ಕೆಇಎ: ಅಂಕಪಟ್ಟಿ ಪ್ರಕಟ

Published on:

ವಿವಿಧ ಇಲಾಖೆ/ಮಂಡಳಿ/ಸಂಸ್ಥೆ/ನಿಗಮದ ಮೂಲ ಉಳಿಕೆ ವೃಂದದ ವಿವಿಧ ಹುದ್ದೆಗಳ ಭರ್ತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ರಾಜ್ಯದಾದ್ಯಂತ ಜ.25ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಅಂಕ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ.

ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಇಲಾಖಾವಾರು ಪ್ರತ್ಯೇಕ ಅಂಕಪಟ್ಟಿಯನ್ನು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/keaದಲ್ಲಿ ಬಿಡುಗಡೆಯಾಗಿದ್ದು, ಅಭ್ಯರ್ಥಿಗಳು ಪರಿಶೀಲನೆ ಮಾಡಬಹುದಾಗಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯ ಸಹಾಯಕ ಸಂಚಾರ ನಿರೀಕ್ಷಕ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಜೂನಿಯರ್ ಸಹಾಯಕ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‌ನ ಜೂನಿಯರ್ ಅಧಿಕಾರಿದ ಉತ್ಪಾದನೆ ಮತ್ತು ನಿರ್ವಹಣೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ವಾಹಕ, ಬಿಡಬ್ಲ್ಯೂಎಸ್ಎಸ್‌ಬಿಯ ಜೂನಿಯರ್ ಸಹಾಯಕ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ದ್ವಿತೀಯ ದರ್ಜೆ ಸಹಾಯಕ, ಕೃಷಿ ಮಾರುಕಟ್ಟೆ ಇಲಾಖೆಯ ಮಾರಾಟ ಸಹಾಯಕ ಹಾಗೂ ಕೃಷಿ ಮಾರುಕಟ್ಟೆ ಇಲಾಖೆಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ನಡೆಸಲಾಗಿತ್ತು.

ಕೆಇಎ ಅಂಕಪಟ್ಟಿ ಹೇಗೆ ಡೌನ್ಲೋಡ್‌ ಮಾಡುವುದು?

ಹಂತ-1 ಕೆಇಎ ವೆಬ್‌ಸೈಟ್‌ https://cetonline.karnataka.gov.in/kea/indexnew.aspxಗೆ ಭೇಟಿ ನೀಡಿ

ಹಂತ-2 ನಂತರ “ನೇಮಕಾತಿ ವಿಭಾಗ“ದಲ್ಲಿ → “ವಿವಿಧ ಇಲಾಖೆಗಳ ನೇಮಕಾತಿ(NON-HK)-2025” ಎಂಬ ಉಪವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ.

ಹಂತ-3 ಮುಂದೆ ಅಲ್ಲಿ ನೀಡಲಾದ “ವಿವಿಧ ಇಲಾಖೆಗಳ ನೇಮಕಾತಿ (HK)-2025 – 25-01-2026 ದಿನಾಂಕ ದಂದು ನಡೆದ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶಗಳ ಪಟ್ಟಿ, ((SDA ಮತ್ತು ಸಮಾನ ಹುದ್ದೆ).13/02/2026“ನ ಶೀರ್ಷಿಕೆಯ ಮೇಲೆ ಒತ್ತಿ, ಅಲ್ಲಿ ನೀಡಲಾದ ಇಲಾಖಾವಾರು ಅಂಕಪಟ್ಟಿಯಲ್ಲಿ ನಿಮಗೆ ಬೇಕಾದ ಅಂಕಪಟ್ಟಿಯನ್ನು ಡೌನ್ಲೋಡ್‌ ಮಾಡಿಕೊಳ್ಳಿ.

Important Direct Links:

KEA January 25 Exam Score List 2026 Notice PDFDownload
North West Karnataka Road Transport (Assistant Traffic Inspector) Provisional Score List 2026 PDFDownload
Karnataka State Small Scale Industrial Development Corporation (JUNIOR ASSISTANT) Provisional Score List 2026 PDFDownload
Karnataka Soaps and Detergents Limited (Junior Officer (Production & Maintenance)) Provisional Score List 2026 PDFDownload
Kalyana Karnataka Road Transport Corporation (Conductor) Provisional Score List 2026 PDFDownload
BWSSB (JUNIOR ASSISTANT) Provisional Score List 2026 PDFDownload
Bangalore Development Authority (Second Division Assistants) Provisional Score List 2026 PDFDownload
Agricultural Marketing Department (Sales Assistants) Provisional Score List 2026 PDFDownload
Agricultural Marketing Department (Sales Assistants) Provisional Score List 2026 PDFDownload
Official Websitecetonline.karnataka.gov.in/kea
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment