ರೈಲ್ವೇ ನೇಮಕಾತಿ ಮಂಡಳಿಯು (ಆರ್‌ಆರ್‌ಸಿ), ದಕ್ಷಿಣ ರೈಲ್ವೆ ವಿಭಾಗದಲ್ಲಿ ಕ್ರೀಡಾ ಕೋಟಾದ ಅಡಿಯಲ್ಲಿ ನೇಮಾಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಪ್ರತಿಭಾವಂತ ಕ್ರೀಡಾಪಟುಗಳ ಈ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ದಕ್ಷಿಣ ರೈಲ್ವೆ ನೇಮಕಾತಿ ಮಂಡಳಿಯು ಕ್ರೀಡಾ ಕೋಟಾದ ಅಡಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳನ್ನು ಖಾಲಿ ಇರುವ ಹಂತ 1 ರಿಂದ 5ರ ವರೆಗಿನ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕ್ರೀಡಾ ಪ್ರಯೋಗ ಮತ್ತು ದೈಹಿಕ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ. ಒಟ್ಟು 67 ಹುದ್ದೆಗಳಗೆ ಅರ್ಜಿ ಅಹ್ವಾನಿಸಲಾಗಿದ್ದು, ಕೊನೆಯ ದಿನಾಂಕ ಮುಗಿಯುವ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳ RRC SR Sports Quota Recruitment 2024 ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ rrcmas.in ಗೆ ಭೇಟಿ ನೀಡಿ, ಅಕ್ಟೋಬರ್ 06 ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ RRC SR Sports Quota Vacancy 2024ರ ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.
Rrc Sr Sports Quota Vacancy 2024
Shortview of RRC SR Sports Quota Recruitment 2024
Organization Name – Railway Recruitment Cell (RRC), Southern Railway (SR) Post Name – Level- 1, 2, 3, 4, 5 Various Posts Total Vacancy – 67 Application Process: Online Job Location – All Over India
ನೇಮಕಾತಿಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಸೆಪ್ಟೆಂಬರ್ 07, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 06, 2024
ಖಾಲಿ ಇರುವ ಹುದ್ದೆಗಳ ವಿವರ:
ಹಂತ-1ರ ಹುದ್ದೆಗಳು – 46
ಹಂತ- 2 ಮತ್ತು 3 ಹುದ್ದೆಗಳು – 16
ಹಂತ- 4 ಮತ್ತು 5 ಹುದ್ದೆಗಳು – 5
ವಿದ್ಯಾರ್ಹತೆ:
ಹಂತ-1 ಹುದ್ದೆಗಳಿಗೆ – 10ನೇ ತರಗತಿ ಪಾಸ್ ಅಥವಾ ಸಂಬಧಿಸಿದ ವಿಭಾಗದಲ್ಲಿ ITI ಪೂರ್ಣಗೊಳ್ಳಿಸಿರಬೇಕು.
ಹಂತ-2 ಮತ್ತು 3ರ ಹುದ್ದೆಗಳಿಗೆ – 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು ಅಥವಾ ITI ನಲ್ಲಿ (ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್) ಪಾಸ್ ಮಾಡಿರಬೇಕು.
ಹಂತ-4 ಮತ್ತು 5 ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾಪದವಿ ಪದವಿಯನ್ನು ಹೊಂದಿರಬೇಕು.
ವಯಸ್ಸಿನ ಮಿತಿ:
ದಕ್ಷಿಣ ರೈಲ್ವೇ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವರ ವಯೋಮಿತಿಯು ಕನಿಷ್ಠ 18 ರಿಂದ ಗರಿಷ್ಠ 25 ಒಳಗೆ ಇರಬೇಕು.
ಆಯ್ಕೆ ಪ್ರಕ್ರಿಯೆ:
ಕ್ರೀಡಾ ಪ್ರಯೋಗ
ದೈಹಿಕ ಪರೀಕ್ಷೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ -₹500/-
SC/ST/PWD/ESM/ಮಹಿಳಾ ಅಭ್ಯರ್ಥಿಗಳಿಗೆ – ₹250/-
How to Apply for RRC SR Sports Quota Recruitment 2024
ಅರ್ಜಿ ಸಲ್ಲಿಸುವ ವಿಧಾನ…?
ಮೊದಲಿಗೆ ಅಧಿಕೃತ ವೆಬ್‌ಸೈಟ್ rrcmas.in ಭೇಟಿ ನೀಡಿ.
ಮುಖಪುಟದಲ್ಲಿ ಕಾಣುವ Apply online ಲಿಂಕ್ ಕ್ಲಿಕ್ ಮಾಡಿ.
ನಂತರ RRC SR Sports Quota Recruitment ಆಯ್ಕೆ ಮಾಡಿ.
ಅಗತ್ಯ ವಿವಿರಗಳೊಂದಿಗೆ ಲಾಗ್ ಇನ್ ವಿವರಗಳನ್ನು ನಮೂದಿಸಿ, ಲಾಗ್ ಇನ್ ಮಾಡಿ.
ನಂತರ ಅರ್ಜಿ ನಮೂನೆಯಲ್ಲಿ ಕೇಳಾಗುವ ಎಲ್ಲಾ ವಿವರಗಳನ್ನು ಸಲ್ಲಿಸಿ