ಅಗ್ನಿವೀರ್‌ ನೇಮಕಾತಿ ಅಧಿಸೂಚನೆ ಪ್ರಕಟ; ಅರ್ಜಿ ಆಹ್ವಾನ

ಜೂ.01 ರಿಂದ 15ರವೆರೆಗ ಆನ್‌ಲೈನ್‌ ಪರೀಕ್ಷೆ | ಅರ್ಜಿ ಸಲ್ಲಿಕೆ ಅವಧಿ ಏ.10ರವರೆಗೆ ವಿಸ್ತರಣೆ

Published on:

Updated On:

ಭಾರತೀಯ ಸೇನೆಯು ಅಗ್ನಿಪಥ್ ಯೋಜನೆಯಡಿ 2027ನೇ ಸಾಲಿನ ನೇಮಕಾತಿ ವರ್ಷಕ್ಕೆ ಸೇನೆಯ ವಿವಿಧ ವಿಭಾಗಗಳಿಗೆ ಅಗ್ನಿವೀರ್‌ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ.

ಜನರಲ್ ಡ್ಯೂಟಿ, ಜಿಡಿ-ಮಹಿಳಾ ಮಿಲಿಟರಿ ಪೊಲೀಸ್, ಟೆಕ್ನಿಕಲ್, ಸಿಪಾಯಿ ಫಾರ್ಮಾ, ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಟ್ರೇಡ್ಸ್‌ಮೇನ್‌ ವಿಭಾಗಗಳಿಗೆ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಎಸ್ಸೆಸ್ಸೆಲ್ಸಿ ಮತ್ತು ಸಂಬಂಧಿತ ವಿಷಯದಲ್ಲಿ ಪಿಯುಸಿ ಅಭ್ಯಾಸ ಮಾಡಿರುವವರು ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹರು ಏ.10ರೊಳಗೆ ಭಾರತೀಯ ಸೇನೆ ಅಧಿಕೃತ ವೆಬ್ ಸೈಟ್ https://www.joinindianarmy.nic.in/BRAVOUserLogin.htmಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಫೆಬ್ರವರಿ 13, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಏಪ್ರಿಲ್ 10, 2026(ವಿಸ್ತರಣೆ)
  • ಆನ್‌ಲೈನ್ ಪರೀಕ್ಷೆ ತಾತ್ಕಾಲಿಕ ದಿನಾಂಕಗಳು – ಜೂನ್ 01 ರಿಂದ 15, 2026

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಈ ಕೆಳಗಿನ ಅರ್ಹತೆ ಹೊಂದಿರಬೇಕು.

ಅಗ್ನಿವೀರ್ (ಜನರಲ್ ಡ್ಯೂಟಿ)/ಅಗ್ನಿವೀರ್‌(ಮಹಿಳಾ ಮಿಲಿಟರಿ ಪೊಲೀಸ್‌) ಹುದ್ದೆಗಳಿಗೆ – 45% ಅಂಕಗಳೊಂದಿಗೆ 10ನೇ ತರಗತಿಯಲ್ಲಿ ಉತ್ತೀರ್ಣ
ಅಗ್ನಿವೀರ್ (ಟೆಕ್ನಿಕಲ್) ಹುದ್ದೆಗೆ – 12ನೇ ತರಗತಿಯಲ್ಲಿ ವಿಜ್ಞಾನ, ಭೌತಶಾಸ್ತ್ರ, ಗಣಿತ, ಇಂಗ್ಲೀಷ್‌ ಉತ್ತೀರ್ಣ
ಅಗ್ನಿವೀರ್ (ಗುಮಾಸ್ತ/ಸ್ಟೋರ್ ಕೀಪರ್‌ ತಾಂತ್ರಿಕ) ಹುದ್ದೆಗೆ – 12ನೇ ತರಗತಿಯಲ್ಲಿ ಕಲಾ, ವಾಣಿಜ್ಯ ಅಥವಾ ವಿಜ್ಷಾನ ವಿಭಾಗದಲ್ಲಿ ಕನಿಷ್ಠ ಶೇ.50 ಅಂಕದೊಂದಿಗೆ ಉತ್ತೀರ್ಣ
ಅಗ್ನಿವೀರ್ ಟ್ರೇಡ್ಸ್‌ಮ್ಯಾನ್(10 ನೇ ಪಾಸ್) ಹುದ್ದೆಗೆ– ಎಸ್ಸೆಸ್ಸೆಲ್ಸಿ ತೇರ್ಗಡೆ
ಅಗ್ನಿವೀರ್ ಟ್ರೇಡ್ಸ್‌ಮ್ಯಾನ್(08 ನೇ ಪಾಸ್) ಹುದ್ದೆಗೆ– ಎಂಟನೇ ತರಗತಿ ತೇರ್ಗಡೆ
ಸಿಪಾಯಿ ಫಾರ್ಮಾ ಹುದ್ದೆಗೆ – ಎಸ್ಸೆಸ್ಸೆಲ್ಸಿ ಜೊತೆಗೆ ಶೇ.50ರಷ್ಟು ಅಂಕಗಳೊಂದಿಗೆ ಡಿ.ಫಾರ್ಮಾ ತೇರ್ಗಡೆ.
ಸೋಲ್ಜರ್ ಟೆಕ್ನಿಕಲ್ ಹುದ್ದೆಗೆ – 12ನೇ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲೀಷ್‌ ಪ್ರತಿ ವಿಷಯದಲ್ಲಿ ಶೇ.40ರಷ್ಟು ಅಂಕಗಳೊಂದಿಗೆ ತೇರ್ಗಡೆ.

ವಯೋಮಿತಿ:

ಕನಿಷ್ಠ ವಯಸ್ಸಿನ ಮಿತಿ -17.1/2 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 22 ವರ್ಷಗಳು

ವಯೋಮಿತಿ ಸಡಿಲಿಕೆ; ಭಾರತೀಯ ಸೇನೆಯ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

ಸೇವಾ ಅವಧಿ:

ಅಗ್ನಿವೀರ್ ಯೋಜನೆಯಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಭಾರತೀಯ ವಾಯುಪಡೆಯಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ.

ವೇತನ ಹಾಗೂ ಅಗ್ನಿವೀರ್ ಕಾರ್ಪಸ್ ನಿಧಿ ವಿವರ:

• ಮೊದಲ ವರ್ಷ – ಮಾಸಿಕ ವೇತನ 30 ಸಾವಿರರೂ. ಅದರಲ್ಲಿ ಅಭ್ಯರ್ಥಿಗಳಿಗೆ 21 ಸಾವಿರರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 9 ಸಾವಿರರೂ. ಹೋಗುತ್ತದೆ.

• ಎರಡನೇ ವರ್ಷ -ಮಾಸಿಕ ವೇತನ 33 ಸಾವಿರರೂ. ಅದರಲ್ಲಿ ಅಭ್ಯರ್ಥಿಗಳಿಗೆ 23,100ರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 9,900ರೂ. ಹೋಗುತ್ತದೆ.

• ಮೂರನೇ ವರ್ಷ -ಮಾಸಿಕ ವೇತನ 36,500ರೂ. ಅದರಲ್ಲಿ ಅಭ್ಯರ್ಥಿಗಳಿಗೆ 25,550ರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 10,950ರೂ. ಹೋಗುತ್ತದೆ.

• ನಾಲ್ಕನೇ ವರ್ಷ -ಮಾಸಿಕ ವೇತನ 40 ಸಾವಿರರೂ. ಅದರಲ್ಲಿ ಅಭ್ಯರ್ಥಿಗಳಿಗೆ 28ಸಾವಿರ ರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 12ಸಾವಿರ ರೂ. ಹೋಗುತ್ತದೆ.

• 4 ವರ್ಷಗಳ ನಂತರ, ಅಗ್ನಿವೀರ್ ಅಭ್ಯರ್ಥಿಗಳು 10.04 ಲಕ್ಷರೂ. (ಬಡ್ಡಿ ಸೇರಿದಂತೆ) ಸೇವಾ ನಿಧಿ ಪ್ಯಾಕೇಜ್ ಪಡೆಯುತ್ತಾರೆ.

ಆಯ್ಕೆ ವಿಧಾನ:

  • ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE)
  • ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
  • ದಾಖಲೆ ಪರಿಶೀಲನೆ
  • ದೈಹಿಕ ಸಾಮರ್ಥ್ಯ ಪರೀಕ್ಷೆ/ವೈದ್ಯಕೀಯ ಪರೀಕ್ಷೆ
  • ಅಂತಿಮ ಮೆರಿಟ್ ಪಟ್ಟಿ

ಅರ್ಜಿ ಶುಲ್ಕ;

ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 250ರೂ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 250ರೂ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

• ಮೊದಲಿಗೆ ಅಭ್ಯರ್ಥಿಗಳು ಭಾರತೀಯ ಸೇನೆ ಅಧಿಕೃತ ವೆಬ್ ಸೈಟ್ https://www.joinindianarmy.nic.in/BRAVOUserLogin.htmಗೆ ಭೇಟಿ ನೀಡಿ

Indian Army Agniveer Rally 2026 Notification
Indian Army Agniveer Rally 2026 Online Application Link

• ಬಳಿಕ ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ

• ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.

• ನಂತರ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Official Notification (RO HQ Bangalore Agniveer Men) PDFDownload
All Other Detailed Notification PDFsView and Download
Online Application Form LinkApply Now
Official Websitejoinindianarmy.nic.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

7 thoughts on “ಅಗ್ನಿವೀರ್‌ ನೇಮಕಾತಿ ಅಧಿಸೂಚನೆ ಪ್ರಕಟ; ಅರ್ಜಿ ಆಹ್ವಾನ”

Leave a Comment