ನಾಗರಿಕ ಸೇವೆಗಳ ಪರೀಕ್ಷೆ (CSE) ಮುಖ್ಯ ಪರೀಕ್ಷೆಯ ಪ್ರವೇಶ ಪತ್ರವನ್ನು ಕೇಂದ್ರ ಲೋಕಸೇವಾ ಆಯೋಗವು ಆಗಸ್ಟ್ 14ರಂದು ಬಿಡುಗಡೆ ಮಾಡಿದೆ.
UPSC 2025ನೇ ಸಾಲಿನ ನಾಗರಿಕ ಸೇವೆ(IAS) ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಆಗಸ್ಟ್ 22 ರಿಂದ 31ರವೆರೆಗೆ ನಡೆಯಲಿರುವ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರವನ್ನು UPSC ಅಧಿಕೃತ ವೆಬ್ಸೈಟ್https://upsc.gov.in/ನಲ್ಲಿ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ಪ್ರಮುಖ ದಿನಾಂಕಗಳು
• UPSC ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ 14,161 ಅಭ್ಯರ್ಥಿಗಳಿಗೆ ಇದೀಗ ಆಯೋಗವು ಮುಖ್ಯ ಪರೀಕ್ಷೆಯನ್ನು ಆಗಸ್ಟ್ 22 ರಿಂದ 31ರವರೆಗೆ ನಡೆಸಲು ನಿರ್ಧರಿಸಿದೆ.
• CS ಮುಖ್ಯ ಪರೀಕ್ಷೆಯನ್ನು ಒಟ್ಟು ಒಂಬತ್ತು ಪತ್ರಿಕೆಗಳನ್ನು ಒಳಗೊಂಡಂತೆ ಪ್ರತಿ ದಿನ ಎರಡು ಪಾಳಿಯಲ್ಲಿ 5 ದಿನಗಳವರೆಗೆ ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
UPSC CSE ಮುಖ್ಯ ಪರೀಕ್ಷೆಯ ವೇಳಾಪಟ್ಟಿ 2025
• 22-08-2025 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪ್ರಬಂಧ
• 23-08-2025 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾಮಾನ್ಯ ಅಧ್ಯಯನ ಪತ್ರಿಕೆ-I ಹಾಗೂ ಮಧ್ಯಾಹ್ನ 2.30 ಸಂಜೆ 5.30 ರವರೆಗೆ ಸಾಮಾನ್ಯ ಅಧ್ಯಯನ ಪತ್ರಿಕೆ-II
• 24-08-2025 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾಮಾನ್ಯ ಅಧ್ಯಯನ ಪತ್ರಿಕೆ-III ಹಾಗೂ ಮಧ್ಯಾಹ್ನ 2.30 ಸಂಜೆ 5.30 ರವರೆಗೆ ಸಾಮಾನ್ಯ ಅಧ್ಯಯನ ಪತ್ರಿಕೆ-IV
• 30-08-2025 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಭಾರತೀಯ ಭಾಷಾ ಪತ್ರಿಕೆ ಹಾಗೂ ಮಧ್ಯಾಹ್ನ 2.30 ಸಂಜೆ 5.30 ರವರೆಗೆ ಇಂಗ್ಲಿಷ್ ಪತ್ರಿಕೆ
• 31-08-2025 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಐಚ್ಛಿಕ ವಿಷಯ ಪತ್ರಿಕೆ-I ಹಾಗೂ ಮಧ್ಯಾಹ್ನ 2.30 ಸಂಜೆ 5.30 ರವರೆಗೆ ಐಚ್ಛಿಕ ವಿಷಯ ಪತ್ರಿಕೆ-II
How to Download UPSC CSE Mains Admit Card 2025?
UPSC ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಡೌನ್ಲೋಡ್ ಮಾಡುವ ವಿಧಾನ
UPSC ಅಧಿಕೃತ ವೆಬ್ಸೈಟ್ https://upsconline.gov.in/eadmitcard/admitcard_csm_2025/ಗೆ ಭೇಟಿ ನೀಡಿ.
ಇ-ಅಡ್ಮಿಟ್ ಕಾರ್ಡ್ ವಿಭಾಗದ ಕೆಳಗೆ – “ಇಲ್ಲಿ ಕ್ಲಿಕ್ ಮಾಡಿ” ಲಿಂಕ್ ಮೇಲೆ ಟ್ಯಾಪ್ ಮಾಡಿ.
ನಂತರ ನೀಡಲಾಗಿರುವ ಪ್ರಮುಖ ಸೂಚನೆಗಳನ್ನು ಒಮ್ಮೆ ಓದಿ, ನಂತರ ಹೌದು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನೋಂದಣಿ ಐಡಿ ಅಥವಾ ರೋಲ್ ಸಂಖ್ಯೆಯ ಮೂಲಕ ಲಾಗಿನ್ ಆಗಿ.
ಬಳಿಕ ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆ 2025ರ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಿ
ಭವಿಷ್ಯದ ಉಲ್ಲೇಖಕ್ಕಾಗಿ ಪ್ರವೇಶ ಪತ್ರದ ಮುದ್ರಣವನ್ನು ತೆಗೆದುಕೊಳ್ಳಿ.