ಎಲ್ಲಾರಿಗೂ ಶುಭದಿನ ವಿದ್ಯಾರ್ಥಿಗಳೇ, ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಆನ್ ಲೈನ್ (SSP Pre Matric Scholarship 2024-25 Apply Online)ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.
ಈ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು 1 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.ಪ್ರಸ್ತುತ ಸಾಲಿನಲ್ಲಿ ‘ಮೆಟ್ರಿಕ್ ಪೂರ್ವ’ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಲೇಖನವನ್ನು ಕೊನೆವರೆಗೂ ಓದಿ ಅರ್ಥೈಸಿಕೊಳ್ಳಿ ಜೊತೆಗೆ ನಿಮ್ಮ ಸ್ನೇಹಿತರು ತಪ್ಪದೇ ಶೇರ್ ಮಾಡಿ.
ಈ ವಿದ್ಯಾರ್ಥಿವೇತನ ಈ ಕೆಳಗಿನ ಎಲ್ಲಾ ವರ್ಗದ ಇಲಾಖೆಗಳ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.
ಸಮಾಜ ಕಲ್ಯಾಣ ಇಲಾಖೆ
ಬುಡಕಟ್ಟು ಕಲ್ಯಾಣ ಇಲಾಖೆ
ಹಿಂದುಳಿದ ವರ್ಗಗಳ ಇಲಾಖೆ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ಕೃಷಿ ಇಲಾಖೆ
ಸೈನಿಕ ಕಲ್ಯಾಣ ಇಲಾಖೆ
ಅಂಗವಿಕಲರ ಕಲ್ಯಾಣ ಇಲಾಖೆ
ಗಮನಿಸಿ ವಿದ್ಯಾರ್ಥಿಗಳೇ: ಸದ್ಯಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1 ರಿಂದ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಮಾತ್ರ ಅರ್ಜಿ ಸ್ವೀಕಾರ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಎಲ್ಲಾ ಇಲಾಖೆಯಿಂದ ಅರ್ಜಿ ಸಲ್ಲಿಕೆ ಅತೀ ಶೀಘ್ರದಲ್ಲೇ ಪ್ರಾರಂಭವಾಗಲಿದೆ…
Last Date of SSP Pre Matric Scholarship 2024-25
Ssp Pre Matric Scholarship 2024 Start Date: Sep 2024
SSP scholarship 2024-25 Last date: Given Below
Department Name
Last Date
Minority Welfare Department
November 30, 2024
Social Welfare Department
Soon
Tribal Welfare Department
Soon
Backward Class Department
Soon
Agriculture Department
Soon
Sainik Welfare Department
Soon
Disability Welfare Department
Soon
Required Documents for SSP Pre Matric Scholarship
ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಅರ್ಜಿಗಾಗಿ ಅಗತ್ಯ ದಾಖಲಾತಿಗಳು;
ವಿದ್ಯಾರ್ಥಿಗಳ ಎಸ್.ಎ.ಟಿ.ಎಸ್ (SATS ID) ಗುರುತಿನ ಸಂಖ್ಯೆ
ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಸಂಖ್ಯೆ ಅಥವಾ ಇಐಡಿ ಸಂಖ್ಯೆ
ಮೊಬೈಲ್ ನಂಬರ್
ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು
How to Apply SSP Pre Matric Scholarship 2024
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಮೊದಲು ಅಧಿಕೃತ ವೆಬ್ ಸೈಟ್ (@https://ssp.postmatric.karnataka.gov.in/) ಗೆ ಭೇಟಿ ನೀಡಿ
ನಂತರ ವಿದ್ಯಾರ್ಥಿಗಳು “2024-25 ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (ಈಗಾಗಲೇ ಎಸ್. ಎಸ್. ಪಿ ಯಲ್ಲಿ ಖಾತೆ ಸೃಜಿಸಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ)” ಮೇಲೆ ಕ್ಲಿಕ್ ಮಾಡಿ ಮುಂದೆ ಲಾಗಿನ್ ಮಾಡಿ.
ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನ ಸರಿಯಾಗಿ ಭರ್ತಿ ಮಾಡಿ
ಕೊನೆಯದಾಗಿ ಅರ್ಜಿ ಸಲ್ಲಿಸಿದ ಪ್ರತಿ ಜೊತೆಗೆ ದಾಖಲಾತಿಗಳನ್ನ ನಿಮ್ಮ ಶಾಲೆಗೆ ಸಲ್ಲಿಸಿ.