ನಮಸ್ಕಾರ ಬಂಧು ಮಿತ್ರರೇ, ಈಗಾಗಲೇ ನೀವು ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ ಎಂದು ನಾವು ತಿಳಿದಿದ್ದೇವೆ. ಯುವ ನಿಧಿ ಯೋಜನೆಯ ಹಣ(Yuva Nidhi Amount Release Date) ಯಾವಾಗ ನಿಮ್ಮ ಬ್ಯಾಂಕ್ ಖಾತೆಗೆ ಬರಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಯುವ ನಿಧಿ ಯೋಜನೆಯು ಒಂದು ಮಹತ್ವದ ಯೋಜನೆಯಾಗಿದೆ. ಶೈಕ್ಷಣಿಕ ವರ್ಷ 2023 ರ ವರ್ಷದಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ (ವೃತ್ತಿಪರ ಕೋರ್ಸ್‌ಗಳು ಸೇರಿದಂತೆ) ಪುತಿ ತಿಂಗಳು ರೂ.3000/- (ಮೂರು ಸಾವಿರ ರೂ.ಗಳು ಮಾತ್ರ ನಿರುದ್ಯೋಗ ಭತ್ಯೆ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪುತಿ ತಿಂಗಳು ರೂ.1500/- (ಒಂದು ಸಾವಿರದ ಐದುನೂರು ರೂ.ಗಳು ಮಾತ್ರ) ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನೀಡಲು ಈ ಯೋಜನೆಯ ಗುರಿಯಾಗಿದೆ.