PM Kisan 17th Installment Date 2024: ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಹಣ ಯಾವಾಗ ಬರಲಿದೆ!

Published on:

Updated On:

ಫಾಲೋ ಮಾಡಿ
PM Kisan 17th Installment Date 2024
PM Kisan 17th Installment Date 2024

ಕೇಂದ್ರ ಸರ್ಕಾರದ ‌ವಿವಿಧ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿಗಾಗಿ ಹಣವನ್ನು ನಾಳೆ (ಜೂನ್ 18) ರಂದು (PM Kisan 17th Installment Date 2024) ರೈತರ ಖಾತೆಗೆ‌ ಬಿಡುಗಡೆ ಮಾಡಲಾಗುತ್ತದೆ. ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾದ ಮಾನ್ಯ ಶ್ರೀ ನರೇಂದ್ರ ಮೋದಿಯವರು 17 ಕಂತಿನ ಹಣ ಬಿಡುಗಡೆ ಆದೇಶಕ್ಕೆ ಈಗಾಗಲೇ ಸಹಿ ಹಾಕಿದ್ದಾರೆ. ಈ ಬಾರಿ ಒಟ್ಟು ದೇಶದ 9.3 ಕೋಟಿ ರೈತರಿಗೆ ಬರೋಬ್ಬರಿ 20,000 ಕೋಟಿ ಹಣವನ್ನು DBT ಮೂಲಕ ನೇರವಾಗಿ ಬ್ಯಾಂಕ್ ಗೆ ವರ್ಗಾವಣೆಯಾಗಲಿದೆ.. ಹಣ ನಾಳೆ (ಜೂನ್ 18) ರಂದು ಬಿಡುಗಡೆ ಮಾಡಲಿದ್ದಾರೆ.

ಕಳೆದ 16ನೇ ಕಂತನ್ನು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. PM-KISAN ಯೋಜನೆಯಡಿ, ಅರ್ಹ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳನ್ನು ಪಡೆಯುತ್ತಾರೆ, ಇದು ವಾರ್ಷಿಕವಾಗಿ 6,000 ರೂ. ಹಣವನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ನೀಡಲಾಗುತ್ತದೆ – ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment