WhatsApp Channel Join Now
Telegram Group Join Now

Rajiv Gandhi Entrepreneurship Program 2024: ಪದವಿ ಪಡೆದವರಿಗೆ ಉದ್ಯಮಶೀಲತೆ ಉತ್ತೇಜಿಸಲು 25,000 ವರೆಗೂ ಸ್ಟೇಫಂಡ್; ಹೆಚ್ಚಿನ ಮಾಹಿತಿ ಇಲ್ಲಿದೆ

Rajiv Gandhi Entrepreneurship Program 2024: ರಾಜೀವ್ ಗಾಂಧಿ ಉದ್ಯಮಶೀಲತೆಯ ಕಾರ್ಯಕ್ರಮದ ಅಡಿಯಲ್ಲಿ ಪ್ರತಿಭಾವಂತ ಪದವೀಧರಲ್ಲಿ ನ್ಯೂಯತೆಯನ್ನು ಬೆಳೆಸಲು ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನವೋದ್ಯಮಗಳನ್ನು ಪ್ರೋತ್ಸಾಹಿಸುವ ಪರಿಕಲ್ಪನೆಯಲ್ಲಿ ಕರ್ನಾಟಕದಲ್ಲಿ 4 ವರ್ಷ ಅಥವಾ 4 ವರ್ಷಗಳ ಪದವಿ ( ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗ) ಪೂರ್ಣಗೊಳಿಸಿದ ವಿದ್ಯಾರ್ಥಿಗಳು ನವೋದ್ಯಮ( (ಎಂಟರ್ಪ್ರೈನರ್) ಗಳಿಗೆ ಆರಂಭಿಕ ಹಂತದ ಧನಸಹಾಯ ಕಾರ್ಯಕ್ರಮಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

Rajiv Gandhi Entrepreneurship Program 2024
Rajiv Gandhi Entrepreneurship Program 2024

ಈ ಕಾರ್ಯಕ್ರಮದಲ್ಲಿ (RGEP) ಆಯ್ಕೆಯಾದ 30 ನವೋದ್ಯಮಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದ್ದು,12 ತಿಂಗಳ ಅವಧಿಗೆ ಮಾಸಿಕ ರೂ. 25,000 ರ ಸ್ಟೈಫಂಡ್ / ಜೀವನಾಧಾರ ಅನುದಾನ ನೀಡಲಾಗುತ್ತದೆ.  ಈ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.

Important Dates

  • ಅರ್ಜಿಸಲ್ಲಿಸಲು ಪ್ರಾರಂಭದ ದಿನಾಂಕ: ಈಗಾಗಲೇ
    ಪ್ರಾರಂಭವಾಗಿದೆ.
  • ಅರ್ಜಿಸಲ್ಲಿಸಲು ಅಂತಿಮ ದಿನಾಂಕ: 13 ಆಗಸ್ಟ್ 2024 (ಸಂಜೆ 5:00)

Eligibility Criteria for Rajiv Gandhi Entrepreneurship Program 2024

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:

  • ಭಾರತದ ಪ್ರಜೆಯಾಗಿರಬೇಕು ಕರ್ನಾಟಕದ ನಿವಾಸಿ ಆಗಿರಬೇಕು.
  • 3 ಅಥವಾ 4 ವರ್ಷಗಳ ಪದವಿಯನ್ನು (ವಿಜ್ಞಾನ/ ಇಂಜಿನಿಯರಿಂಗ್) ಪೂರ್ಣಗೊಳಿಸಿದ್ದಾರೆ ಮತ್ತು 2 ವರ್ಷಗಳ ಪೂರ್ಣ ಸಮಯದ ಕೆಲಸದ ಅನುಭವವನ್ನು ಪೋಸ್ಟ್ ಪದವಿಯನ್ನು ಹೊಂದಿರಬೇಕು.
  • ಯಾವುದೇ ಖಾಸಗಿ ಅಥವಾ ಸರ್ಕಾರಿ ಕಂಪನಿಯಲ್ಲಿ ಉದ್ಯೋಗಿಯಾಗಿ (ಗುತ್ತಿಗೆ/ ಹೊರಗುತ್ತಿಗೆ/ಖಾಯಂ) ಕೆಲಸ ಮಾಡಬಾರದು.
  • ಬೇರೆ ಯಾವುದೇ ಸ್ಟಾರ್ಟ್‌ಅಪ್‌ನಲ್ಲಿ ಯಾವುದೇ ಶೇರ್ ಹೂಡಿಕೆ ಮಾಡಿರಬಾರದು.
  • ಅರ್ಜಿ ಸಲ್ಲಿಸಿದ ದಿನಾಂಕದಂದು 28 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

Also Read: Stipend to LAW Graduates 2024-25: ಕಾನೂನು ಪದವೀಧರರಿಗೆ ತಿಂಗಳಿಗೆ 5-10 ಸಾವಿರ‌ ಶಿಷ್ಯವೇತನ; ಇಲ್ಲಿದೆ ಮಾಹಿತಿ

How to Apply for Rajiv Gandhi Entrepreneurship Program 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ: https://forms.gle/tQunnE2HmMGwAa6K9 ಫೀಲಿಂಗ್ ಕ್ಲಿಕ್ ಮಾಡುವ ಮೂಲಕ ಕೇಳಲಾದ ಎಲ್ಲ ಮಾಹಿತಿಗಳನ್ನು ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ:

ಕರ್ನಾಟಕ ನಾವಿನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ
ಬಿಎಂಟಿಸಿ ಕೇಂದ್ರ ಕಟ್ಟಡ, ‘ಬಿ‌’ ಬ್ಲಾಕ್, ನಾಲ್ಕನೇ ಮಹಡಿ
ಶಾಂತಿನಗರ, ಕೆ.ಎಚ್ ರಸ್ತೆ, ಬೆಂಗಳೂರು ವಿಳಾಸಕ್ಕೆ ಸಂಪರ್ಕಿಸಬಹುದು

ದೂರವಾಣಿ ಸಂಖ್ಯೆ – 080-22231007

Important Direct Links:

Official Notification PDFDownload
Online Application Form LinkApply Here
More UpdatesKarnataka Help.in

Leave a Comment