ಪಬ್ಲಿಕ್ ಸರ್ವಿಸ್ ಕಮಿಷನ್ (UPSC)ಯು ಕಂಬೈನ್ಡ್ ಡಿಫೆನ್ಸ್ ಸರ್ವೀಸ್‌ಗೆ (CDS 2) 2024 ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿತ್ತು, ಸದರಿ ಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ .
ಸಂಯೋಜಿತ ರಕ್ಷಣಾ ಸೇವೆಗಳ 2 (CDS) ನೇಮಕಾತಿಯಲ್ಲಿ ಒಟ್ಟು 459 ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ದೇಶದಾದ್ಯಂತ ಸೆಪ್ಟೆಂಬರ್ 1 ರಂದು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಭಾರತೀಯ ನೌಕಾಪಡೆ ಅಕಾಡೆಮಿ, ಭಾರತೀಯ ವಾಯುಪಡೆ ಅಕಾಡೆಮಿ, ಮಿಲಿಟರಿ ಅಕಾಡೆಮಿ ಮತ್ತು ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಗಳಿಗೆ ಕಂಬೈನ್ಡ್ ಡಿಫೆನ್ಸ್ ಸೇವೆಗಳ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರತಿ ವರ್ಷ ಎರಡು ಬಾರಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಮೇ 15 ರಿಂದ ಜೂನ್ 4, 2024 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಅಭ್ಯರ್ಥಿಗಳು ತಮ್ಮ ಪ್ರವೇಶವನ್ನು ಡೌನ್‌ಲೋಡ್ ಮಾಡಲು UPSC ಅಧಿಕೃತ ವೆಬ್‌ಸೈಟ್ upsconline.nic.in ಭೇಟಿ ನೀಡಿ, ನೊಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಲಾಗಿನ್ ಮಾಡುವ ಮೂಲಕ ಪ್ರವೇಶ ಪತ್ರಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಲೇಖನದಲ್ಲಿ UPSC CDS 2 Admit Card 2024 ಡೌನ್ಲೋಡ್ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಾಗಿದ್ದು ಗಮನವಿಟ್ಟು ಓದಿರಿ.