2nd PUC Result 2024 date announced: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEEB) ನಡೆಸಿದ್ದ ದ್ವಿತೀಯ PUC ಪರೀಕ್ಷೆಯು ಅಂತಿಮಗೊಂಡಿದ್ದು, ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾದು ಕುಳಿತಿದ್ದಾರೆ. ಈ ನಿಟ್ಟಿನಲ್ಲಿ ನಾಳೆ(ಬುಧವಾರ) ರಂದು ಬೆಳಗ್ಗೆ 11 ಗಂಟೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಸುದ್ದಿಗೋಷ್ಠಿ ನಡೆಸಿದ ಬಳಿಕ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ ಪ್ರಕಟಣೆಯ ಮೂಲಕ ತಿಳಿಸಲಾಗಿದೆ. ಹಾಗಾದರೆ ಫಲಿತಾಂಶವನ್ನು ಹೇಗೆ ನೋಡುವುದು ಎಂಬುವುದರ ಕುರಿತು ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
2nd PUC ಪರೀಕ್ಷೆಯನ್ನು ಮಾರ್ಚ್ 1 ರಿಂದ ಮಾರ್ಚ್ 22, 2024 ರವರೆಗೆ ಪರೀಕ್ಷಾ ಮಂಡಳಿಯು ನಡೆಸಿದ್ದು, ಇದಕ್ಕೆ ಸಂಬಂಧಿಸಿದಂತೆ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದ್ದು. ಹಾಗಾಗಿ ನಾಳೆ ಬೆಳಗ್ಗೆ 11ಕ್ಕೆ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷಾ ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್ ಸೈಟ್ ಆದ karnataka.gov.in, pue.kar.nic.in, karresults.nic.in, ಮತ್ತು kseeb.kar.nic.in. ಗಳಲ್ಲಿ ಪ್ರಕಟಿಸಲಿದೆ.