ಕೊಡಗು ಸೈನಿಕ ಶಾಲೆಯಲ್ಲಿ ವಾರ್ಡ್ ಬಾಯ್ ಹುದ್ದೆಗಳ ನೇಮಕಾತಿ(Sainik School Kodagu Recruitment 2025)ಗೆ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾದ ಕೊಡಗು ಸೈನಿಕ ಶಾಲೆಯಲ್ಲಿ ಒಟ್ಟು 2 ವಾರ್ಡ್ ಬಾಯ್ ಹುದ್ದೆಗಳಿಗೆ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
Highlights Of Job News
Organization Name – Sainik School Kodagu
Post Name – Ward Boy
Application Process – Offline
Job Location – Kodagu
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಅಧಿಸೂಚನೆಯ ದಿನಾಂಕ – 01-04-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -09-05-2025
ಶೈಕ್ಷಣಿಕ ಅರ್ಹತೆ:
ಹತ್ತನೇ ತರಗತಿ ಉತ್ತೀರ್ಣ
ವಯೋಮಿತಿ:
ಸೈನಿಕ ಶಾಲೆ ಕೊಡಗು ಮಾನದಂಡಗಳ ಪ್ರಕಾರ.
ವೇತನ:
ವಾರ್ಡ್ ಬಾಯ್ – 22,000 ರೂ.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಕೌಶಲ್ಯ ಪರೀಕ್ಷೆ
- ಸಂದರ್ಶನ
ಅರ್ಜಿ ಶುಲ್ಕ:
- ಸಾಮಾನ್ಯ / ಓಬಿಸಿ ಅಭ್ಯರ್ಥಿಗಳಿಗೆ 500 ರೂ.
- ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 350 ರೂ.
How to Apply for Sainik School Kodagu Recruitment 2025
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ;
• ಕೊಡಗು ಸೈನಿಕ ಶಾಲೆಯ ವಾರ್ಡ್ ಬಾಯ್ ಹುದ್ದೆಯ ಅಧಿಸೂಚನೆ ಹಾಗೂ ಅರ್ಜಿ ನಮೂನೆಯನ್ನು ಇಲ್ಲಿ ಕ್ಲಿಕ್ ಮಾಡುವ ಮೂಲಕ ಮೂಲಕ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
- ಅರ್ಜಿಯಲ್ಲಿ ಕೇಳಲಾಗಿರುವ ಸ್ವ ವಿವರ ಹಾಗೂ ಶೈಕ್ಷಣಿಕ ವಿವರಗಳನ್ನು ನಮೂದಿಸಿ.
- ಶೈಕ್ಷಣಿಕ ಮತ್ತು ಅನುಭವ ಪ್ರಮಾಣಪತ್ರಗಳ ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ.
- 26 ರೂ. ಮೌಲ್ಯದ ಅಂಚೆ ಚೀಟಿಗಳನ್ನು ಹೊಂದಿರುವ ಸ್ವಯಂ ವಿಳಾಸವಿರುವ ಹಾಗೂ ಲಕೋಟೆಯ ಮೇಲೆ ವಾರ್ಡ್ ಬಾಯ್ ಹುದ್ದೆಗಾಗಿ ಅರ್ಜಿ ಎಂದು ಬರೆಯಿರಿ.
- ಈ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಮೇ 9ನೇ ತಾರೀಕಿನೊಳಗೆ ತಲುಪುವಂತೆ ಕಳುಹಿಸಿ.
ಪ್ರಾಂಶುಪಾಲರು, ಸೈನಿಕ ಶಾಲೆ, ಸೋಮವಾರಪೇಟೆ ತಾಲೂಕು ಕೊಡಗು ಜಿಲ್ಲೆ – 571232
Important Direct Links:
Official Notification PDF | Download |
Application Form PDF Link | Download |
Official Website | sainikschoolkodagu.edu.in |
More Updates | Karnataka Help.in |