Sainik School Kodagu Art Master and Ward Boy Notification 2025
ಸೈನಿಕ್ ಸ್ಕೂಲ್ಸ್ ಸೊಸೈಟಿಯಡಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆ ಕೊಡಗು ಸೈನಿಕ ಶಾಲೆಯಲ್ಲಿ ಆರ್ಟ್ ಮಾಸ್ಟರ್ ಹಾಗೂ ವಾರ್ಡ್ ಬಾಯ್ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.
ಆರ್ಟ್ ಮಾಸ್ಟರ್(01) ಹಾಗೂ ವಾರ್ಡ್ ಬಾಯ್(03) ಸೇರಿದಂತೆ ಒಟ್ಟು 04 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ವಾರ್ಡ್ ಬಾಯ್ ಹುದ್ದೆಗೆ ಮಹಿಳಾ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅಧಿಕೃತ ವೆಬ್ಸೈಟ್ https://sainikschoolkodagu.edu.in/ನಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಡಿ.26ರೊಳಗೆ ನಿಗದಿತ ವಿಳಾಸಕ್ಕೆ ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 26, 2025
ಶೈಕ್ಷಣಿಕ ಅರ್ಹತೆ:
✓ ಆರ್ಟ್ ಮಾಸ್ಟರ್ ಹುದ್ದೆಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಲಲಿತಕಲೆ/ಕಲೆ/ಚಿತ್ರಕಲೆ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು ಜೊತೆಗೆ ಕನಿಷ್ಠ 4 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರಬೇಕು ಅಥವಾಕಲೆ/ಚಿತ್ರಕಲೆ ವಿಶೇಷತೆಯೊಂದಿಗೆ ಲಲಿತ ಕಲೆ (ಫೈನ್ ಆರ್ಟ್) ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
✓ ವಾರ್ಡ್ ಬಾಯ್ ಹುದ್ದೆಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ/ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು (ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರಿಗೆ ಹೆಚ್ಚುವರಿ ಪ್ರಯೋಜನವಾಗಿರುತ್ತದೆ) ಹಾಗೂ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕೋರ್ಸ್ / ಯಾವುದೇ ಸರ್ಕಾರಿ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ವಯೋಮಿತಿ:
12-12-2025 ರಂತೆ;
✓ ಆರ್ಟ್ ಮಾಸ್ಟರ್ ಹುದ್ದೆಗೆ;
ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
✓ ವಾರ್ಡ್ ಬಾಯ್ ಹುದ್ದೆಗಳಿಗೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 50 ವರ್ಷಗಳು
ಆಯ್ಕೆ ವಿಧಾನ:
ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟಿಂಗ್
ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ
ಸಂದರ್ಶನ (ಅನ್ವಯಿಸಿದರೆ)
ಸಂಬಳ:
ಸದರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರ್ಟ್ ಮಾಸ್ಟರ್ ಹುದ್ದೆಗೆ – 40,000ರೂ. ಹಾಗೂ ವಾರ್ಡ್ ಬಾಯ್ ಹುದ್ದೆಗಳಿಗೆ 22,000ರೂ. ವರೆಗೆ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ- 500ರೂ. ಪ.ಜಾತಿ ಹಾಗೂ ಪ. ಪಂಗಡದ ಅಭ್ಯರ್ಥಿಗಳಿಗೆ – 350ರೂ.
ಅರ್ಜಿ ಶುಲ್ಕದ ಡಿಮ್ಯಾಂಡ್ ಡ್ರಾಫ್ಟ್ ಅನ್ನು ‘ಕೊಡಗು ಪ್ರಿನ್ಸಿಪಾಲ್ ಸೈನಿಕ್ ಸ್ಕೂಲ್’ ಕುಶಾಲನಗರ ಶಾಖೆ, ಕರ್ನಾಟಕ ಹೆಸರಿನಲ್ಲಿ ಪಾವತಿಸಬೇಕು.
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಮೇಲಿನ ಹುದ್ದೆಗಳ ಅರ್ಹತಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೈನಿಕ ಶಾಲೆಯ ಅಧಿಕೃತ ಜಾಲತಾಣ https://sainikschoolkodagu.edu.in/ ಕ್ಕೆ ಭೇಟಿ ನೀಡಿ.
• ನಂತರ IMP ಪ್ರಕಟಣೆ ವಿಭಾಗದಲ್ಲಿ ನೀಡಲಾಗಿರುವ “ಆರ್ಟ್ ಮಾಸ್ಟರ್ ಹುದ್ದೆಗೆ ಖಾಲಿ ಹುದ್ದೆ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಹುದ್ದೆಯ ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ-ವಿವರ, ಸಹಿ, ಭಾವಚಿತ್ರ, ಡಿಮ್ಯಾಂಡ್ ಡ್ರಾಫ್ಟ್, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
30ರೂ. ಮೌಲ್ಯದ ಅಂಚೆ ಚೀಟಿಗಳನ್ನು ಹೊಂದಿರುವ ಸ್ವಯಂ ವಿಳಾಸವಿರುವ ಹಾಗೂ ಲಕೋಟೆಯ ಮೇಲೆ ಆರ್ಟ್ ಮಾಸ್ಟರ್ / ವಾರ್ಡ್ ಬಾಯ್ಸ್” ಹುದ್ದೆಗೆ ಹುದ್ದೆಗಾಗಿ ಅರ್ಜಿ ಎಂದು ನಮೂದಿಸಿ.
ಈ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಡಿಸೆಂಬರ್ 26 ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: ಪ್ರಾಂಶುಪಾಲರು, ಸೈನಿಕ ಶಾಲೆ, ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ – 571232