ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಖಾಲಿ ಇರುವ ಜೂನಿಯರ್ ಕೋರ್ಟ್ ಸಹಾಯಕ(JCA) (ಗುಂಪು ‘ಬಿ’ ಗೆಜೆಟೆಡ್ ಅಲ್ಲದ) ಹುದ್ದೆಗಳ ನೇಮಕಾತಿ(SCI Junior Court Assistant Recruitment 2025)ಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ನೀಡಲಾದ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಬೇಕಾದ ವಿದ್ಯಾರ್ಹತೆ, ವಯೋಮಿತಿ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ನೀಡಿದ್ದೇವೆ ಲೇಖನವನ್ನು ಕೊನೆವೆರೆಗೂ ಓದಿ. ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
Shortview of SCI Junior Court Assistant Recruitment 2025
Organization Name – Supreme Court of India
Post Name – Junior Court Assistant
Total Vacancy – 241
Application Mode – Online
Job Location – India
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಫೆಬ್ರವರಿ 05, 2025
ಅರ್ಜಿ ಸಲ್ಲಿಕೆ ಕೊನೆ ದಿನಾಂಕ – ಮಾರ್ಚ್ 08, 2025
ಶೈಕ್ಷಣಿಕ ಅರ್ಹತೆ:
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ(Bachelor’s degree)ಯನ್ನು ಪೂರ್ಣಗೊಳಿಸಿರಬೇಕು. ಜೊತೆಗೆ ಟೈಪಿಂಗ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿಯು 08.03.2025ರಂತೆ ಕನಿಷ್ಠ-18 ವರ್ಷಗಳು, ಗರಿಷ್ಠ-30 ವರ್ಷಗಳು ಆಗಿರಬೇಕು.
ಆಯ್ಕೆ ಪ್ರಕ್ರಿಯೆ:
- ವಸ್ತುನಿಷ್ಠ ಪ್ರಕಾರದ ಲಿಖಿತ ಪರೀಕ್ಷೆ
- ವಸ್ತುನಿಷ್ಠ ಪ್ರಕಾರದ ಕಂಪ್ಯೂಟರ್ ಜ್ಞಾನ ಪರೀಕ್ಷೆ
- ಸಂದರ್ಶನ
- ದಾಖಲೆ ಪರಿಶೀಲನೆ
ವೇತನ ವಿವರ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕವಾಗಿ ₹35,400/- ಮಾಸಿಕ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ – ರೂ.1000/-
SC/ST/ಮಾಜಿ ಸೈನಿಕರು/ವಿಕಲಚೇತನರು/ಸ್ವಾತಂತ್ರ್ಯ ಹೋರಾಟಗಾರ ಅಭ್ಯರ್ಥಿಗಳಿಗೆ – ರೂ.250/-
How to Apply for SCI Junior Court Assistant Recruitment 2025
- ಮೊದಲಿಗೆ www.sci.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
- ನಂತರ ಪ್ರಕಟಣೆಗಳಲ್ಲಿ ಕಾಣುವ “ನೇಮಕಾತಿ” ಮೇಲೆ ಕ್ಲಿಕ್ ಮಾಡಿ.
- ನಂತರ “Link to submit online application forms for the post of Junior Court Assistant” ಆನ್‌ಲೈನ್ ಅರ್ಜಿ ಲಿಂಕ್ ಅನ್ನು ಕ್ಲಿಕ್ ಮಾಡಿ
- ನಂತರ ನೋಂದಣಿ ಅಥವಾ ಲಾಗಿನ್ ಮಾಡಿ.
- ಆನ್‌ಲೈನ್ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ, ಮತ್ತು ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ, ಅರ್ಜಿಯನ್ನು ಸಲ್ಲಿಸಿ
Important Direct Links:
Official Notification PDF | Download |
Online Application Form Link | Apply Now |
Official Website | www.sci.gov.in |
More Updates | Karnataka Help.in |