WhatsApp Channel Join Now
Telegram Group Join Now

POWERGRID Officer Trainee Recruitment 2024: ಕಾನೂನು ಆಫೀಸರ್ ಟ್ರೈನಿ ಹುದ್ದೆಗಳ ನೇಮಕಾತಿ

ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಆಫೀಸರ್ ಟ್ರೈನಿ (ಕಾನೂನು) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

PGCIL 2024ರ ನೇಮಕಾತಿಯಲ್ಲಿ ಖಾಲಿ‌ ಇರುವ ಒಟ್ಟು 09 ಕಾನೂನು ಟ್ರೈನಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಕೇಂದ್ರ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. LLB ಪದವಿ ಪಡೆದಿರುವ ಅಭ್ಯರ್ಥಿಗಳು ಈ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು CLAT -2025 ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Powergrid Officer Trainee Recruitment 2024
Powergrid Officer Trainee Recruitment 2024

ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ಆಫೀಸರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು PGCIL ನ ಅಧಿಕೃತ ವೆಬ್‌ಸೈಟ್‌ www.powergrid.in ಭೇಟಿ‌ ನೀಡಿ ನವೆಂಬರ್ 27ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಲೇಖನ POWERGRID Officer Trainee Recruitment 2024 ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.

Shortview of PGCIL Notification 2024

Organization Name – Power Grid Corporation of India Ltd
Post Name – Officer Trainee(Law)
Total Vacancy – 09
Application Process: online
Job Location – All Over India

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ನವೆಂಬರ್ 07, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 27, 2024
  • ಅರ್ಹತ ಅಭ್ಯರ್ಥಿಗಳ ಕಟ್ ಆಫ್ ಬಿಡುಗಡೆ ದಿನಾಂಕ – ನವೆಂಬರ್ 27, 2024
  • CLAT 2025 ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 15, 2024

ವಿದ್ಯಾರ್ಹತೆ:

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಕಾನೂನು ವಿಭಾಗದಲ್ಲಿ ಪದವಿ, LLB ಪೂರ್ಣಗೊಳಿಸಿರಬೇಕು.

ವಯೋಮಿತಿ:

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 28 ವರ್ಷಗಳ ಒಳಗೆ ಇರಬೇಕು.

ವೇತನ:

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಟ್ರೈನಿ (ಕಾನೂನು) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹ ₹40,000 ರಿಂದ ₹1,60,000 ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • CLAT 2025 ಅಂಕಗಳು
  • ದಾಖಲಾತಿ ಪರಿಶೀಲನೆ
  • ಗುಂಪು ಚರ್ಚೆ
  • ವೈಯಕ್ತಿಕ ಸಂದರ್ಶನ

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳಿಗೆ: ರೂ.500/-
  • SC/ST/PwBD/Ex-SM/DEx-SM ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ನೀಡಲಾಗಿದೆ.
  • ಪಾವತಿ ವಿಧಾನ: ಆನ್‌ಲೈನ್

Also Read: EPFO Director Recruitment 2024: ಉಪ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕ ಹುದ್ದೆಗಳ ನೇಮಕಾತಿ

How to Apply for POWERGRID Officer Trainee Recruitment 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ…?

  • ಮೊದಲಿಗೆ PGCIL ಅಧಿಕೃತ ವೆಬ್ ಸೈಟ್ https://www.powergrid.in/en/job-opportunities ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ “Careers”  ವಿಭಾಗ ಆಯ್ಕೆ ಮಾಡಿ.
  • ನಂತರ ಅಲ್ಲಿ “POWERGRID Officer Trainee” ಲಿಂಕ್ ಕ್ಲಿಕ್ ಮಾಡಿ.
  • ಮತ್ತೊಂದು ವೆಬ್ ಪೇಜ್ ತೆರೆದುಕೊಳ್ಳುತ್ತದೆ, ಅರ್ಜಿ ನಮೂನೆಯಲ್ಲಿ ಕೇಳಾಳಗುವ ಎಲ್ಲಾ ವಿವಿರಗಳನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ, ಅರ್ಜಿ ಶುಲ್ಕ ಪಾವತಿಸಿ‌.
  • ಕೊನೆಯದಾಗಿ ಅರ್ಜಿಯನ್ನು‌ ಸಲ್ಲಿಸಿ, ಅರ್ಜಿಯನ್ನು ಉಳಿಸಿಕೊಳ್ಳಿ.

Important Direct Links:

Official Notification PDFDownload
Online Application Form Link (From 07/11/2024)Apply Here
Official Websitepowergrid.in
More UpdatesKarnataka Help.in

Leave a Comment