RRB JE CEN 05/2025: ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ, ಸಿಟಿ ಇಂಟಿಮೇಷನ್‌ ಸ್ಲಿಪ್‌ ಪ್ರಕಟ

Published on:

ರೈಲ್ವೆ ನೇಮಕಾತಿ ಮಂಡಳಿ(RRB)ಯು ಸಿಇಎನ್ 05/2025ರಡಿ ಅಧಿಸೂಚಿತ ಜೆಇ/ಡಿಎಂಎಸ್‌/ಸಿಎಂಎ ವರ್ಗದ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ-I)ಯ ಪರಿಷ್ಕೃತ ವೇಳಾಪಟ್ಟಿಯ ಜೊತೆಗೆ ಸಿಟಿ ಇಂಟಿಮೇಷನ್‌ ಸ್ಲಿಪ್‌ಅನ್ನು ಫೆ.10ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಜೂನಿಯರ್ ಎಂಜಿನಿಯ‌ರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ & ಮೆಟಲರ್ಜಿಕಲ್ ಸಹಾಯಕ ಸೇರಿದಂತೆ ಒಟ್ಟು 2570 ಹುದ್ದೆಗಳ ನೇಮಕಾತಿಗಾಗಿ ಮೊದಲ ಹಂತದಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT-I)ಯು ಫೆಬ್ರವರಿ 19, 20 ಹಾಗೂ 25 ರಂದು ಒಟ್ಟು 3 ದಿನಗಳ ಅವಧಿಯವರೆಗೆ ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದೆ. ಪರೀಕ್ಷಾ ನಗರ ಮಾಹಿತಿ ಚೀಟಿಯನ್ನು ಆರ್‌ಆರ್‌ಬಿ ಅಧಿಕೃತ ಜಾಲತಾಣ http://www.rrbapply.gov.in/ದ ಮೂಲಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಲಾಗಿನ್‌ ರುಜುವಾತುಗಳನ್ನು ಬಳಸಿಕೊಂಡು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ. ಪ್ರವೇಶ ಪತ್ರವು ಪ್ರತಿ ಪರೀಕ್ಷೆಯ ದಿನಾಂಕಕ್ಕಿಂತ 4 ದಿನಗಳ ಮೊದಲು ಡೌನ್ಲೋಡ್‌ ಮಾಡಿಕೊಳ್ಳಲು ದೊರಕಲಿದೆ.

ಸಿಟಿ ಇಂಟಿಮೇಶನ್ ಸ್ಲಿಪ್ ಹಾಗೂ ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ:

• ಅಭ್ಯರ್ಥಿಗಳು ಆರ್.ಆರ್.ಬಿ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ಕ್ಕೆ ಭೇಟಿ ನೀಡಿ.

• ನಂತರ ನಿಮ್ಮ ಸಂಬಂಧಿತ ಅಥವಾ ನೀವು ಅರ್ಜಿ ಸಲ್ಲಿಸಿದ ಆರ್.ಆರ್.ಬಿ ಅಧಿಕೃತ ಜಾಲತಾಣವನ್ನು ಆಯ್ಕೆ ಮಾಡಿ.

• ಬಳಿಕ ಇತ್ತೀಚಿನ ನವೀಕರಣಗಳು ವಿಭಾಗದಲ್ಲಿ ನೀಡಲಾಗಿರುವ “ಸಿಇಎನ್ ಸಂಖ್ಯೆ 05/2025 (ಜೆಇ, ಡಿಎಂಎಸ್ ಮತ್ತು ಸಿಎಂಎ ವಿವಿಧ ಹುದ್ದೆಗಳು) ಸಿಟಿ ಇಂಟಿಮೇಷನ್ ಸ್ಲಿಪ್ ಮತ್ತು ಹೆಲ್ಪ್‌ಡೆಸ್ಕ್ ಇತ್ಯಾದಿಗಳನ್ನು ಡೌನ್‌ಲೋಡ್ ಮಾಡಲು ಕ್ಲಿಕ್ ಮಾಡಿ” ಲಿಂಕ್ ಮೇಲೆ ಕ್ಲಿಕ್ ಮಾಡಿ. (ಅಥವಾ ನೇರವಾಗಿ https://rrb.digialm.com//EForms/configuredHtml/33128/97996/login.html ಲಿಂಕ್‌ಗೆ ಭೇಟಿ ನೀಡಬಹುದು).

Rrb Je Cen 05/2025 City Intimation Slip
Rrb Je Cen No.05_2025 City Intimation Slip Login Link

• ನಂತರ ಅಭ್ಯರ್ಥಿಗಳು ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗಿ.

• ಆರ್.ಆರ್.ಬಿ (ಜೆಇ, ಡಿಎಂಎಸ್ ಮತ್ತು ಸಿಎಂಎ ವಿವಿಧ ಹುದ್ದೆಗಳು) ಸಿಟಿ ಇಂಟಿಮೇಷನ್ ಸ್ಲಿಪ್ ಹಾಗೂ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ: ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್ ಸೈಟ್http://www.rrbbnc.gov.in/ ಗೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಪರ್ಕ ಸಂಖ್ಯೆ 7996339995 ಅನ್ನು ಸಂಪರ್ಕಿಸಬಹುದು.

Important Direct Links:

RRB JE Revised Exam Dates and City Intimation Slip Notice PDFDownload
RRB JE CEN 05/2025 City Intimation SlipLogin and Check
Official WebsiteRRBs
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

3 thoughts on “RRB JE CEN 05/2025: ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ, ಸಿಟಿ ಇಂಟಿಮೇಷನ್‌ ಸ್ಲಿಪ್‌ ಪ್ರಕಟ”

Leave a Comment