SSLC Result 2025 Date: ಫಲಿತಾಂಶ, ಮೇ ತಿಂಗಳಲ್ಲಿ ಪ್ರಕಟ?

Published on:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಎಸ್ ಎಸ್ ಎಲ್ ಸಿ 2025 ಪರೀಕ್ಷೆಯನ್ನು ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಡೆಸಲಾಗಿತ್ತು. ಪ್ರಸ್ತುತ ಪರೀಕ್ಷೆಯ ಮೌಲ್ಯಮಾಪನವು ಇಂದಿನಿಂದ ಪ್ರಾರಂಭಗೊಂಡಿದೆ. ಫಲಿತಾಂಶದ ಪ್ರಮುಖ ದಿನಾಂಕ(SSLC Result 2025 Date) ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

ಪ್ರಸ್ತುತ ಎಸ್ ಎಸ್ ಎಲ್ ಸಿ ಪರೀಕ್ಷೆ ಮೌಲ್ಯಮಾಪನ ಕಾರ್ಯವು ಏಪ್ರಿಲ್ 15ರಿಂದ ಶುರುವಾಗಲಿದ್ದು, ಫಲಿತಾಂಶವನ್ನು ಬಹುತೇಕ ಮೇ ತಿಂಗಳ ಎರಡನೇ ವಾರದಲ್ಲಿ ನಿರೀಕ್ಷಿಸಬಹುದು. ಫಲಿತಾಂಶ ಬಿಡುಗಡೆ ಮಾಡುವ ಅಧಿಕೃತ ದಿನಾಂಕ ಹಾಗೂ ಸಮಯವನ್ನು ಮಂಡಳಿಯು ಇನ್ನು ತಿಳಿಸಿರುವುದಿಲ್ಲ.

ವಿದ್ಯಾರ್ಥಿಗಳು ವೆಬ್ ಸೈಟ್ https://karresults.nic.in/ ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು ಹಾಗೂ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಮಂಡಳಿಯಿಂದ ಪ್ರತ್ಯೇಕವಾಗಿ ನೀಡಲಾಗುತ್ತದೆ.

ಪರೀಕ್ಷೆ – 2 ವೇಳಾಪಟ್ಟಿ

ಎಸ್ ಎಸ್ ಎಲ್ ಸಿ ಫಲಿತಾಂಶದ ನಂತರ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ-2 ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆ – 3 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಬಹು ಪ್ರಯತ್ನಗಳನ್ನು ಮಾಡಲು ಸಹಾಯವಾಗುತ್ತದೆ.

How to Check Karnataka SSLC Result 2025?

ಫಲಿತಾಂಶವನ್ನು ಈ ಕೆಳಗಿನಂತೆ ಪರಿಶೀಲನೆ ಮಾಡಬಹುದಾಗಿದೆ;

  • ಮಂಡಳಿಯ ಅಧಿಕೃತ ವೆಬ್ ಸೈಟ್ ಗಳಾದ kseab.karnataka.gov.in ಅಥವಾ karresults.nic.in ಗೆ ಭೇಟಿ ನೀಡಿ.
  • 2025 ರ ಎಸ್ ಎಸ್ ಎಲ್ ಸಿ ಪರೀಕ್ಷೆ -1 ರ ಫಲಿತಾಂಶ ಪ್ರಕಟಣೆ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಣಿ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಗಳನ್ನು ಸಲ್ಲಿಸಿ.
  • ಫಲಿತಾಂಶ ಕಾಣಸಿಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ಫಲಿತಾಂಶದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Official Websitekseab.karnataka.gov.in
More UpdatesKarnataka Help.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment