WhatsApp Channel Join Now
Telegram Group Join Now

RRB JE 2024 Application Correction Window (Open): ಸಲ್ಲಿಸಿದ ಅರ್ಜಿ ತಿದ್ದುಪಡಿ ಮಾಡಲು ಅವಕಾಶ!

ರೈಲ್ವೆ ನೇಮಕಾತಿ ಮಂಡಳಿಯು ಜೂನಿಯರ್ ಇಂಜಿನಿಯರ್ ಹುದ್ದೆಗಳ ಅರ್ಜಿ ಆಹ್ವಾನಿಸಲಾಗಿತ್ತು, ಸಲ್ಲಿಸಿರುವ ಅರ್ಜಿಗಳ ತಿದ್ದುಪಡಿ ಮಾಡಲು ವಿಂಡೋ ತೆರೆಯಲಾಗಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಇಂದಿನಿಂದ (ಅಗಸ್ಟ್ 30) ತಮ್ಮ ಅರ್ಜಿಗಳನ್ನು ಆನ್‌ಲೈನ್ ಮೂಲಕ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ರೈಲ್ವೆ ನೇಮಕಾತಿ ಮಂಡಳಿಯು ವಿವಿಧ ವಿಭಾಗದಲ್ಲಿ ಖಾಲಿ ಇರುವ ಒಟ್ಟು 7951 ಜೂನಿಯರ್ ಇಂಜಿನಿಯರಿಂಗ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಸದರಿ ನೇಮಕಾತಿಗೆ ಅರ್ಜಿ ಸಲ್ಲಿಕೆ ಸಮಯದಲ್ಲಿ ತಪ್ಪು ಮಾಹಿತಿ ಅಥವಾ ದೋಷಪೂರಿತ ವಿವರಗಳನ್ನು ನೀಡಿದ್ದರೆ ತಿದ್ದುಪಡಿ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ. ರೈಲ್ವೆ ನೇಮಕಾತಿ ಮಂಡಳಿಯು ಅರ್ಜಿ ತಿದ್ದುಪಡಿ ಮಾಡಲು ಸೆಪ್ಟೆಂಬರ್ 8 ವರೆಗೆ ಅವಕಾಶ ನೀಡಲಾಗಿದೆ. ಅರ್ಜಿಯನ್ನು ತಿದ್ದುಪಡಿ ಮಾಡವ ಅಭ್ಯರ್ಥಿಗಳು ತಿದ್ದುಪಡಿ ಶುಲ್ಕ ₹250 ಆನ್ ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ.

Rrb Je 2024 Application Form Correction Window
Rrb Je 2024 Application Form Correction Window

ಅರ್ಜಿಯನ್ನು ತಿದ್ದುಪಡಿ ಮಾಡಲು RRB ಅಧಿಕೃತ ವೆಬ್‌ಸೈಟ್ ಮೂಲಕ rrbapply.gov.inಗೆ ಭೇಟಿ ನೀಡಿ ಅಗತ್ಯ ವಿವರಗಳೊಂದಿಗೆ ಲಾಗಿನ್ ಮಾಡುವ ಮೂಲಕ ತಮ್ಮ ಅರ್ಜಿಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಈ ಲೇಖನದಲ್ಲಿ RRB JE ನೇಮಕಾತಿಗೆ ಸಂಬಂಧಿಸಿದ ಅರ್ಜಿಯನ್ನು ತಿದ್ದುಪಡಿ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ

ತಿದ್ದುಪಡಿಗೆ ನಿಗದಿಪಡಿಸಲಾಗಿರುವ ಪ್ರಮುಖ ದಿನಾಂಕಗಳು:

  • ಅರ್ಜಿಗಳನ್ನು ತಿದ್ದುಪಡಿ ಮಾಡಲು ಪ್ರಾರಂಭದ ದಿನಾಂಕ – ಅಗಸ್ಟ್ 30, 2024
  • ಅರ್ಜಿಗಳನ್ನು ತಿದ್ದುಪಡಿ ಮಾಡಲು ಕೊನೆಯ ದಿನಾಂಕ – ಸೆಪ್ಟೆಂಬರ್ 8, 2024

Step by Step Process of RRB JE Application Form Correction 2024

RRB JE 2024 ಆನ್ ಲೈನ್ ಮೂಲಕ ಅರ್ಜಿಯನ್ನು ತಿದ್ದುಪಡಿ ಮಾಡುವುದು ಹೇಗೆ…?

  • ಮೊದಲಿಗೆ ರೈಲ್ವೆ ನೇಮಕಾತಿಯ ಅಧಿಕೃತ ವೆಬ್ ಸೈಟ್ rrbapply.gov.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ನೇಮಕಾತಿ ವಿಭಾಗವನ್ನು ಕ್ಲಿಕ್ ಮಾಡಿ.
  • ನತಂರ RRB JE Recruitment 2024 correction window link ಕ್ಲಿಕ್ ಮಾಡಿ
  • ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ನೋಂದಾಯಿಸ, ಲಾಗಿನ್ ಮಾಡಿ.
  • ನಿಮ್ಮ ಅರ್ಜಿಯ ವಿವರಗಳು ತೆರೆದುಕೊಳ್ಳುತ್ತದೆ, ಅಲ್ಲಿ ಅರ್ಜಿ ನಮೂನೆಗೆ ಹೋಗಿ. ಅಗತ್ಯವಿರುವ ಬದಲಾವಣೆಗಳನ್ನು ಮಾಡಿ.
  • ತಿದ್ದುಪಡಿ ಶುಲ್ಕವನ್ನು ಪಾವತಿಸಿ.
    ಕೊನೆಯದಾಗಿ ಸಲ್ಲಿಸಿ ಮತ್ತು ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ಉಳಿಸಿಕೊಳ್ಳಿ.

Important Direct Links:

RRB JE 2024 Application Correction Window LinkEdit Here
RRB JE Recruitment 2024Details
Official Websiterrbapply.gov.in
More UpdatesKarnataka Help.in

Leave a Comment