ಕೇಂದ್ರ ಲೋಕಸೇವಾ ಆಯೋಗವು 2024 ರ ಜೂನ್ 16 ರಂದು ನಾಗರಿಕ ಸೇವೆಗಳ (ಪ್ರಾಥಮಿಕ) ಪರೀಕ್ಷೆ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಮುಖ್ಯ ಪರೀಕ್ಷೆಯನ್ನು ನಡೆಸಲಾಗಿತ್ತು. ಇದೀಗ ಆಯೋಗವು ಅಂತಿಮ ಫಲಿತಾಂಶ(UPSC CSE Result 2025)ವನ್ನು ಅಧಿಕೃತವಾಗಿ ಪ್ರಕಟಿಸಿದೆ.
2024ರ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಸಿದ ಮುಖ್ಯ ಪರೀಕ್ಷೆಯಲ್ಲಿ ಒಟ್ಟು 14,627 ಅಭ್ಯರ್ಥಿಗಳು ಹಾಜರಾಗಲು ಅರ್ಹತೆ ಪಡೆದಿದ್ದರು. ಅದರಲ್ಲಿ 2,845 ಅಭ್ಯರ್ಥಿಗಳು ಸಂದರ್ಶನಕ್ಕೆ ಅರ್ಹತೆ ಪಡೆದು, ಅಂತಿಮವಾಗಿ (725 ಪುರುಷರು ಮತ್ತು 284 ಮಹಿಳೆಯರು) ಒಟ್ಟು 1,009 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಫಲಿತಾಂಶವನ್ನು ನಾಗರಿಕ ಸೇವಾ ಯೋಗದ ಅಧಿಕೃತ ವೆಬ್ಸೈಟ್ upsconline.gov.in ಮೂಲಕ ವೀಕ್ಷಿಸಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.