ರೈಲ್ವೆ ಸುರಕ್ಷಾ ಪಡೆ (RPF) ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಒಂದು ಮುಖ್ಯ ಸುದ್ದಿ. ಅಭ್ಯರ್ಥಿಗಳು ಇದೀಗ ತಮ್ಮ ಫೋಟೋ ಮತ್ತು ಸಹಿಯನ್ನು ಅಪ್ಲೋಡ್(RPF Constable/ SI Photo, Sign Update) ಮಾಡಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಇದೊಂದು ಪ್ರಮುಖ ಹಂತವಾಗಿದ್ದು ಯಾವ ಅಭ್ಯರ್ಥಿಗಳು ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡುವುದಿಲ್ಲವೋ ಅಂತರ್ಜಲನ್ನು ತಿರಸ್ಕರಿಸಲಾಗುತ್ತದೆ.
ಅಭ್ಯರ್ಥಿಗಳು ತಮ್ಮ ಸಂಖ್ಯೆ ಮತ್ತು ಜನ್ಮ ದಿನಾಂಕಗಳನ್ನು ಬಳಸಿಕೊಂಡು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅಪ್ಲೋಡ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈ ನೇಮಕಾತಿಯನ್ನು ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) ರೈಲ್ವೆ ಸುರಕ್ಷಾ ಪಡೆ (RPF) ನಲ್ಲಿ ಖಾಲಿ ಇರುವ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಅರ್ಜಿ ಪ್ರಕ್ರಿಯೆಯು ಈಗ ಕೊನೆಯ ಹಂತದಲ್ಲಿದ್ದು, ಇದೀಗ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಹೆಚ್ಚಿನ ಮಾಹಿತಿಗಾಗಿ ಫೋಟೋ ಮತ್ತು ಸಹಿ ಪ್ರತಿಯನ್ನು ಅಪ್ಲೋಡ್ ಮಾಡಲು ಸೂಚಿಸಲಾಗಿದೆ.