ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್(ಬೆಸ್ಕಾಂ) 2025-26ನೇ ಸಾಲಿಗೆ ಅಪ್ರೆಂಟಿಸ್‌ಶಿಪ್ ಕಾಯ್ದೆಯಡಿ 520 ಪದವೀಧರ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ತರಬೇತಿ ನೀಡಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ತರಬೇತಿ ಅವಧಿಯು ಒಂದು ವರ್ಷದ್ದಾಗಿದೆ. ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ 130 ಸ್ಥಾನಗಳು, ಪದವೀಧರ ಅಪ್ರೆಂಟಿಸ್(ಎಂಜಿನಿಯರಿಂಗ್ ಹೊರತುಪಡಿಸಿ) 315 ಸ್ಥಾನಗಳು, ಡಿಪ್ಲೊಮಾ ಅಪ್ರೆಂಟಿಸ್ 75 ಸ್ಥಾನಗಳಿಗೆ ಆಯ್ಕೆ ನಡೆಯಲಿದೆ. ವಿವಿಧ ವಿಭಾಗದಲ್ಲಿ ಡಿಪ್ಲೋಮಾ ಅಥವಾ ಪದವೀಧರ ಪಡೆದಿರುವ ಅಭ್ಯರ್ಥಿಗಳು ತರಬೇತಿಗೆ ಅರ್ಹರು. ಆಸಕ್ತರು NATS ಅಧಿಕೃತ ಜಾಲತಾಣ https://nats.education.gov.in/ಕ್ಕೆ ಭೇಟಿ ನೀಡಿ, ಫೆ.12 ರಿಂದ ಮಾ.02ರೊಳಗೆ ನೋಂದಣಿ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಪ್ರಾರಂಭ ದಿನಾಂಕ- ಫೆಬ್ರವರಿ 12, 2026
- ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ- ಮಾರ್ಚ್ 02, 2026
- ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ದಿನಾಂಕ- ಮಾರ್ಚ್ 10, 2026
- ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ದಿನಾಂಕ- ಮಾರ್ಚ್ 23-25, 2026
ಶೈಕ್ಷಣಿಕ ಅರ್ಹತೆ:
✓ ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಬಿ.ಇ./ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು.
✓ ಪದವೀಧರ ಅಪ್ರೆಂಟಿಸ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ (E&E ಎಂಜಿನಿಯರಿಂಗ್ ಹೊರತುಪಡಿಸಿ) ಬಿ.ಎ./ಬಿ.ಎಸ್ಸಿ./ಬಿ.ಕಾಂ./ಬಿ.ಬಿ.ಎ./ಬಿ.ಸಿ.ಎ./ಬಿ.ಬಿ.ಎಂ./ಬಿ.ಇ./ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು.
✓ ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಆಯ್ಕೆ ವಿಧಾನ:
- ಅರ್ಹ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್
- ದಾಖಲೆ ಪರಿಶೀಲನೆ
ಸ್ಟೈಫಂಡ್:
ಪದವೀಧರ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ – ₹9,008
ಡಿಪ್ಲೊಮಾ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ – ₹8,000
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ:
• ಅಭ್ಯರ್ಥಿಗಳು NATS ಅಧಿಕೃತ ಜಾಲತಾಣ https://nats.education.gov.in/ಕ್ಕೆ ಭೇಟಿ ನೀಡಿ.
• ನೋಂದಾಯಿತ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗಿ.
• “ಜಾಹೀರಾತು ಮಾಡಿದ ಖಾಲಿ ಹುದ್ದೆಗಳ ವಿರುದ್ಧ ಅರ್ಜಿ ಸಲ್ಲಿಸಿ” ಅಡಿಯಲ್ಲಿ “ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್” ಅನ್ನು ಹುಡುಕಿ.
• “ಬೆಸ್ಕಾಂ ಅಪ್ರೆಂಟಿಸ್ ತರಬೇತಿ 2026” ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಸು” ಆಯ್ಕೆ ಕ್ಲಿಕ್ ಮಾಡಿ.
• ಈಗ ನೀವು ಖಾಲಿ ಹುದ್ದೆಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿರುತ್ತೀರಿ.
ದಾಖಲೆ ಪರಿಶೀಲನೆ ನಡೆಯುವ ಸ್ಥಳ
ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳು ಮಾರ್ಚ್ 23, 24 ಹಾಗೂ 25ರಂದು ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಈ ಕೆಳಗಿನ ವಿಳಾಸದಲ್ಲಿ ನಡೆಸಲಾಗುವ ದಾಖಲೆ ಪರಿಶೀಲನೆಗೆ ಹಾಜರಾಗಬಹುದು.
ವಿಳಾಸ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಟ್ರೀ ಪಾರ್ಕ್ ಎದುರು, ಬಿಜಿಎಸ್ ವರ್ಲ್ಡ್ ಶಾಲೆಯ ಹಿಂದೆ, ಬಿ.ಎಂ. ರಸ್ತೆ, ರಾಮನಗರ-562159
ಹೆಚ್ಚಿನ ಮಾಹಿತಿಗಾಗಿ: ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇ-ಮೇಲ್ knplacement@boat-srp.com, dgmhrd.work@gmail.com ಅಥವಾ ದೂರವಾಣಿ ಸಂಖ್ಯೆ 044-22542235, 080-22356756 ಅನ್ನು ಸಂಪರ್ಕಿಸಬಹುದು.
Important Direct Links:
| Official Notification PDF | Download |
| Online Application Form Link | Apply Now |
| Official Website | bescom.karnataka.gov.in |
| More Updates | KarnatakaHelp.in |
Im RN Chandrakala, im from kolar. Im 22 years old. I did my graduation in Bangalore North University in kolar and I’m looking for a job,
Name :Krishna
T HullaRiya