PM Internship Scheme 2025: ಇಂಟರ್ನ್ ಶಿಪ್ ಯೋಜನೆ, ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ!

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

PM Internship Scheme 2025 Registration
PM Internship Scheme 2025 Registration

ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ಯೋಜನೆ[Prime Minister Internship Scheme (PMIS)]ಯಲ್ಲಿ ಉದ್ಯೋಗ ಬಯಸುವ ಯುವಕ ಹಾಗೂ ಯುವತಿಯರಿಗೆ ಕಾರ್ಪೊರೇಟ್ ಕಂಪನಿಗಳಲ್ಲಿ ಒಂದು ವರ್ಷದ ಅವಧಿಯವರೆಗೆ ಇಂಟರ್ನ್ ಶಿಪ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಏಪ್ರಿಲ್ 15 ರವರೆಗೆ ವಿಸ್ತರಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಒಂದು ಸಮಸ್ಯೆಯಾಗಿ ಪರಿಣಮಿಸಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ಯುವ ಜನರಿಗೆ ಕೆಲಸದ ಅನುಭವ ಹಾಗೂ ಕೌಶಲ್ಯಗಳನ್ನು ಕಲಿಯಲು ಕಾರ್ಪೊರೇಟ್ ಕಂಪನಿಗಳಲ್ಲಿ ಒಂದು ವರ್ಷದ ಅವಧಿಯವರೆಗೆ ಇಂಟರ್ನ್ ಶಿಪ್ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಲಾಗಿದೆ. ಅಭ್ಯರ್ಥಿಗಳು ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ಅಧಿಕೃತ ವೆಬ್ ಸೈಟ್ pminternship.mca.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು, ವಿದ್ಯಾರ್ಹತೆ, ಪ್ರಮುಖ ದಿನಾಂಕಗಳು, ಅರ್ಹತೆ ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ವಿಮೆ(Insurance):

  • ಭಾರತ ಸರ್ಕಾರದ ವಿಮಾ ಯೋಜನೆಗಳ ಅಡಿಯಲ್ಲಿ ಪ್ರತಿಯೊಬ್ಬ ಇಂಟರ್ನ್‌ಗೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.
  • ವಿಮೆಯ ಪ್ರೀಮಿಯಂ ಮೊತ್ತವನ್ನು ಭಾರತ ಸರ್ಕಾರವು ನೀಡುತ್ತದೆ.
  • ಕಂಪನಿಯು ಇಂಟರ್ನ್‌ಗಳಿಗೆ ಹೆಚ್ಚುವರಿ ಅಪಘಾತ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.
  • ಭಾರತದ ಉನ್ನತ ಕಂಪನಿಗಳಲ್ಲಿ 12 ತಿಂಗಳ ವೃತ್ತಿ ಜೀವನದ ಅನುಭವ

ಮಾಸಿಕ ಸಹಾಯಧನ(Monthly Assistance):

ಭಾರತ ಸರ್ಕಾರದಿಂದ ₹4500 ಮತ್ತು ಕೈಗಾರಿಕೆಗಳಿಂದ ₹500 ಮಾಸಿಕ ಸಹಾಯಧನ.
ಆಕಸ್ಮಿಕ ಅಪಘಾತಗಳಿಗೆ ₹6000 ಒಂದು ಬಾರಿಯ ಅನುದಾನ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ:

ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ಯೋಜನೆಯ ಅರ್ಜಿ ಸಲ್ಲಿಕೆಯ ಅವಧಿಯನ್ನು ಏಪ್ರಿಲ್ 15ರವರೆಗೆ ವಿಸ್ತರಿಸಲಾಗಿದೆ.

ಶೈಕ್ಷಣಿಕ ಅರ್ಹತೆ:

  • ಹತ್ತನೇ ತರಗತಿ
  • ಪಿಯುಸಿ
  • ಐಟಿಐ
  • ಪದವಿ
  • ಸ್ನಾತಕೋತ್ತರ ಪದವಿ
  • ಎಂಜಿನಿಯರಿಂಗ್ ಇತ್ಯಾದಿ ಉನ್ನತ ಶಿಕ್ಷಣ ಪಡೆದವರು ಉದ್ಯೋಗಕ್ಕೆ ಅನುಗುಣವಾಗಿ ಅವಶ್ಯವಿರುವ ಶೈಕ್ಷಣಿಕ ಅರ್ಹತೆಯುಳ್ಳವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ:

ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 24 ವರ್ಷಗಳು

ಆಯ್ಕೆ ವಿಧಾನ:

ಅಭ್ಯರ್ಥಿಗಳ ಆದ್ಯತೆ ಮೇರೆಗೆ ಕಂಪನಿಗಳು ಸೂಕ್ತ ಅಭ್ಯರ್ಥಿಗೆ ಆಫರ್ ಲೆಟರ್ ಅನ್ನು ಪೋರ್ಟಲ್ ಮೂಲಕ ಕಳುಹಿಸಲಾಗುತ್ತದೆ.

How to Apply for PM Internship Scheme 2025

  • ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ಯೋಜನೆಯ ಅಧಿಕೃತ ವೆಬ್ ಸೈಟ್ https://pminternship.mca.gov.in/login/ ಗೆ ಭೇಟಿ ನೀಡಿ.
  • ಅಭ್ಯರ್ಥಿಯ ಸ್ವ- ವಿವರ ಹಾಗೂ ಶೈಕ್ಷಣಿಕ ದಾಖಲೆಯೊಂದಿಗೆ ನೊಂದಾಯಿಸಿಕೊಳ್ಳಿ.
  • ನೀವು ಕೆಲಸ ಮಾಡಲು ಬಯಸುವ ಕಂಪನಿ ಅಥವಾ ಇಲಾಖೆಯ ಹೆಸರನ್ನು ನಿಮ್ಮ ಆದ್ಯತೆ ಮೇರೆಗೆ ಆರಿಸಿಕೊಳ್ಳಿ.
  • ಕೇಳಲಾಗುವ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
  • ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಿ.

Important Direct Links:

PM Internship Scheme 2025 Registration LinkApply Now
Official Websitepminternship.mca.gov.in
More UpdatesKarnataka Help.in

What is the Last Date of PM Internship Scheme 2025 Registration?

April 15, 2025

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment