Result 2024(OUT): ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ

Follow Us:

NTA CUET UG Result 2024: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (NTA) ಸಾಮಾನ್ಯ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ (CUET UG) ಫಲಿತಾಂಶಗಳನ್ನು ಇಂದು(ಜುಲೈ 28) ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು NTA ಅಧಿಕೃತ ವೆಬ್‌ಸೈಟ್ ಗೆ‌ ಭೇಟಿ ನೀಡಿ ಫಲಿತಾಂಶವನ್ನು ಪರಿಶೀಲಿಸಬಹುದು.

NTA ಯು ಈ ಪರೀಕ್ಷೆಗಳನ್ನು ಮೇ 15 ರಿಂದ 29 ರ ವರೆಗೆ ಹಾಗೂ 19 ಜುಲೈ 2024 ರಂದು ವಿದೇಶದಲ್ಲಿ 26 ನಗರಗಳು ಸೇರಿದಂತೆ 360 ನಗರಗಳಲ್ಲಿ 4 ಪಾಳಿಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು . ಪರೀಕ್ಷೆಯು ಅಸ್ಸಾಮಿ, ತೆಲುಗು, ಬೆಂಗಾಲಿ, ಮಲಯಾಳಂ, ಮರಾಠಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಪಂಜಾಬಿ, ಒಡಿಯಾ, ತಮಿಳು ಮತ್ತು ಉರ್ದು ಸೇರಿ ಒಟ್ಟು 13 ಭಾಷೆಗಳಲ್ಲಿ ನಡೆಸಲಾಗಿತ್ತು. CUET UG 2024 ಪರೀಕ್ಷೆಗೆ ಒಟ್ಟು 13.48 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಪರೀಕ್ಷೆಯನ್ನು ತೆಗೆದುಕೊಂಡ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ exams.nta.ac.in ನಲ್ಲಿ ಪರಿಶೀಲಿಸಬಹುದು.

Cuet Ug Result 2024
Cuet Ug Result 2024

ಅಧಿಕೃತ ವೆಬ್ ಸೈಟಿನಲ್ಲಿ ಜನ್ಮ ದಿನಾಂಕ ಮತ್ತು ನೊಂದಣಿ ಸಂಖ್ಯೆ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಲಾಗಿನ್ ಮಾಡುವ ಮೂಲಕ ಫಲಿತಾಂಶದ ವಿವರಗಳನ್ನು ಪಡೆದುಕೊಳ್ಳಬಹುದು. ಈ ಲೇಖನದಲ್ಲಿ ನಾವು ಆನ್‌ಲೈನ್ ಮೂಲಕ ಫಲಿತಾಂಶವನ್ನು ವೀಕ್ಷಿಸುವುದು ಹೇಗೆ ಎಂಬುದರ ಕುರಿತು ಮಾಹಿತಿ ತಿಳಿದುಕೊಳ್ಳೋಣ.

Also Read: ITBP Sub-Inspector(Translator)Recruitment 2024: ಇಲಾಖೆಯಲ್ಲಿ ಹಿಂದಿ ಟ್ರಾನ್ಸ್ಲೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

How to Check NTA CUET UG Result 2024

ಫಲಿತಾಂಶವನ್ನು ಹೇಗೆ ಪರಿಶೀಲಿಸುವುದು?

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://exams.nta.ac.in/CUET-UG/
  • CUET UG ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
    ಸಲ್ಲಿಸು ಬಟನ್ ಕ್ಲಿಕ್ ಮಾಡಿ.
  • ಫಲಿತಾಂಶ ಪರದೆಯ ಮೇಲೆ ತೋರಿಸುತ್ತದೆ.
  • ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

Important Direct Links:

NTA CUET UG Result 2024 Notice PDFDownload
CUET(UG)-2024 Score Card LinkClick Here
Official WebsiteNTA UGET UG
More UpdatesKarnatakaHelp.in

Leave a Comment