WhatsApp Channel Join Now
Telegram Group Join Now

2nd PUC 2024 Exam 3 Registration: 2nd ಪಿಯುಸಿ ಪರೀಕ್ಷೆ 3 ಪೂರಕ ಪರೀಕ್ಷೆಗೆ ಅರ್ಜಿ ಆಹ್ವಾನ!!

2nd PUC 2024 Exam 3 Registration: 2024 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 2 ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು, ಇದರಲ್ಲಿ ಅನುತ್ತೀರ್ಣ ಅದ ವಿದ್ಯಾರ್ಥಿಗಳು ಮತ್ತು‌ ಪರೀಕ್ಷಗೆ ಪುನರಾವರ್ತಿತ, ತಮ್ಮ ಫಲಿತಾಂಶವನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ 3 ಗೆ ಅರ್ಜಿ ಸಲ್ಲಿಸಲು ಅವಕಾಶ ‌ಮಾಡಿಕೊಡಲಾಗಿದೆ.

ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಲಿಯು ದ್ವೀತಿಯ ಪಿಯುಸಿ ಪರೀಕ್ಷೆ 3 ಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅಧಿಸೂಚನೆಯ ಪ್ರಕಾರ ಪರೀಕ್ಷೆಯನ್ನು ಜೂನ್ 24 ರಿಂದ ಜುಲೈ 5, 2024 ರವರೆಗೆ ನಡೆಸಲಾಗುತ್ತದೆ. ಪರೀಕ್ಷೆ 1 ಮತ್ತು 2 ರಲ್ಲಿ ಉತ್ತೀರ್ಣರಾಗಿ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಲು ದ್ವಿತೀಯ ಪಿಯುಸಿ ಪರೀಕ್ಷೆ 3ಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ.

2Nd Puc 2024 Exam 3 Registration
2Nd Puc 2024 Exam 3 Registration

ಪರೀಕ್ಷೆ 1 ಮತ್ತು 2 ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಅನುತ್ತೀರ್ಣ ಅಂಕಪಟ್ಟಿಗಳನ್ನು ಪರೀಕ್ಷಾ ಮಂಡಳಿಯಿಂದ ನೀಡಲಾಗುವುದಿಲ್ಲ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಂಡಳಿಯಿಂದ ನೀಡಲಾಗುವ ಪಲಿತಾಂಶ ಪಟ್ಟಿಯ ಆಧಾರದ ಮೇಲೆ ಪರೀಕ್ಷೆ ಮೂರಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಪರೀಕ್ಷೆ 1 ಮತ್ತು ಪರೀಕ್ಷೆ 2ಕ್ಕೆ ನೋಂದಾಯಿಸಿಕೊಂಡು ಪರೀಕ್ಷೆಗೆ ಹಾಜರಾಗದೆ ಇರುವ ವಿದ್ಯಾರ್ಥಿಗಳು ಪರೀಕ್ಷೆ ಮೂರಕ್ಕೆ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಹಾಜರಾಗಬಹುದಾಗಿದೆ. 2024ನೇ ಸಾಲಿಗಿಂತ ಹಿಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ‌ ವಿದ್ಯಾರ್ಥಿಗಳು ಕೂಡ ಈ ಪೂರಕ ಪರೀಕ್ಷೆಗೆ ಹಾಜರಾಗಬಹುದು. KSEAB 3rd PUC ಪೂರಕ ಪರೀಕ್ಷೆಯ ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಮೇ 23 ರಿಂದ 28 ರವರೆಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮೋಡ್. ನಿಗದಿತ ದಿನಾಂಕದ ನಂತರ, ವಿದ್ಯಾರ್ಥಿಗಳು ದಂಡ ಸೇರಿದಂತೆ ದಿನಕ್ಕೆ 50 ರೂ ದಂಡವನ್ನು ಪಾವತಿಸಬೇಕಾಗುತ್ತದೆ.

