WhatsApp Channel Join Now
Telegram Group Join Now

SC/ST ವಿವಿಧ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ| SC ST Subsidy Loan Scheme in Karnataka 2024-25

SC ST Subsidy Loan Scheme in Karnataka: ಕರ್ನಾಟಕ ಹೆಲ್ಫ್ ಗೆ ಸ್ವಾಗತ ಬಂಧುಗಳೇ ಇಂದು ನಾವು “ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭವೃದ್ದಿ ನಿಗಮ”ದಿಂದ ನೀಡುವ ವಿವಿಧ ಯೋಜನೆ(SC/ST Subsidy Loan)ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಉಪಯೋಗವಾಗುತ್ತೆ ಎಂದು ನಾವು ಭಯಸಿದ್ದೇವೆ. ಕರ್ನಾಟಕದಲ್ಲಿ SC/ST ಸಬ್ಸಿಡಿ ಸಾಲ ಯೋಜನೆ ಈ ಮಾಹಿತಿಯನ್ನ ನಿಮ್ಮ ಸ್ನೇಹಿತರಿಗೂ ತಿಳಿಸಿ ಅವರಿಗೂ ಸಹಾಯವಾಗಲಿ. ಎಲ್ಲಾ ಮಾಹಿತಿಯನ್ನ ಗಮನವಿಟ್ಟು ಓದಿ ಅರ್ಥೈಸಿಕೊಳ್ಳಿ.

SC ST Loan Scheme Karnataka 2024

2024-25ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಯಸುವವರಿಂದ ಆನ್‌ ಲೈನ್‌ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

☞ ಸ್ವಯಂ ಉದ್ಯೋಗ ನೇರಸಾಲ ಯೋಜನೆ
☞ ಸಮಗ್ರ ಗಂಗಾ ಕಲ್ಯಾಣ ಯೋಜನೆ
☞ ಭೂ ಒಡೆತನ ಯೋಜನೆ (Sc/St Land Purchase Scheme)
☞ ಐರಾವತ ಯೋಜನೆ/ಸ್ವಾವಲಂಬಿ ಸಾರಥಿ ಯೋಜನೆ

ಸ್ವಯಂ ಉದ್ಯೋಗ ನೇರಸಾಲ ಯೋಜನೆ:

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ನಿರುದ್ಯೋಗ ಯುವಕ/ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಸದರಿ ಯೋಜನೆಯ 50% ರಷ್ಟು ಗುರಿಯಲ್ಲಿ ಹೈನುಗಾರಿಕೆ ಮತ್ತು ಉಳಿದ 50%ರಷ್ಟು ಗುರಿಯಲ್ಲಿ ತರಕಾರಿ, ಹಣ್ಣುಹಂಪಲು, ಮೀನು-ಮಾಂಸ ಮಾರಾಟ, ಕುರಿ/ಹಂದಿ/ಮೊಲ ಸಾಕಾಣಿಕೆ ಮುಂತಾದ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಮಳಿಗೆ /ತಳ್ಳುಗಾಡಿ ದುಡಿಮೆ ಬಂಡವಾಳ ಸೇರಿದಂತೆ ಇತ್ಯಾದಿ ಉದ್ದೇಶದ ಸೌಲಭ್ಯಗಳಿಗಾಗಿ ಘಟಕ ವೆಚ್ಚ ರೂ.1.00000/-ದಲ್ಲಿ ಶೇ.50ರಷ್ಟು ಸಾಲ ಮತ್ತು ಶೇ.50ರಷ್ಟು ಸಹಾಯಧನ ನೀಡಲಾಗುತ್ತಿದೆ.

ಸಮಗ್ರ ಗಂಗಾ ಕಲ್ಯಾಣ ಯೋಜನೆ:

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರು ಹೊಂದಿರುವ 1.20 ಯಿಂದ 5.00 ಎಕರೆ ಖುಷ್ಕಿ ಜಮೀನಿನಲ್ಲಿ ಕೊಳವೆಬಾವಿ ಕೊರೆದು, ಪಂಪಸೆಟ್ ಸರಬರಾಜು ಮಾಡಿ, ಅಳವಡಿಸಿ ವಿದ್ಯುದ್ದೀಕರಣಗೊಳಿಸಿ, ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಭೂ ಒಡೆತನ ಯೋಜನೆ:

  • ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಭೂ ರಹಿತ ಮಹಿಳಾಕೃಷಿ ಕಾರ್ಮಿಕರನ್ನು ಭೂ ಒಡೆಯರನ್ನಾಗಿ ಮಾಡುವ ಉದ್ದೇಶ ಹೊಂದಲಾಗಿರುತ್ತದೆ.
  • ಖರೀದಿಸುವ ಜಮೀನು ಫಲಾಪೇಕ್ಷಿಯ ವಾಸಿಸುವ ಸ್ಧಳದಿಂದ 10 ಕಿಮೀ ವ್ಯಾಪ್ತಿಯಲ್ಲಿರಬೇಕು.
  • ಘಟಕ ವೆಚ್ಚದ ಮಿತಿಯೊಳಗೆ ಕನಿಷ್ಟ 2.00 ಎಕರೆ ಖುಷ್ಕಿ, 1.00 ಎಕರೆ ನೀರಾವರಿ, 1/2 ಎಕರೆ ಭಾಗಾಯ್ತು ಖರೀದಿಸಿ ಭೂ-ರಹಿತ ಮಹಿಳಾ ಕೃಷಿ ಕಾರ್ಮಿಕರ ಹೆಸರಿನಲ್ಲಿ ನೊಂದಾಯಿಸಲಾಗುವುದು.

ಐರಾವತ ಯೋಜನೆ/ಸ್ವಾವಲಂಬಿ ಸಾರಥಿ ಯೋಜನೆ( SC ST car loan scheme):

ಈ ಯೋಜನೆಗೆ ಗರಿಷ್ಠ ರೂ. 4.00 ಲಕ್ಷಗಳವರೆಗೆ ನಿಗಮದಿಂದ ಸಹಾಯಧ(SC/ST Subsidy Car Loans in Karnataka 2024)ನ ಒದಗಿಸಲಾಗುವುದು. ಉಳಿದ ಭಾಗ ಬ್ಯಾಂಕ್/ಹಣಕಾಸು ಸಂಸ್ಥೆ/ಫಲಾನುಭವಿಯ ವಂತಿಕೆಯಿಂದ ಭರಿಸಿ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು.

SC ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಿಗಾಗಿ ಅರ್ಜಿ ಆಹ್ವಾನ | Dr.B.R.Ambedkar Nigam Loan Scheme Apply Online

ST ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಿಗಾಗಿ ಅರ್ಜಿ ಆಹ್ವಾನ | Maharshi Valmiki Nigama Loan Scheme Apply Online

ಗಮನಿಸಿ: ಅರ್ಹ ಫಲಾಪೇಕ್ಷಿಗಳು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ-ಒನ್, ಕರ್ನಾಟಕ-ಒನ್ ಹಾಗೂ ಬೆಂಗಳೂರು-ಒನ್ ನಾಗರಿಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.ಫಲಾಪೇಕ್ಷಿಗಳು ಈ ಕೆಳಕಂಡ ಲಿಂಕ್‌ನಲ್ಲಿ ಸಹ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

Last Date of SC ST Loan Scheme Online Application Form 2024-25

  • ST ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ Start Date: 23/10/2024
  • ST ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date: 23/11/2024

‘ಐರಾವತ ಯೋಜನೆ’ 5.00 ಲಕ್ಷ ಸಹಾಯಧನ | Airavata Scheme Karnataka Online Application 2024

ಗಂಗಾ ಕಲ್ಯಾಣ ಉಚಿತ ಬೋರ್‌ವೇಲ್ ಯೋಜನೆ ಅರ್ಜಿ ಸಲ್ಲಿಕೆ ಪ್ರಾರಂಭ | Ganga Kalyana Yojana Online Application 2024 Apply Online

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ | Karnataka Free Sewing Machine Scheme Apply Online

Important Direct Links:

SC/ST Loan Online Application Form Link
Official Websitesadcl.karnataka.gov.in
______________________________
kmvstdcl.karnataka.gov.in
ಮತ್ತಷ್ಟು ಮಾಹಿತಿಗಾಗಿKarnatakaHelp.in

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

FAQs – SC ST Loan Scheme 2024

How to Apply For SC ST Subsidy Loan Scheme in Karnataka 2024?

Apply online through Seva Sindhu Portal at Bangalore-One/Karnataka-One/Atalji Janasnehi Kendra and Civil Service Centers.

What is the Last Date of  SC ST Car loan Scheme Karnataka?

November 23, 2024