JEE ಮುಖ್ಯ ಪರೀಕ್ಷೆ 2026ರ ಸೆಷನ್-2: ತಾತ್ಕಾಲಿಕ ಕೀ ಉತ್ತರ ಪ್ರಕಟ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2026ನೇ ಸಾಲಿನ ಜಂಟಿ ಪ್ರವೇಶ ಪರೀಕ್ಷೆ (ಮುಖ್ಯ) ಸೆಷನ್-2ರ ತಾತ್ಕಾಲಿಕ ಕೀ ಉತ್ತರವನ್ನು ಏ.11ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಏ.02 ರಿಂದ 08 ರವರೆಗೆ ಯಶಸ್ವಿಯಾಗಿ ಪರೀಕ್ಷೆಗಳು ನಡೆಸಲಾಗಿತ್ತು. ತಾತ್ಕಾಲಿಕ ಕೀ ಉತ್ತರ ಮತ್ತು ದಾಖಲಾದ ಪ್ರತಿಕ್ರಿಯೆ ಹಾಳೆಯನ್ನು ಜೆಇಇ ಎನ್‌ಟಿಎ ಅಧಿಕೃತ ಜಾಲತಾಣ https://jeemain.nta.nic.in/ದಲ್ಲಿ ಬಿಡುಗಡೆ ಮಾಡಲಾಗಿದ್ದು, ಸದರಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೀ ಉತ್ತರಗಳನ್ನು ಪರಿಶೀಲಿಸಿಕೊಳ್ಳಬಹುದು. ಸದರಿ ಪ್ರಕಟಿತ ಕೀ ಉತ್ತರಗಳ ವಿರುದ್ಧ ಸವಾಲನ್ನು … More