WhatsApp Channel Join Now
Telegram Group Join Now

RRC SR Apprentice Recruitment 2024: 10th ITI ಪಾಸ್, 2,438 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ

RRC SR Apprentice Recruitment 2024: ದಕ್ಷಿಣ ರೈಲ್ವೆಯು (SR) 2024-25ನೇ ಸಾಲಿಗೆ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದು.

ಫ್ರೆಶರ್‌ ಕೆಟಗರಿ ಅಡಿಯಲ್ಲಿ ಕೊಯಂಬತೂರು, ಪೆರಂಬೂರು ಡಿವಿಷನ್‌ಗಳ ವರ್ಕ್‌ಶಾಪ್‌ ಹಾಗೂ ಹಾಸ್ಪಿಟಲ್‌ಗಳಲ್ಲಿ ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಮಾಜಿ- ಐಟಿಐ ಅಭ್ಯರ್ಥಿಗಳ ಕೆಟಗರಿ ಅಡಿಯಲ್ಲಿ ಸೇಲಂ, ಪಲಕ್ಕಾಡ್, ಪರೆಂಬೂರು, ಅರಕ್ಕೋನಂ, ಚೆನ್ನೈ ಡಿವಿಷನ್, ಅವಡಿ, ರೊಯಪುರಂ, ಪೊನ್ಮಲೈ, ಮಧುರೈ, ತಿರುಚನಾಪಲ್ಲಿ, ತಂಬರಂ, ಸೇರಿದಂತೆ ವಿವಿಧ ವರ್ಕ್‌ಶಾಪ್‌ ಹಾಗೂ ಡಿವಿಷನ್‌ಗಳಲ್ಲಿ ನೇಮಕ ಮಾಡಲಾಗುತ್ತದೆ.

Rrc Sr Apprentice Recruitment 2024
Rrc Sr Apprentice Recruitment 2024

ಈ ನೇಮಕಾತಿಯಲ್ಲಿ ಒಟ್ಟು 2,438 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬಳಸುವ ಅಭ್ಯರ್ಥಿಗಳು ದಕ್ಷಿಣ ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟಿಗೆ sr.indianrailways.gov.in ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿಯ ಸಿದ್ದಪಡಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of RRC Southern Railway (SR) Recruitment 2024

Organization Name – Railway Recruitment Cell (RRC), Southern Railway (SR)
Post Name – Apprentices
Total Vacancy – 2,438
Application Process: Online
Job Location – All Over India

ಪ್ರಮುಖ ದಿನಾಂಕಗಳು:

  • ಅಧಿಸೂಚನೆ ಬಿಡುಗಡೆಯ ದಿನಾಂಕ: 22 ಜುಲೈ 2024
  • ಆನ್‌ಲೈನ್ ಅರ್ಜಿ ಸ್ವೀಕಾರದ ಆರಂಭ ದಿನಾಂಕ: 22 ಜುಲೈ 2024
  • ಆನ್‌ಲೈನ್ ಅರ್ಜಿ ಸ್ವೀಕಾರದ ಕೊನೆಯ ದಿನಾಂಕ: 12 ಆಗಸ್ಟ್ 2024

ಖಾಲಿ ಇರುವ ಹುದ್ದೆಗಳ ವಿವರ:

  • ಸಿಗ್ನಲ್ ಮತ್ತು ದೂರಸಂಪರ್ಕ ಕಾರ್ಯಾಗಾರ / ಪೊದನೂರ್ ಕೊಯಮತ್ತೂರು – 18
  • ಕ್ಯಾರೇಜ್ ಮತ್ತು ವ್ಯಾಗನ್ ವರ್ಕ್ಸ್ ಪೆರಂಬೂರ್ – 47
    ರೈಲ್ವೆ ಆಸ್ಪತ್ರೆ / ಪೆರಂಬೂರ್ MLT – 20
  • ಸಿಗ್ನಲ್ ಮತ್ತು ದೂರಸಂಪರ್ಕ ಕಾರ್ಯಾಗಾರ / ಪೊದನೂರ್ ಕೊಯಮತ್ತೂರು – 52
  • ಪಾಲಕ್ಕಾಡ್ ವಿಭಾಗ – 285
  • ಕ್ಯಾರೇಜ್ ಮತ್ತು ವ್ಯಾಗನ್ ವರ್ಕ್ಸ್ ಪೆರಂಬೂರ್ – 350
  • ವಿದ್ಯುತ್ ಕಾರ್ಯಾಗಾರ / ಪೆರಂಬೂರ್ – 130
  • ಚೆನ್ನೈ ವಿಭಾಗ / ಸಿಬ್ಬಂದಿ ಶಾಖೆ – 24
  • ಚೆನ್ನೈ ವಿಭಾಗ ಎಲೆಕ್ಟ್ರಿಕಲ್ ರೋಲಿಂಗ್ ಸ್ಟಾಕ್ ಅವಡಿ – 65
  • ಚೆನ್ನೈ ವಿಭಾಗ ಎಲೆಕ್ಟ್ರಿಕಲ್ ರೋಲಿಂಗ್ ಸ್ಟಾಕ್ ರಾಯಪುರಂ – 30
  • ಚೆನ್ನೈ ವಿಭಾಗ ಮೆಕ್ಯಾನಿಕಲ್ ಕ್ಯಾರೇಜ್ ಮತ್ತು ವ್ಯಾಗನ್ – 250
  • ಕೇಂದ್ರ ಕಾರ್ಯಾಗಾರ ಪೊನ್ಮಲೈ – 201
  • ಮಧುರೈ ವಿಭಾಗ – 84
  • ತಿರುವನಂತಪುರಂ ವಿಭಾಗ – 145
  • ಸೇಲಂ ವಿಭಾಗ – 222
  • ಲೋಕೋ ವರ್ಕ್ಸ್ ಪೆರಂಬೂರ್ – 228
  • ಇಂಜಿನಿಯರಿಂಗ್ ಕಾರ್ಯಾಗಾರ / ಅರಕ್ಕೋಣಂ – 48
  • ಚೆನ್ನೈ ವಿಭಾಗ ಎಲೆಕ್ಟ್ರಿಕಲ್ / ರೋಲಿಂಗ್ ಸ್ಟಾಕ್ ಅರಕ್ಕೋಣಂ – 65
  • ಚೆನ್ನೈ ವಿಭಾಗ ಎಲೆಕ್ಟ್ರಿಕಲ್ ರೋಲಿಂಗ್ ಸ್ಟಾಕ್ ತಾಂಬರಂ – 55
  • ಚೆನ್ನೈ ವಿಭಾಗ ಮೆಕ್ಯಾನಿಕಲ್ ಡೀಸೆಲ್ – 22
  • ಚೆನ್ನೈ ವಿಭಾಗ ರೈಲ್ವೆ ಆಸ್ಪತ್ರೆ ಪೆರಂಬೂರ್ – 03
  • ತಿರುಚ್ಚಿರಾಪಳ್ಳಿ ವಿಭಾಗ – in

