ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಡ್ಮಿಟ್ CRPD/CBO/2025-26/03 ಅಡಿಯಲ್ಲಿ ವೃತ್ತ ಆಧಾರಿತ ಅಧಿಕಾರಿಗಳ (CBO) ಹುದ್ದೆಗಳ ನೇಮಕಾತಿಗೆ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.
ಎಸ್.ಬಿ.ಐ ಒಟ್ಟು 2964(2600 + 364 ಬ್ಯಾಕ್‌ಲಾಗ್) ವೃತ್ತ ಆಧಾರಿತ ಅಧಿಕಾರಿಗಳ ಹುದ್ದೆಗಳ ನೇಮಕಾತಿ ಸಂಬಂಧ ಜುಲೈ 20ರಂದು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವ ಪರೀಕ್ಷೆಯ ಪ್ರವೇಶ ಪತ್ರವನ್ನು ಜು.10ರಿಂದ 20ವರೆಗೆ https://sbi.co.in/ ಗೆ ಭೇಟಿ ನೀಡಿ. ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
How to Download SBI Circle Based Officer(CBO) Admit Card 2025
ಪ್ರವೇಶ ಪತ್ರ ಡೌನ್ಲೋಡ್ ಮಾಡುವ ವಿಧಾನ;
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ
ವೆಬ್‌ಸೈಟ್ https://sbi.co.in/web/careers/current-openingsಗೆ ಭೇಟಿ ನೀಡಿ. - ವೃತ್ತ ಆಧಾರಿತ ಅಧಿಕಾರಿಗಳ ನೇಮಕಾತಿ (ಪರೀಕ್ಷಾ ಕರೆ ಪತ್ರವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿ) ಜಾಹೀರಾತು ಸಂಖ್ಯೆ: CRPD/CBO/2025-26/03
ವಿಭಾಗವನ್ನು ನೋಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. - ಆನ್‌ಲೈನ್ ಪರೀಕ್ಷೆಯ ಕರೆ ಪತ್ರವನ್ನು ಡೌನ್‌ಲೋಡ್ ಮಾಡಿ ಎಂದು ಹೇಳುವ ಆಯ್ಕೆಯನ್ನು ಹುಡುಕಿ ಮತ್ತು ಮುಂದುವರಿಯಲು ಕ್ಲಿಕ್ ಮಾಡಿ.
- ನಿಮ್ಮ ಆದ್ಯತೆಯ ಭಾಷೆಯನ್ನು ಆರಿಸಿ ಮತ್ತು ನಿಮ್ಮ ನೋಂದಣಿ ಸಂಖ್ಯೆ, ಪಾಸ್‌ವರ್ಡ್ ಹಾಗೂ ಕ್ಯಾಪ್ಚ ನಮೂದಿಸಿ ಲಾಗಿನ್ ಆಗಿ.
- SBI CBO- 2025 ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಭವಿಷ್ಯದ ಬಳಕೆಗಾಗಿ ಅದನ್ನು ಮುದ್ರಿಸಿ.
SBI CBO-2025 ಪ್ರವೇಶ ಪತ್ರದೊಂದಿಗೆ ಮುಖ್ಯ ಪರೀಕ್ಷೆಗೆ ಕೊಂಡೊಯ್ಯಬೇಕಾದ ದಾಖಲೆಗಳು
- ಆಧಾರ್ ಕಾರ್ಡ್
- ಮತದಾರರ ಗುರುತಿನ ಚೀಟಿ
- ಪ್ಯಾನ್ ಕಾರ್ಡ್
- ಚಾಲನಾ ಪರವಾನಗಿ
ಈ ಮೇಲಿನದರಲ್ಲಿ ಯಾವುದಾದರೂ ಒಂದು
ಅಭ್ಯರ್ಥಿಗಳು ಪ್ರವೇಶಪತ್ರದಲ್ಲಿ ಗಮನಿಸಬೇಕಾದ ಮುಖ್ಯ ಅಂಶಗಳು
- ಅಭ್ಯರ್ಥಿಯ ಹೆಸರು
- ರೋಲ್ ಸಂಖ್ಯೆ ಮತ್ತು ನೋಂದಣಿ ಸಂಖ್ಯೆ
- ಪರೀಕ್ಷೆಯ ದಿನಾಂಕ ಮತ್ತು ಸಮಯ
- ವಿಳಾಸದೊಂದಿಗೆ ಪರೀಕ್ಷಾ ಸ್ಥಳ
- ವರದಿ ಮಾಡುವ ಸಮಯ
- ಛಾಯಾಚಿತ್ರ ಮತ್ತು ಸಹಿ
- ಪರೀಕ್ಷೆಗೆ ಸೂಚನೆಗಳು
ನಿಮ್ಮ ಪ್ರವೇಶ ಪತ್ರದಲ್ಲಿ ಯಾವುದೇ ದೋಷವಿದ್ದರೆ, ತಕ್ಷಣ SBI ಗೆ ವರದಿ ಮಾಡಿ.
Important Direct Links:
SBI Circle Based Officer Admit Card 2025 Link | Download |
Official Website | sbi.co.in |
More Updates | KarnatakaHelp.in |