Important Dates of 2nd PUC 2024 Exam 3 Registration

ದ್ವಿತೀಯ ಪಿಯುಸಿ ಪರೀಕ್ಷೆ‌ 3 ರ ಪ್ರಮುಖ ದಿನಾಂಕಗಳು

  • ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 23-05-2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-05-2024
  • ಪರೀಕ್ಷೆಗೆ ದಂಡ ಶುಲ್ಕ ರಹಿತ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 28-05-2024
  • ಪರೀಕ್ಷೆಗೆ ದಂಡ ಶುಲ್ಕ ಸಹಿತ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 29-05-2024 ರಿಂದ 30-05-2024 ರವರೆಗೆ. (ದಿನಕ್ಕೆ ರೂ.50 ದಂಡದಂತೆ)

Application Fee Details of 2nd PUC 2024 Exam 3 Registration

ದ್ವಿತೀಯ ಪಿಯುಸಿ ಪರೀಕ್ಷೆ 3 ಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಶುಲ್ಕಗಳ ವಿವರ

ಪುನರಾವರ್ತಿತ ಅಭ್ಯರ್ಥಿಗಳು ಪಾವತಿಸಬೇಕಾದ ಪರೀಕ್ಷಾ ಶುಲ್ಕ;

ಒಂದು ವಿಷಯಕ್ಕೆ – ರೂ 140/-
ಎರಡು ವಿಷಯಕ್ಕೆ – ರೂ 270/-
ಮೂರು ಅಥವಾ ಹೆಚ್ಚಿನ ವಿಷಯಗಳಿಗೆ – ರೂ‌400/-
( ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ ಒಂದರ ವಿದ್ಯಾರ್ಥಿಗಳನ್ನು ಹೊರತುಪಡಿಸಿ)

ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕ;

ಪ್ರಥಮ ಬಾರಿಗೆ ಒಂದು ವಿಷಯಕ್ಕೆ ರೂ 175/-

How to Apply For 2nd PUC 2024 Exam lll

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 3 ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

  1. ಮೊದಲು, ಅಧಿಕೃತ ವೆಬ್‌ಸೈಟ್ kseab.karnataka.gov.in ಗೆ ಭೇಟಿ ನೀಡಿ
  2. ನಂತರ, ಮುಂದಿನ ಪ್ರಕ್ರಿಯೆಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ.
  3. ಕರ್ನಾಟಕ ಪರೀಕ್ಷೆ 3‘ ಮೇಲೆ ಕ್ಲಿಕ್ ಮಾಡಿ.
  4. ಅರ್ಜಿ ನಮೂನೆಯಲ್ಲಿ, ಅಗತ್ಯವಿರುವ ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  5. ಫಾರ್ಮ್‌ನೊಂದಿಗೆ ಶುಲ್ಕವನ್ನು ಸಲ್ಲಿಸಿ.
  6. ಭವಿಷ್ಯದ ಉದ್ದೇಶಕ್ಕಾಗಿ ಡೌನ್‌ಲೋಡ್ ಮಾಡಿ ಮತ್ತು ಉಳಿಸಿ.

ಅಥವಾ ತಮ್ಮ ಕಾಲೇಜುಗಳಿಗೆ ಭೇಟಿ ನೀಡಿ ಪ್ರಾಂಶುಪಾಲರ ಬಳಿ ಅರ್ಜಿ ಪಡೆದು ಸೂಕ್ತ ದಾಖಲೆಗಳನ್ನು ಸಲ್ಲಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Important Links:

2nd PUC Examination 3 2024 Application form for Online Registration LinkClick Here
2nd PUC Examination 3 Notice PDFDownload
II PUC EXAMINATION-3 REGISTRATION Official Websitedpue-exam
Official Websitekseab.karnataka.gov.in
More UpdatesKarnatakaHelp.in

1 thought on “2nd PUC 2024 Exam 3 Registration: 2nd ಪಿಯುಸಿ ಪರೀಕ್ಷೆ 3 ಪೂರಕ ಪರೀಕ್ಷೆಗೆ ಅರ್ಜಿ ಆಹ್ವಾನ!!”

Leave a Comment