Pan Card 2.0 Project: ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA) ಆದಾಯ ತೆರಿಗೆ ಇಲಾಖೆಯ ಶಾಶ್ವತ ಖಾತೆ ಸಂಖ್ಯೆ (PAN) 2.0 ಯೋಜನೆಗೆ ಅನುಮೋದನೆ ನೀಡಿದೆ. ಒಟ್ಟು 78 ಕೋಟಿ PAN ಗಳು ಮತ್ತು 73.28 ಲಕ್ಷ TAN ಗಳ PAN ಬಳಕೆದಾರರ/ತೆರಿಗೆದಾರರಿದ್ದಾರೆ. ಈ ಯೋಜನೆಗೆ ಒಟ್ಟು 1,435 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಪ್ರಸ್ತುತ , PAN ಸಂಬಂಧಿತ ಸೇವೆಗಳು ಮೂರು ವಿಭಿನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ: ಇ-ಫೈಲಿಂಗ್ ಪೋರ್ಟಲ್ , UTIITSL ಪೋರ್ಟಲ್ ಮತ್ತು ಪ್ರೊಟೀಜ್ ಇ-ಗೌವ್ ಪೋರ್ಟಲ್ ಈ ಎಲ್ಲಾ ಸೇವೆಗಳನ್ನು ಒಂದೇ ಪೋರ್ಟಲ್ ನಲ್ಲಿ ಲಭ್ಯವಾಗಲಿದೆ. ಇತ್ತೀಚಿನ ತಂತ್ರಜ್ಞಾನ ಬಳಸಿ ಹೊಸ ಪಾನ್ ಕಾರ್ಡ್ ಅರ್ಜಿ ಸಲ್ಲಿಸುವಿಕೆ, ತಿದ್ದುಪಡಿಗಳು , ಆಧಾರ್-ಪ್ಯಾನ್ ಲಿಂಕ್ ಮಾಡುವಿಕೆ ಮುಂತಾದ ಸೇವೆಗಳು ಸಮಯ ವಿಳಂಬವಿಲ್ಲದೆ ಕಾರ್ಯವನ್ನು ಸುಧಾರಿಸಲು ಈ ಯೋಜನೆಯನ್ನು ಕೈಗೊಳ್ಳಾಗಿದೆ.
ಬಳಕೆದಾರರಿಗೆ ಪ್ರವೇಶವನ್ನು ಸುಲಭಗೊಳಿಸಲು ಎಲ್ಲಾ PAN/TAN-ಸಂಬಂಧಿತ ಸೇವೆಗಳಿಗೆ ಒಂದೇ ವೆಬ್ ಪೋರ್ಟಲ್.
ಕಾಗದದ ಕೆಲಸವನ್ನು ಕಡಿಮೆ ಮಾಡಲು ಪರಿಸರ ಸ್ನೇಹಿ ಕಾಗದರಹಿತ ಪ್ರಕ್ರಿಯೆಗಳು.
ತ್ವರಿತ ಪ್ರಕ್ರಿಯೆಯೊಂದಿಗೆ ಪ್ಯಾನ್ ಅನ್ನು ಉಚಿತವಾಗಿ ನೀಡುವುದು.
PAN ಡೇಟಾ ವಾಲ್ಟ್ ಸೇರಿದಂತೆ ಸುಧಾರಿತ ಭದ್ರತಾ ಕ್ರಮಗಳ ಮೂಲಕ ವೈಯಕ್ತಿಕ ಮತ್ತು ಜನಸಂಖ್ಯಾ ಡೇಟಾವನ್ನು ರಕ್ಷಣೆ.
ಬಳಕೆದಾರರ ಪ್ರಶ್ನೆಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮೀಸಲಾದ ಕಾಲ್ ಸೆಂಟರ್ ಮತ್ತು ಹೆಲ್ಪ್‌ಡೆಸ್ಕ್.
ಈಗಾಗಲೇ ಪ್ಯಾನ್ ಕಾರ್ಡ್ ಹೊಂದಿರುವವರು ಹೊಸ PAN 2.0 ಕಾರ್ಡ್ ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕೇ? ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಪ್ರಕಟಣೆಯಲ್ಲಿ ತಿಳಿಸಿದ ಪ್ರಕಾರ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅದು ಸ್ವಯಂ ನವೀಕರಣವಾಗಲಿದೆ ಎಂದು ತಿಳಿಸಿದೆ.