PM Kisan 16th Installment: ನಮಸ್ಕಾರ ಬಂಧುಗಳೇ, ಇಂದು ನಾವು ಪಿಎಂ ಕಿಸಾನ್ 16ನೇ ಕಂತಿನ ಹಣ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ ಸಹಾಯವಾಗಿದ್ದಲ್ಲಿ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರು ಪ್ರತಿ ಆರ್ಥಿಕ ವರ್ಷದಲ್ಲಿ 2000 ರೂಪಾಯಿಗಳನ್ನು ಮೂರು ಕಂತುಗಳಾಗಿ ಒಟ್ಟು 6000 ಸಾವಿರ ರೂಪಾಯಿಯನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
ಪಸ್ತುತ 16 ನೇ ಕಂತಿನ ಹಣವನ್ನ ಮಾನ್ಯ ಪ್ರಧಾನ ಮಂತ್ರಿಗಳು ಫೆಬ್ರವರಿ 28, 2024 ರಂದು 4:30 PM ಗೆ Yavatmal, Maharashtra ದಿಂದ ಬಿಡುಗಡೆ ಮಾಡಲಿದ್ದಾರೆ. ಫಲಾನುಭವಿ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗಲಿದೆ.
ಈ ಬಾರಿ ಪಿಎಂ-ಕಿಸಾನ್ ಸಮ್ಮಾನ್ ನಿಧಿಯ 16 ನೇ ಕಂತು 9 ಕೋಟಿಗೂ ಹೆಚ್ಚು ಫಲಾನುಭವಿ ರೈತರ ಖಾತೆಗಳಿಗೆ 21 ಸಾವಿರ ಕೋಟಿಗೂ ಹೆಚ್ಚು ನೇರ ವರ್ಗಾವಣೆಯ ಮೂಲಕ ಹಣವನ್ನ ಜಮಾ ಮಾಡಲಾಗುತ್ತದೆ.
ಇಲ್ಲಿಯವರೆಗೂ ಪಿಎಂ-ಕಿಸಾನ್ ಸಮ್ಮಾನ್ ನಿಧಿಯ ಯೋಜನೆಯಡಿಯಲ್ಲಿ ಒಟ್ಟು 3 ಲಕ್ಷ ಕೋಟಿ ಹಣವನ್ನ 11 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ನೇರ ವರ್ಗಾವಣೆಯ ಮೂಲಕ ಜಮಾ ಮಾಡಲಾಗಿದೆ ಎಂದು ಇಲಾಖೆಯು ಅಧಿಕೃತವಾಗಿ ತಿಳಿಸಿದೆ.
ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ ನಂತರ ಅರ್ಹ ಫಲಾನುಭವಿಗಳು ಅಧಿಕೃತ ವೆಬ್ ಸೈಟ್ ಅಥವಾ ನಾವು ಕೆಳಗೆ ನೀಡಲಾದ ಲಿಂಕ್ ಮೂಲಕ ನೇರ ವರ್ಗಾವಣೆಯ ಹಣ ಜಮಾವಣೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.