ರೈಲ್ವೆ ನೇಮಕಾತಿ ಮಂಡಳಿಯು (RRB) CEN ಸಂಖ್ಯೆ 07/2025ರಡಿ ಅಧಿಸೂಚಿಸಲಾದ ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿಪೂರ್ವ ಹಂತದ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳ ಅರ್ಜಿ ಸ್ಥಿತಿಯನ್ನು ಫೆ.06ರಿಂದ ಪರಿಶೀಲಸಲು ಅವಕಾಶ ಕಲ್ಪಿಸಿದೆ.
ಒಟ್ಟು 3058 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚಿಸಿ ಅರ್ಜಿ ಸ್ವೀಕರಿಸಿತ್ತು. ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡಿದ್ದು, ಅರ್ಜಿ ಸ್ಥಿತಿಯನ್ನು RRB ಅಧಿಕೃತ ಜಾಲತಾಣ http://www.rrbapply.gov.in/ದಲ್ಲಿ ಬಿಡುಗಡೆ ಮಾಡಲಾಗಿದೆ. ಸದರಿ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸ್ವೀಕರಿಸಲಾಗಿದೆಯೇ ಅಥವಾ ತಿರಸ್ಕರಿಸಲಾಗಿದೆಯೇ ಎಂದು ಪರಿಶೀಲಿಸಬಹುದು.
ಅರ್ಜಿ ಸ್ಥಿತಿಯ ಕುರಿತು ಮಾಹಿತಿಯನ್ನು ಅಭ್ಯರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಗೆ SMS ಮತ್ತು ಇ-ಮೇಲ್ ಕಳುಹಿಸಲಾಗುತ್ತದೆ. ಹಾಗೂ ಎಲ್ಲಾ ಅರ್ಹ ಅಥವಾ ಸ್ವೀಕರಿಸಲ್ಪಟ್ಟ ಅಭ್ಯರ್ಥಿಗಳು ಸಂಪೂರ್ಣವಾಗಿ ತಾತ್ಕಾಲಿಕವಾಗಿರುತ್ತಾರೆ.
ಅರ್ಜಿ ಸ್ಥಿತಿ ಪರಿಶೀಲಿಸುವ ವಿಧಾನ:
• ಅಭ್ಯರ್ಥಿಗಳು RRB ಅಧಿಕೃತ ವೆಬ್ಸೈಟ್ http://www.rrbapply.gov.in/ಗೆ ಭೇಟಿ ನೀಡಿ.
• ಬಳಿಕ ಮೊಬೈಲ್ ಸಂಖ್ಯೆ/ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• “CEN ಸಂಖ್ಯೆ 07/2025 ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿಪೂರ್ವ ಹಂತದ ವಿವಿಧ ಹುದ್ದೆಗಳ ಅರ್ಜಿ ಸ್ಥಿತಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ನಿಮ್ಮ ಅರ್ಜಿ ಸ್ಥಿತಿ ಪರದೆಯ ಮೇಲೆ ಕಾಣಿಸುತ್ತದೆ.
• ಅಭ್ಯರ್ಥಿಗಳು ತಮ್ಮ ಅರ್ಜಿಗಳು ಅರ್ಜಿಗಳನ್ನು ಸ್ವೀಕರಿಸಲಾಗಿದೆಯೇ ಅಥವಾ ತಿರಸ್ಕರಿಸಲಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ: ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಸಹಾಯವಾಣಿ ಸಂಖ್ಯೆ – 9592-001-188, 0172-565-3333 ಅಥವಾ RRB ಇ-ಮೇಲ್ ಐಡಿ rrb.help@csc.gov.in ಅನ್ನು ಸಂಪರ್ಕಿಸಬಹುದು.
Important Direct Links:
RRB NTPC Under Graduate level 2026 Application Status Check Link
ಕೊಪ್ಪಳ ತಾಲೂಕು
ಕೊಪ್ಪಳ ಜಿಲ್ಲಾ ಬೆಟಿಗೇರಿ
Need job
I need the job how to apply that
Rrb
Kalaburagi Karnataka