ವಿದ್ಯಾರ್ಹತೆ:

  • ಅರ್ಜಿ ಸಲ್ಲಿಸಲು ಬಯಸುವವರು 10ನೇ ತರಗತಿ / ತತ್ಸಮಾನ ವಿದ್ಯಾರ್ಹತೆ ಜೊತೆಗೆ ಐಟಿಐ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಪಾಸ್ ಮಾಡಿರಬೇಕು.
  • ವಿವಿಧ ಟ್ರೇಡ್‌ನಲ್ಲಿ ವ್ಯಾಸಂಗ ಮಾಡಿದವರು ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರ ಹೊಂದಿದ್ದಲ್ಲಿ ಅರ್ಜಿ ಸಲ್ಲಿಸಬಹುದು.
  • ಕಾರ್ಪೆಂಟರ್, ಮಷಿನಿಸ್ಟ್‌, ಪೇಂಟರ್, ಫಿಟ್ಟರ್, ವೆಲ್ಡರ್, ರೇಡಿಯಾಲಜಿ, ಎಂಎಂವಿ, ಇಲೆಕ್ಟ್ರೀಷಿಯನ್, ಟರ್ನರ್, ಅಡ್ವಾನ್ಸ್‌ಡ್ ವೆಲ್ಡರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಪಾಸ್ಸಾ, ವೈಯರ್‌ಮನ್, ಕಾರ್ಪೆಂಟರ್ ಟ್ರೇಡ್‌ಗಳಲ್ಲಿ ಐಟಿಐ ಪಾಸ್ ಮಾಡಿರಬೇಕು.

ವಯೋಮಿತಿ:

ಕನಿಷ್ಠ 15 ವರ್ಷ ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

  • OBC ಅಭ್ಯರ್ಥಿಗಳಿಗೆ – 3 ವರ್ಷಗಳು,
  • SC/ ST ಅಭ್ಯರ್ಥಿಗಳಿಗೆ – 5 ವರ್ಷಗಳು,
  • ಅಂಗವಿಕಲರಿಗೆ (PwBD) – 10 ವರ್ಷಗಳು

ಆಯ್ಕೆ ಪ್ರಕ್ರಿಯೆ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅರ್ಹತಾ ಪರೀಕ್ಷೆಗೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುವುದು. ITI ಅಪ್ರೆಂಟಿಸ್‌ಗಳಿಗೆ, 10 ನೇ ತರಗತಿಯ ಅಂಕಗಳು ಮತ್ತು ITI ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ₹100
  • SC/ST/PwD ವರ್ಗದ ಅಭ್ಯರ್ಥಿಗಳಿಗೆ – ₹00

Also Read: RRC CR Apprentice Recruitment 2024: SSLC, ITIಪಾಸ್ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿ ನೇಮಕಾತಿ

How to Apply for RRC SR Apprentice Recruitment 2024

ಅರ್ಜಿ ಸಲ್ಲಿಸುವುದು ಹೇಗೆ:

  • ದಕ್ಷಿಣ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: sr.indianrailways.gov.in
  • “ಅಪ್ರೆಂಟಿಸ್ ನೇಮಕಾತಿ 2024” ಲಿಂಕ್ ಕ್ಲಿಕ್ ಮಾಡಿ.
  • ನೋಂದಣಿ ಮಾಡಿ ಮತ್ತು ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ.
  • ಅರ್ಜಿಯನ್ನು ಒಪ್ಪಿಕೊಳ್ಳಿ ಮತ್ತು ಸಲ್ಲಿಸಿ

Important Direct Links:

Official Notification PDFDownload
Online Application LinkApply Here
Official Websitesr.indianrailways
More UpdatesKarnatakaHelp.in

Leave a Comment