ಭಾರತೀಯ ಸ್ಟೇಟ್ ಬ್ಯಾಂಕ್ (SBI) ತನ್ನ ಜನಪ್ರಿಯ ಜೂನಿಯರ್ ಕ್ಲರ್ಕ್ (ಜೂನಿಯರ್ ಅಸೋಸಿಯೇಟ್ಸ್) ಪರೀಕ್ಷೆಯ 2024 ರ ಫಲಿತಾಂಶವನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ವರ್ಷ ಒಟ್ಟು 8424 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳ ಪಟ್ಟಿಯನ್ನು ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು SBIನ ಅಧಿಕೃತ ವೆಬ್ ಸೈಟಿನಲ್ಲಿ ತಮ್ಮ ಫಲಿತಾಂಶಗಳನ್ನು ಪಡೆದುಕೊಳ್ಳಬಹುದು.
ಅಭ್ಯರ್ಥಿಗಳು ತಮ್ಮ ನೊಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಲಾಗಿನ್ ಮಾಡುವ ಮೂಲಕ ಫಲಿತಾಂಶದ ವಿವರಗಳನ್ನು ಪಡೆಯಬಹುದು. ಕ್ಲರ್ಕ್ ಮುಖ್ಯ ಫಲಿತಾಂಶ 2024 ಅನ್ನು ಆನ್‌ಲೈನ್‌ನಲ್ಲಿ www.sbi.co.in ನಲ್ಲಿ ಘೋಷಿಸಲಾಗಿದೆ. ಈ ಲೇಖನದಲ್ಲಿ ನಾವು ಆನ್ಲೈನ್ ಮೂಲಕ ಫಲಿತಾಂಶವನ್ನು ಹೇಗೆ ವೀಕ್ಷಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.