ಬ್ಯಾಂಕುಗಳ ಬ್ಯಾಂಕಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್(RBI) ವಿವಿಧ ಗ್ರೇಡ್ “ಎ”, “ಬಿ” ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಅರ್ಜಿ ಸಲ್ಲಿಕೆ ಫೆ.6ರಿಂದ ಆರಂಭವಾಗಿದೆ.
ಕಾನೂನು ಅಧಿಕಾರಿ ಮತ್ತು ವಿವಿಧ ವೃಂದದ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಹುದ್ದೆಗಳು ಸೇರಿದಂತೆ ಒಟ್ಟು 21 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಫೆ.26ರೊಳಗೆ IBPS ಅಧಿಕೃತ ಜಾಲತಾಣದ ಲಿಂಕ್(https://ibpsreg.ibps.in/rbijan26/) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಫೆಬ್ರವರಿ 06, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 26, 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಫೆಬ್ರವರಿ 26, 2026
- ಆನ್‌ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ – ಮಾರ್ಚ್ 14, 2026
ಶೈಕ್ಷಣಿಕ ಅರ್ಹತೆ:
✓ ಕಾನೂನು ಅಧಿಕಾರಿ ಗ್ರೇಡ್ “ಬಿ” ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕನಿಷ್ಠ 50% ಅಂಕಗಳೊಂದಿಗೆ ಕಾನೂನು ಪದವಿ ಪೂರ್ಣಗೊಳಿಸಿರಬೇಕು.
✓ ವ್ಯವಸ್ಥಾಪಕ(ಟೆಕ್ನಿಕಲ್-ಸಿವಿಲ್) ಗ್ರೇಡ್ “ಬಿ” ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.
✓ ವ್ಯವಸ್ಥಾಪಕ(ಟೆಕ್ನಿಕಲ್ – ಎಲೆಕ್ಟ್ರಿಕಲ್) ಗ್ರೇಡ್ “ಬಿ” ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ ಪದವಿ ಪೂರ್ಣಗೊಳಿಸಿರಬೇಕು.
✓ ಸಹಾಯಕ ವ್ಯವಸ್ಥಾಪಕ ಗ್ರೇಡ್ “ಎ”ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
✓ ಸಹಾಯಕ ವ್ಯವಸ್ಥಾಪಕ(ಪ್ರೋಟೋಕಾಲ್ ಅಂಡ್ ಸೆಕ್ಯೂರಿಟಿ) ಗ್ರೇಡ್ “ಎ” ಹುದ್ದೆಗೆ; ಅಭ್ಯರ್ಥಿಯು ನಿಯಮಿತ ಭೂಸೇನೆ/ನೌಕಾಪಡೆ/ವಾಯುಸೇನೆಯಲ್ಲಿ ಕನಿಷ್ಠ ಹತ್ತು ವರ್ಷಗಳ (ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳ ಸಂದರ್ಭದಲ್ಲಿ ಐದು ವರ್ಷಗಳು) ಕಮಿಷನ್ಡ್ ಸೇವೆಯನ್ನು ಹೊಂದಿರುವ ಅಧಿಕಾರಿಯಾಗಿರಬೇಕು ಮತ್ತು ಮಾನ್ಯ ಮಾಜಿ ಸೈನಿಕ ಗುರುತಿನ ಚೀಟಿಯನ್ನು ಹೊಂದಿರಬೇಕು.
ವಯೋಮಿತಿ:
ಕಾನೂನು ಅಧಿಕಾರಿ ಗ್ರೇಡ್ “ಬಿ” ಹುದ್ದೆಗಳಿಗೆ – 21-32 ವರ್ಷಗಳು
ವ್ಯವಸ್ಥಾಪಕ(ಟೆಕ್ನಿಕಲ್-ಸಿವಿಲ್) ಗ್ರೇಡ್ “ಬಿ” ಹುದ್ದೆಗಳಿಗೆ – 21-35 ವರ್ಷಗಳು
ವ್ಯವಸ್ಥಾಪಕ(ಟೆಕ್ನಿಕಲ್ – ಎಲೆಕ್ಟ್ರಿಕಲ್) ಗ್ರೇಡ್ “ಬಿ” ಹುದ್ದೆಗಳಿಗೆ – 21-35 ವರ್ಷಗಳು
ಸಹಾಯಕ ವ್ಯವಸ್ಥಾಪಕ ಗ್ರೇಡ್ “ಎ” ಹುದ್ದೆಗಳಿಗೆ – 21-30 ವರ್ಷಗಳು
ಸಹಾಯಕ ವ್ಯವಸ್ಥಾಪಕ(ಪ್ರೋಟೋಕಾಲ್ ಅಂಡ್ ಸೆಕ್ಯೂರಿಟಿ) ಗ್ರೇಡ್ “ಎ” ಹುದ್ದೆಗಳಿಗೆ – 25-40 ವರ್ಷಗಳು
ವಯೋಮಿತಿ ಸಡಿಲಿಕೆ: ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
- ಆನ್ ಲೈನ್ ಪರೀಕ್ಷೆ
- ಸಂದರ್ಶನ
ವೇತನ:
ಗ್ರೇಡ್ “ಎ” ಹುದ್ದೆಗಳಿಗೆ – ರೂ.62,500
ಗ್ರೇಡ್ “ಬಿ” ಹುದ್ದೆಗಳಿಗೆ – ರೂ.78,450
ಅರ್ಜಿ ಶುಲ್ಕ:
ಸಾಮಾನ್ಯ, ಓಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 600ರೂ. + 18% ಜಿಎಸ್‌ಟಿ
ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 100ರೂ. + 18% ಜಿಎಸ್‌ಟಿ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
• ಅಭ್ಯರ್ಥಿಗಳು IBPS ಅಧಿಕೃತ ಜಾಲತಾಣ ಲಿಂಕ್ https://ibpsreg.ibps.in/rbijan26/ಗೆ ಭೇಟಿ ನೀಡಿ.
• ಹೊಸ ಬಳಕೆದಾರರಾಗಿದ್ದಲ್ಲಿ ಹೊಸದಾಗಿ ನೋಂದಾಯಿಸಿ ಅಥವಾ ನೊಂದಣಿ ಸಂಖ್ಯೆ, ಪಾಸ್ವರ್ಡ್ ಮತ್ತು ಭದ್ರತಾ ಕೋಡ್ ನಮೂದಿಸಿ ಲಾಗಿನ್ ಆಗಿ.
• ಬಳಿಕ ಅರ್ಜಿಯಲ್ಲಿ ಕೇಳಲಾಗಿರುವ ಸ್ವ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ, ಅದನ್ನು ಸರಿಪಡಿಸಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | www.rbi.org.in |
| More Updates | KarnatakaHelp.in |
I want to get this job
Parveen
I wnat more job available in this portal
I need job how to apply that
Good opportunity useful
I want to need job please
Ajith kolar
My date of birth 10 to 2004
My education 12th pass
My father name swapa my mother name Padma
I want to work in RBI