PM Awas Yojana 2025: ನಮಸ್ಕಾರ ಬಂಧುಗಳೇ, ಇಂದು ನಾವು “ಪ್ರಧಾನ ಮಂತ್ರಿ ಆವಾಸ್ ಯೋಜನೆ” ಬಗ್ಗೆ ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ, ಅರ್ಜಿ ಸಲ್ಲಿಕೆ ತ್ವರಿತ ಲಿಂಕ್ ಗಳನ್ನು ಲೇಖನದ ಕೊನೆಯಲ್ಲಿ ನೀಡಲಾಗಿದೆ ಅಲ್ಲಿ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಿ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಗ್ಗೆ ತಿಳಿಯಲು ಲೇಖನವನ್ನ ಕೊನೆವರೆಗೂ ಓದಿ.
ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ಕಷ್ಟಪಡುವುದು ಒಂದು ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು. ಅದಕ್ಕಾಗಿ ಇಡೀ ಜೀವನ ಕಷ್ಟಪಡುತ್ತಾರೆ. ಆದರೆ ಹಲವಾರು ಕಾರಣಗಳಿಂದ ಎಲ್ಲರಿಂದಲೂ ಸ್ವಂತ ಮನೆ ಕಟ್ಟಿಕೊಳ್ಳಲು ಸಾಧ್ಯ ಆಗುವುದಿಲ್ಲ. ಕೆಲವರು ಹೋಮ್ ಲೋನ್ ಪಡೆದು ಮನೆ ಕಟ್ಟಿಕೊಂಡರೆ ಇನ್ನು ಕೆಲವರು ಜೀವನ ಪರ್ಯಂತ ಬಾಡಿಗೆ ಮನೆಯಲ್ಲಿಯೇ ಉಳಿದುಬಿಡುತ್ತಾರೆ. ಆ ಪರಿಸ್ಥಿತಿಯಲ್ಲಿ ಇರುವ ಜನರಿಗಾಗಿ ತಮಗಾಗಿ ಸ್ವಂತ ಮನೆ ಕಟ್ಟಿಕೊಳ್ಳಲು ಕೇಂದ್ರ ಸರ್ಕಾರವು ಸರ್ಕಾರ ಸಹಾಯ ಮಾಡುತ್ತದೆ. ಈ ಯೋಜನೆಯ ಸಂಪೂರ್ಣ ಮಾಹಿತಿಯು ಇಲ್ಲಿದೆ.
PM Awas Yojana Online Online Application 2025
ಪ್ರಧಾನ ಮಂತ್ರಿ ಆವಾಸ್ ಯೋಜನೆ: ಸಮಾಜದಲ್ಲಿ ದುರ್ಬಲ ವರ್ಗದವರಿಗೆ ಸೌಲಭ್ಯ ಕಲ್ಪಿಸಲು ಹಾಗೂ ಭಾರತದ ಪ್ರತಿ ಕುಟುಂಬಕ್ಕೂ ಸೂರು ಕಲ್ಪಿಸುವ ಕೇಂದ್ರ ಸರ್ಕಾರವು ನೂತನ ಯೋಜನೆಯನ್ನು ಜಾರಿಗೊಳಿಸಿದೆ ಈ ನಿಟ್ಟಿನಲ್ಲಿ ದುರ್ಬಲ ವರ್ಗದವರಿಗೆ ಕೈಗೆಟಕುವ ದರದಲ್ಲಿ ವಸತಿ ಒದಗಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು 2015 ರಲ್ಲೇ ಪ್ರಾರಂಭಿಸಲಾಗಿದ್ದು ಭಾರತದ ಪ್ರತಿಯೊಬ್ಬ ನಾಗರಿಕರಿಗೂ ವಸತಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಜೂನ್ 1, 2015 ರಂದು ಜಾರಿಗೆ ತರಲಾಯಿತು ಪಿಎಂ ಆವಾಸ್ ಯೋಜನೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಮೇಲೆ ಕೇಂದ್ರೀಕರಿಸುವ ಮೂಲಕ ಭಾರತದ ವಸತಿ ಕೊರತೆಯನ್ನು ನೀಗಿಸುವ ಗುರಿಯನ್ನು ಹೊಂದಿದೆ.
PMAY ಯೋಜನೆಯಡಿ ಪ್ರಯೋಜನಗಳೇನು…?
- ಈ ಯೋಜನೆಯಡಿ ಎಲ್ಲಾ ಫಲಾನುಭವಿಗಳಿಗೆ ಕೇವಲ ವಾರ್ಷಿಕ ಶೇ. 6.50 ಬಡ್ಡಿದರದಲ್ಲಿ 20 ವರ್ಷಗಳವರೆಗೆ ವಸತಿ ಸಾಲ ನೀಡಲಾಗುತ್ತದೆ.
- ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಸಹಾಯವಾಗುವಂತೆ ನೆಲ ಮಹಡಿಯಲ್ಲಿರುವ ಮನೆಗಳನ್ನು ಮೀಸಲಿಡಲಾಗಿದೆ.
- ಗೃಹ ನಿರ್ಮಾಣ ಕಾರ್ಯದಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನ ಬಳಸಲಾಗುತ್ತದೆ.
