WhatsApp Channel Join Now
Telegram Group Join Now

ಭೂಮಿ ಖರೀದಿಸಲು 25.00 ಲಕ್ಷ ಸಹಾಯಧನ | SC/ST Land Purchase Scheme Karnataka 2024-25

SC/ST Land Purchase Scheme Karnataka 2024: ಈ ಯೋಜನೆಯಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರನ್ನು ಭೂ ಒಡೆಯರನ್ನಾಗಿ ಮಾಡುವ ಉದ್ದೇಶ ಹೊಂದಲಾಗಿರುತ್ತದೆ. ಖರೀದಿಸುವ ಜಮೀನು ಫಲಾಪೇಕ್ಷಿಯ ವಾಸಿಸುವ ಸ್ಧಳದಿಂದ 10 ಕಿಮೀ ವ್ಯಾಪ್ತಿಯಲ್ಲಿರಬೇಕು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ಹಾಗೂ ಡಾ: ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ” ದಿಂದ ನೀಡುವ ಈ “ಭೂ ಒಡೆತನ ಯೋಜನೆ“ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಪ್ರಾರಂಭವಾಗಿದೆ. ಅರ್ಹ ಫಲಾನುಭವಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ, ಜೊತೆಗೆ ನಿಮ್ಮ ಹಿತೈಶಿಗಳಿಗೂ ತಪ್ಪದೇ ಶೇರ್ ಮಾಡಿ.

Karnataka Land Purchase Scheme 2024-25

ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ನಿಗದಿತ ಘಟಕ ವೆಚ್ಚದಲ್ಲಿ ಕೃಷಿ ಜಮೀನು ಖರೀದಿಸಿ ನೀಡಲಾಗುವುದು. ಒಟ್ಟು ಘಟಕ ವೆಚ್ಚ ರೂ. 25.00 ಲಕ್ಷ ಅಥವಾ ರೂ. 20.00 ಲಕ್ಷ ಆಗಿರುತ್ತದೆ. ಇದರಲ್ಲಿ ಶೇಕಡಾ 50% ರಷ್ಟು ಸಹಾಯಧನ ಹಾಗೂ ಇನ್ನುಳಿದ ಶೇಕಡಾ 50% ರಷ್ಟು ಸಾಲವು ಶೇಕಡ 6ರಷ್ಟು ಬಡ್ಡಿದರಲ್ಲಿ ಒಳಗೊಂಡಿರುತ್ತದೆ.

ಜಮೀನು ಮಾರಾಟ ಮಾಡುವ ಭೂ ಮಾಲೀಕರು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬಾರದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯು ಜಮೀನಿನ ದರವನ್ನು ನಿಗದಿಪಡಿಸುತ್ತದೆ.

Sc St Land Purchase Scheme Karnataka Online Application 2024-25
Sc St Land Purchase Scheme Karnataka Online Application 2024-25

Eligibility Criteria for SC/ST land Purchase schemes Karnataka

ಅರ್ಹತೆಗಳು :

  • ಫಲಾನುಭವಿಗಳ ಕನಿಷ್ಟ ವಯಸ್ಸು 18 ವರ್ಷ, ಗರಿಷ್ಠ 50 ವರ್ಷಗಳಾಗಿರಬೇಕು.
  • ಫಲಾನುಭವಿ ಪರಿಶಿಷ್ಟ ಜಾತಿಯ ಭೂರಹಿತ ಕೃಷಿ ಕಾರ್ಮಿಕ ಕುಟುಂಬದ ಮಹಿಳಾ ಅಭ್ಯರ್ಥಿಯಾಗಿರಬೇಕು.
  • ನಿಗಮದಿಂದ ಈ ಹಿಂದೆ ಸಾಲ ಪಡೆದಿರಬಾರದು.
  • ಭೂ ಮಾಲೀಕರು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಕ್ಕೆ ಸೇರಿರಬಾರದು.
  • ಅರ್ಜಿಗಳಲ್ಲಿ ಭೂ ಮಾಲೀಕರ ಮತ್ತು ಫಲಾನುಭವಿಗಳ ಭಾವಚಿತ್ರ ಕಡ್ಡಾಯವಾಗಿ ಪಡೆಯಬೇಕು
  • ಮುಂತಾದ ಅರ್ಹತೆಗಳು

Required Documents for SC ST Land Purchase Scheme

ಬೇಕಾದ ದಾಖಲಾತಿಗಳು:

  • ಅರ್ಜಿದಾರರ ಭಾವಚಿತ್ರ
  • ಜಾತಿ- ಆದಾಯ ಪ್ರಮಾಣ ಪತ್ರ
  • ಪಡಿತರ ಚೀಟಿ/ ಮತದಾರರ ಗುರುತಿನ ಚೀಟಿ/ ಆಧಾರ್‌ ಕಾರ್ಡ್‌ ಪ್ರತಿ
  • ಯೋಜನಾ ವರದಿ/ ದರ ಪಟ್ಟಿ
  • ಮುಂತಾದ ದಾಖಲಾತಿಗಳು

Last Date of SC ST Land Purchase Scheme Online Application 2024-25

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date: 10/10/2024

ಗಮನಿಸಿ: ಅರ್ಹ ಫಲಾಪೇಕ್ಷಿಗಳು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ-ಒನ್, ಕರ್ನಾಟಕ-ಒನ್ ಹಾಗೂ ಬೆಂಗಳೂರು-ಒನ್ ನಾಗರಿಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸತಕ್ಕದು.ಫಲಾಪೇಕ್ಷಿಗಳು ಈ ಕೆಳಕಂಡ ಲಿಂಕ್‌ನಲ್ಲಿ ಸಹ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

Important Direct Links:

SC ST Land Purchase Scheme Online Application
ಅಧಿಕೃತ ಜಾಲತಾಣadcl.karnataka.gov.in
___________________________
kmvstdcl.karnataka.gov.in
ಮತ್ತಷ್ಟು ಮಾಹಿತಿಗಾಗಿKarnatakaHelp.in

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

SC/ST ವಿವಿಧ ಸಬ್ಸಿಡಿ ಸಾಲ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ | SC ST Subsidy Loan Scheme in Karnataka 2024 Apply Online

‘ಐರಾವತ ಯೋಜನೆ’ 4.00 ಲಕ್ಷ ಸಹಾಯಧನ | Airavata Scheme Karnataka Online Application 2024

ಗಂಗಾ ಕಲ್ಯಾಣ ಉಚಿತ ಬೋರ್‌ವೇಲ್ ಯೋಜನೆ ಅರ್ಜಿ ಸಲ್ಲಿಕೆ ಪ್ರಾರಂಭ | Ganga Kalyana Yojana Online Application 2024 Apply Online

FAQs – Land Purchase Scheme Karnataka

How to Apply For SC/ST Land Purchase Scheme Karnataka 2024-25?

Apply online through Seva Sindhu Portal at Bangalore-One/Karnataka-One/Atalji Janasnehi Kendra and Civil Service Centers.

What is the Last Date of SC/ST Land Purchase Scheme 2024?

October 10, 2024

Leave a Comment