RRB ALP CBT 2 Exam Date 2025(OUT): ಸಿ.ಬಿ.ಟಿ-2 ಪರೀಕ್ಷಾ ದಿನಾಂಕ ಪ್ರಕಟ

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

RRB ALP CBT 2 Exam Date 2025
RRB ALP CBT 2 Exam Date 2025

ರೈಲ್ವೆ ನೇಮಕಾತಿ ಮಂಡಳಿ (RRB)ಯು ಸಹಾಯಕ ಲೋಕೋ ಪೈಲಟ್‌ 18799 ಖಾಲಿ ಹುದ್ದೆಗಳನ್ನು ನೇಮಕಾತಿ ಮಾಡುವ ಸಲುವಾಗಿ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT)- 1 ಪರೀಕ್ಷೆಯನ್ನು ಮಾರ್ಚ್ 19-20 ರಂದು ನಡೆಸಲಾಗಿದ್ದು, RRB ALP CBT 1 ಫಲಿತಾಂಶದ ಘೋಷಣೆಯ ನಂತರ, ಶಾರ್ಟ್‌ ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ CBT 2 ಪರೀಕ್ಷೆಗೆ ಹಾಜರಾಗಲು ಪರೀಕ್ಷಾ ದಿನಾಂಕ(RRB ALP CBT 2 Exam Date 2025)ವನ್ನು ಪ್ರಕಟಿಸಿದೆ. RRB ALP CBT 2 ಪರೀಕ್ಷೆಯನ್ನು ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.

ರೈಲ್ವೆ ನೇಮಕಾತಿ ಮಂಡಳಿ (RRB) ಅಧಿಕೃತ ಪ್ರಕಟಣೆಯಂತೆ RRB ALP CBT 2 ಪರೀಕ್ಷೆ 2025 ಅನ್ನು ಮೇ ತಿಂಗಳ 2 ಮತ್ತು 6 ನೇ ತಾರೀಕಿನಂದು ಪ್ರತಿದಿನ ಎರಡು ಪಾಳಿಯಲ್ಲಿ ನಡೆಸಲಾಗುತ್ತದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

RRB ALP CBT 2 Exam Important Dates:

•RRB ALP CBT 2 ಪರೀಕ್ಷೆಯನ್ನು ಮೇ 2 ಮತ್ತು 6 ನೇ ತಾರೀಖಿನಂದು ನಡೆಸಲಾಗುತ್ತದೆ.

  • ಪ್ರತಿ ದಿನ ಎರಡು ಪಾಳಿಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ
  • ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ವರದಿ ಸಮಯ ಮೊದಲನೇ ಪಾಳಿಯಲ್ಲಿ ಬೆಳಿಗ್ಗೆ – 7.30
  • ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ವರದಿ ಸಮಯ ಎರಡನೇ ಪಾಳಿಯಲ್ಲಿ ಬೆಳಿಗ್ಗೆ – 12.30
  • ಪರೀಕ್ಷಾ ದಿನಾಂಕಕ್ಕೆ 4 ದಿನಗಳ ಮೊದಲು ಪರೀಕ್ಷೆ ನಡೆಯುವ ಸ್ಥಳ ಹಾಗೂ ಇತರ ವಿವರಗಳೊಂದಿಗೆ RRB ALP CBT 2 ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ

RRB ALP CBT 2 Exam Admit Card

ಪರೀಕ್ಷಾ ಪ್ರವೇಶ ಪತ್ರ: ರೈಲ್ವೆ ನೇಮಕಾತಿ ಮಂಡಳಿ (RRB) ಶ್ರೇಣಿ 1 ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ 2025 ರ ಏಪ್ರಿಲ್ 28 ರೊಳಗೆ RRB ALP CBT 2 ಪರೀಕ್ಷಾ ಪ್ರವೇಶ ಪತ್ರಗಳನ್ನು ಮರುವಿತರಿಸಲಾಗುತ್ತದೆ. ಪರೀಕ್ಷೆ ನಡೆಯುವ ದಿನಾಂಕ, ಸ್ಥಳ, ಪಾಳಿ ಹಾಗೂ ಸಮಯದ ಬಗ್ಗೆ ಇತ್ಯಾದಿ ವಿವರಗಳನ್ನು ಪ್ರವೇಶ ಪತ್ರದೊಂದಿಗೆ ಬಿಡುಗಡೆ ಮಾಡಲಾಗಿದೆ.

Important Direct Links:

RRB ALP CBT 2 Exam Date 2025 Notice PDF (Dated on 05/04/2025)Download
Official Websiteindianrailways.gov.in
More UpdatesKarnataka Help.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment