ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಯು ಉದ್ಯೋಗ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಪರ್ಸನಲ್ ಅಸಿಸ್ಟೆಂಟ್ (PA) ಹುದ್ದೆಗಳಿಗೆ ಪರೀಕ್ಷೆಗೆ ಸಂಬಂಧಿಸಿದಂತೆ ಅಧಿಕೃತ ಸೂಚನೆಯನ್ನು ಬಿಡುಗಡೆ ಮಾಡಿದೆ. ಉದ್ಯೋಗ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ಪಿಎ ಹುದ್ದೆಗಳಿಗೆ ಒಟ್ಟು 323 ಹುದ್ದೆಗಳನ್ನು(UPSC EPFO PA Admit card 2024) ಭರ್ತಿ ಮಾಡುವ ಗುರಿಯನ್ನು ಯುಪಿಎಸ್‌ಸಿ ಹೊಂದಿದೆ. ಇದಕ್ಕೆ ಸಂಬಂಧಿಸಿದ ಪರೀಕ್ಷೆಯು 7 ಜುಲೈ 2024 ರಂದು ಬೆಳಿಗ್ಗೆ 09:30 ರಿಂದ 11:30 ರವರೆಗೆ ಒಂದೇ ಪಾಳಿಯಲ್ಲಿ ನಡೆಯಲಿದೆ. ಅಭ್ಯರ್ಥಿಗಳು EPFO PA ಪರೀಕ್ಷೆಯ ವೇಳಾಪಟ್ಟಿ, ಪರೀಕ್ಷೆಯ ಮಾದರಿ ಮತ್ತು ಇತರ ವಿವರಗಳಿಗಾಗಿ ಈ ಕೆಳಗೆ ನೀಡಲಾಗಿರುವ ಲೇಖನವನ್ನು ಓದಿರಿ.
ಉದ್ಯೋಗ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ಪರ್ಸನಲ್ ಅಸಿಸ್ಟೆಂಟ್ (ಪಿಎ) ಹುದ್ದೆಗಳ ಒಟ್ಟು ಹುದ್ದೆಗಳ ಪೈಕಿ 132 ಹುದ್ದೆಗಳ ನೇಮಕಾತಿಗಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತೇದೆ.ಇದರ ಕುರಿತಂತೆ ಪ್ರವೇಶ ಪತ್ರವನ್ನು ಶೀಘ್ರದಲ್ಲಿ ಯುಪಿಎಸ್‌ಗೆ ಅಧಿಕೃತ ವೈಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.
EPFO PA ನೇಮಕಾತಿ ಪರೀಕ್ಷೆಯು ವಸ್ತುನಿಷ್ಠ ಮಾದರಿಯ ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಸಾಮಾನ್ಯ ಅಧ್ಯಯನಗಳು, ಸಾಮಾನ್ಯ ಇಂಗ್ಲಿಷ್, ಮಾನಸಿಕ ಸಾಮರ್ಥ್ಯ ವಿಷಯಗಳ ಮೇಲಿನ ಪ್ರಶ್ನೆಗಳನ್ನು ನೀಡಲಾಗುತ್ತದೆ.
ಒಟ್ಟು 200 ಅಂಕಗಳಿಗೆ ಒಟ್ಟು 200 ಪ್ರಶ್ನೆಗಳನ್ನು ಒಳಗೊಂಡಂತೆ ನೆಗೆಟಿವ್ ಮಾರ್ಕಿಂಗ್ ಇದ್ದು, ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕ ಕಡಿತಗೊಳಿಸಲಾಗುತ್ತದೆ.
ಪರೀಕ್ಷೆಯನ್ನು ಪೂರ್ಣಗೊಳಿಸಲು 02 ಗಂಟೆಗಳ ಕಾಲಾವಧಿಯನ್ನು ಒದಗಿಸಲಾಗುತ್ತದೆ.
ಇಂಗ್ಲಿಷ್ ಭಾಷೆಯ ಪ್ರಶ್ನೆಗಳನ್ನು ಹೊರತುಪಡಿಸಿ ಪ್ರಶ್ನೆಗಳ ಮಾಧ್ಯಮವು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರುತ್ತದೆ.
How to Download UPSC EPFO PA Admit card 2024
EPFO PA ಪರೀಕ್ಷೆಯ ಅಡ್ಮಿಟ್ ಕಾರ್ಡ್ 2024 ಅನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
ಅಧಿಕೃತ UPSC ವೆಬ್‌ಸೈಟ್‌ಗೆ ಭೇಟಿ ನೀಡಿ: www.upsc.gov.in.
ಮುಖಪುಟದಲ್ಲಿ ಲಭ್ಯವಿರುವ ‘ಅಡ್ಮಿಟ್ ಕಾರ್ಡ್‘ ವಿಭಾಗದ ಮೇಲೆ ಕ್ಲಿಕ್ ಮಾಡಿ.
EPFO PA ಪರೀಕ್ಷೆಯ ಅಡ್ಮಿಟ್ ಕಾರ್ಡ್ 2024 ಗಾಗಿ ಲಿಂಕ್ ಅನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
ನಿಮ್ಮ ನೋಂದಣಿ ಸಂಖ್ಯೆ ಅಥವಾ ಲಾಗಿನ್ ವಿವರಗಳನ್ನು ನಮೂದಿಸಿ.
ನಿಮ್ಮ ಪ್ರವೇಶ ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ.
ಎಲ್ಲಾ ಪ್ರವೇಶ ಕಾರ್ಡ್ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
ಪರೀಕ್ಷೆ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರವೇಶ ಕಾರ್ಡ್‌ನ ಪ್ರಿಂಟ್‌ಔಟ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ತೆಗೆದುಕೊಳ್ಳಿ.