UPSC ESE Mains 2024 Timetable PDF: ಕೇಂದ್ರ ಲೋಕಸೇವಾ ಆಯೋಗ (UPSC) ವು ನಡೆಸುವ 2024ರ ಇಂಜಿನಿಯರಿಂಗ್ ಸೇವಗಳ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಅಧಿಕೃತ ವೈಬ್ ಸೈಟ್ ನ ಮೂಲಕ ಬಿಡುಗಡೆ ಮಾಡಿದೆ. ಫೆಬ್ರವರಿಯಲ್ಲಿ ನಡೆದ ಪ್ರಾಥಮಿಕ ಹಂತದ ಪರೀಕ್ಷಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ ಮುಖ್ಯ ಪರೀಕ್ಷಯಲ್ಲಿ ಭಾಗವಹಿಸಬಹುದಾಗಿದ್ದು, UPSC ವೈಬ್ ಸೈಟ್ ನಲ್ಲಿ ವೇಳಾಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಅಧಿಕೃತ ವೇಳಾಪಟ್ಟಿಯಲ್ಲಿ ತಿಳಿಸಿರುವಂತೆ ಜೂನ್ 23ರಂದು ಮುಖ್ಯ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದ್ದು, ಎರಡು ಅವಧಿಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. ಮೊದಲನೇ ಅವಧಿಯಲ್ಲಿ ಇಂಜಿನಿಯರಿಂಗ್ ಇನ್ ಎಲೆಕ್ಟ್ರಾನಿಕಲ್, ಮೆಕಾನಿಕಲ್, ಎಲೆಕ್ಟ್ರಾನಿಕ್ಸ್ ಟೆಲಿ, ಕಮ್ಯುನಿಕೇಶನ್, ಸಿವಿಲ್ ವಿಭಾಗಗಳಿಗೆ ಪೇಪರ್ 1 ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆಯುತ್ತದೆ.
ಎರಡನೇ ಅವಧಿಯಲ್ಲಿ ಅದೇ ವಿಭಾಗಗಳಿಗೆ ಪೇಪರ್ 2 ಮಧ್ಯಾಹ್ನ 2:30 ರಿಂದ ಸಂಜೆ 5:30 ರವರೆಗೆ ನಡೆಸಲಾಗುತ್ತದೆ, ಒಟ್ಟು 300 ಅಂಕಗಳನ್ನು ಒಳಗೊಂಡಿರುತ್ತದೆ.