ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾಭ್ಯಾಸದ ಬಳಿಕ ಸರ್ಕಾರಿ ಕೆಲಸ ತೆಗೆದುಕೊಳ್ಳುವುದು ತುಂಬಾ ಕಷ್ಟ. ಹೀಗಿರುವಾಗ ಪಿಯುಸಿ ಬಳಿಕ ಯಾವೆಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು ಎಂದು ತಿಳಿಯೋಣ.
ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ದ್ವಿತೀಯ ಪಿಯುಸಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಆಕಾಂಕ್ಷಿಗಳಿಗೆ ಯಾವೆಲ್ಲ ಪರೀಕ್ಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಯಾವೆಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು?
- ಭಾರತೀಯ ರೈಲ್ವೆ ಇಲಾಖೆ(Indian Railway Jobs)ಯಲ್ಲಿ ಕ್ಲರ್ಕ್, ಲೋಕೋ ಪೈಲಟ್, ಕಾನ್ಸ್ಟೇಬಲ್, ಸ್ಟೇಷನ್ ಮಾಸ್ಟರ್, ಟಿಕೆಟ್ ಕಲೆಕ್ಟರ್, ರೈಲ್ವೆ ಗ್ರೂಪ್ ಡಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು.
- ಕೇಂದ್ರ ಸರ್ಕಾರದ ಎಸ್.ಎಸ್.ಸಿ (ಸಿ ಎಚ್ ಎಸ್ ಎಲ್- SSC CHSL) ಅಪ್ಪರ್ ಡಿವಿಷನ್ ಕ್ಲರ್ಕ್, ಲೋವರ್ ಅಂಚೆ ಸಹಾಯಕ, ಡೇಟಾ ಎಂಟ್ರಿ ಆಪರೇಟರ್, SSC ಮಲ್ಟಿ ಟಾಸ್ಕಿಂಗ್ ಸ್ಟಾಫ್, SSC ಜನರಲ್ ಡ್ಯೂಟಿ ಕಾನ್ಸ್‌ಟೇಬಲ್, ಎಸ್‌ಎಸ್‌ಸಿ ಗ್ರೇಡ್ ಸಿ ಮತ್ತು ಗ್ರೇಡ್ ಡಿ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು.
- (ಎನ್ ಡಿ ಎ) – NDA Exam – ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಸೇನಾ ವಿಭಾಗ, ವಾಯುಪಡೆ ಮತ್ತು ನೌಕಾ ವಿಭಾಗಗಳಲ್ಲಿ ಹಾಗೂ ಭಾರತೀಯ ನೌಕ ಅಕಾಡೆಮಿಯಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳು ಲಭ್ಯವಿದೆ.
- ಬಿಎಆರ್‌ಸಿ(BARC Jobs) – ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ಪ್ಯಾರಾ-ವೈದ್ಯಕೀಯ ಸಿಬ್ಬಂದಿ, ಅಗ್ನಿಶಾಮಕ ಸೇವಾ ಸಿಬ್ಬಂದಿ, ಸೈಂಟಿಫಿಕ್ ಅಸಿಸ್ಟೆಂಟ್, ಟೆಕ್ನಿಷಿಯನ್ ಹುದ್ದೆಗಳು ಲಭ್ಯವಿದೆ.
- ಪೊಲೀಸ್ ಕಾನ್ಸ್ಟೇಬಲ್, ಫೋರೆಸ್ಟ್ ಗಾರ್ಡ್, ಎಸ್ ಡಿ ಎ, ಡ್ರೈವರ್, ಎಲ್‌ಡಿಸಿ, ಗ್ರೂಪ್ ಸಿ, ಗ್ರೂಪ್ ಡಿ, ಡಿಇಒ, ಹೆಲ್ಪರ್, ಜೂನಿಯರ್ ಅಸಿಸ್ಟೆಂಟ್‌ಗಳು, ಪ್ಯೂನ್ ಹಾಗೂ ಭಾರತೀಯ ಅಂಚೆ ಇಲಾಖೆಯಲ್ಲಿಇತ್ಯಾದಿ ಇಲಾಖೆ ಹಾಗೂ ನಿಗಮಗಳಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ ಹಲವಾರು ಹುದ್ದೆಗಳು ಲಭ್ಯವಿದೆ.
ದ್ವಿತೀಯ ಪಿಯುಸಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳ ಅವಕಾಶಗಳು ಈ ರೀತಿ ಇದ್ದು, ಪದವಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಉನ್ನತ ಹುದ್ದೆ ಐಎಎಸ್, ಕೆಎಎಸ್, ಐಪಿಎಸ್ ಇತ್ಯಾದಿ ಹೆಚ್ಚಿನ ಅವಕಾಶಗಳು ಲಭ್ಯವಿರುತ್ತದೆ. ಆದ್ದರಿಂದ ಪದವಿ ವ್ಯಾಸಂಗ ಮಾಡುತ್ತಲೇ ಸ್ಪರ್ಧಾತ್ಮಕ ಪರೀಕ್ಷೆಗೂ ತಯಾರಿ ನಡೆಸುವುದು ಉತ್ತಮ ಆಯ್ಕೆ ಆಗಿರುತ್ತದೆ.
Important Direct Links:
ಇನ್ನಷ್ಟು ವೃತ್ತಿ ಲೇಖನಗಳಿಗಾಗಿ | ಕ್ಲಿಕ್ ಮಾಡಿ |
More Updates | Karnataka Help.in |