- ಈ ಯೋಜನೆಯು ದೇಶದ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಅನ್ವಯಿಸುತ್ತದೆ. ಮೂರು ಹಂತಗಳಲ್ಲಿ ನಗರ ಪ್ರದೇಶಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ
PMAY-ಗ್ರಾಮೀಣ (PMAY-G): ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ವಸತಿ ಕಲ್ಪಿಸಲಾಗಿದೆ.
PMAY-ನಗರ (PMAY-U): ನಗರ ಪ್ರದೇಶಗಳಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ವಸತಿ ಉದ್ದೇಶಿಸಲಾಗಿದೆ.
PMAY-G ಯೋಜನೆಯಡಿ, ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಿಸಲು ಅಥವಾ ಸುಧಾರಿಸಲು ಸಹಾಯಧನಗಳಿಗೆ ಹಣಕಾಸು ನೆರವು ನೀಡಲಾಗುತ್ತದೆ. ಈ ಯೋಜನೆಯು ಮೂರು ಉಪ-ಯೋಜನೆಗಳನ್ನು ಒಳಗೊಂಡಿದೆ.
Last Date of PM Awas Scheme Karnataka(Rural) Online Application Form 2025
ಕೊನೆ ದಿನಾಂಕ – April 30, 2025
How to Apply PM Awas Yojana 2025
PMAYಗೆ ಅರ್ಜಿ ಸಲ್ಲಿಸುವುದು ಹೇಗೆ…? ವಸತಿ ನಗರಾಭಿವೃದ್ಧಿ ಸಚಿವಾಲಯವು ಈ ಯೋಜನೆಯಡಿ ಮನೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಎರಡೂ ಪುಟಗಳಲ್ಲಿ ನಿಮ್ಮ ವಿವರಗಳನ್ನು ನೀವು ನಮೂದಿಸಬೇಕಾಗುತ್ತದೆ.
- 1ನೇ ಹಂತ: ಇದಕ್ಕಾಗಿ ಮೊದಲು ಪ್ರಧಾನಮಂತ್ರಿ ಆವಾಸ್ ಯೋಜನೆ pmaymis.gov.in ಗೆ ಹೋಗಿ.
- 2ನೇ ಹಂತ: ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಆಧಾರ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ ಮುಂದಿನ ಪುಟಕ್ಕೆ ಹೋಗಿ.
- 3ನೇ ಹಂತ: ಅರ್ಜಿದಾರರು ವೈಯಕ್ತಿಕ ವಿವರಗಳನ್ನು ನಮೂದಿಸಬೇಕು. ಅವರು ಯಾವ ರಾಜ್ಯಕ್ಕೆ ಸೇರಿದವರು ಎಂಬುದನ್ನು ನಮೂದಿಸಬೇಕು. ಕುಟುಂಬದ ಮುಖ್ಯಸ್ಥ, ಅವರ ಪ್ರಸ್ತುತ ವಸತಿ ವಿಳಾಸ ಮತ್ತು ಇತರ ಪ್ರಮುಖ ವಿವರಗಳನ್ನು ಒದಗಿಸಬೇಕು.
- 4ನೇ ಹಂತ: ಸಿಟಿಜನ್ ಅಸೆಸ್‌ಮೆಂಟ್ ಡ್ರಾಪ್‌ಡೌನ್ ಅಡಿಯಲ್ಲಿ ಬೆನಿಫಿಟ್ ಅಂಡರ್ 3 ಕಾಂಪೊನೆಂಟ್‌ಗಳ ಅಡಿಯಲ್ಲಿ ಕ್ಲಿಕ್ ಮಾಡಿ.
- 5ನೇ ಹಂತ: ಆಧಾರ್ ಸಂಖ್ಯೆಯನ್ನು ಕ್ಲಿಕ್ ಮಾಡಿ ಮತ್ತು ಸಲ್ಲಿಸಿ.
- 6ನೇ ಹಂತ: ಸಂಖ್ಯೆ ಸರಿಯಾಗಿದ್ದರೆ ಅದು ಇನ್ನೊಂದು ಪುಟಕ್ಕೆ ಹೋಗುತ್ತದೆ. ಅಲ್ಲಿ ನಿಮ್ಮ ವಿವರಗಳನ್ನು ನಮೂದಿಸಬೇಕು.
ನಿಮ್ಮ ವಿವರಗಳನ್ನು ತಪ್ಪಾಗಿ ನಮೂದಿಸಿದ್ದರೆ, ನಿಮ್ಮ ಆಧಾರ್ ಸಂಖ್ಯೆ ಮತ್ತು ಅಪ್ಲಿಕೇಶನ್ ಸಂಖ್ಯೆಯ ಸಹಾಯದಿಂದ ತಿದ್ದುಪಡಿ ಮಾಡಲು ಸಾಧ್ಯವಿದೆ.
ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
Important Direct Links:
PM Awas Yojana 2025 Online Apply Link | Apply Here |
Karnataka Help Telegram Group | Join Now |
More Updates | KarnatakaHelp.in |
FAQs – PM Awas Yojana Karnataka Online Apply 2025-26
How to Apply for Pradhan Mantri Awas Yojana 2025?
Visit the official Website of pmaymis.gov.in to Apply Online
What is the Last Date of PM Awas Scheme Online Application form 2025?
April 30 2025