UPSC IES, ISS ಸೇವೆಗಳ ಪರೀಕ್ಷೆ 2026ರ ನೋಂದಣಿ ಆರಂಭ

Published on:

ಕೇಂದ್ರ ಲೋಕಸೇವಾ ಆಯೋಗವು(UPSC) 2026ನೇ ಸಾಲಿನ “ಭಾರತೀಯ ಆರ್ಥಿಕ ಸೇವೆ, ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ”ಯ ನೋಂದಣಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.

ಸದರಿ ಪರೀಕ್ಷೆಯ ಮೂಲಕ ಭಾರತೀಯ ಆರ್ಥಿಕ ಸೇವೆ(IES)ಗೆ 16 ಹುದ್ದೆಗಳು ಹಾಗೂ ಭಾರತೀಯ ಸಂಖ್ಯಾಶಾಸ್ತ್ರೀಯ ಸೇವೆ(ISS)ಗೆ 28 ಹುದ್ದೆಗಳಿಗೆ, ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಮಾ.03ರೊಳಗೆ ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ https://upsc.gov.in/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಫೆಬ್ರವರಿ 12, 2026
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಮಾರ್ಚ್ 03, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮಾರ್ಚ್ 03, 2026
  • ಪರೀಕ್ಷಾ ದಿನಾಂಕ – ಶೀಘ್ರದಲ್ಲಿಯೇ ತಿಳಿಸಲಾಗುವುದು

ಶೈಕ್ಷಣಿಕ ಅರ್ಹತೆ:

✓ ಭಾರತೀಯ ಆರ್ಥಿಕ ಸೇವೆ (IES) ಹುದ್ದೆಗೆ; ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಅರ್ಥಶಾಸ್ತ್ರ/ಅನ್ವಯಿಕ ಅರ್ಥಶಾಸ್ತ್ರ/ವ್ಯವಹಾರ ಅರ್ಥಶಾಸ್ತ್ರ/ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

✓ ಭಾರತೀಯ ಸಂಖ್ಯಾಶಾಸ್ತ್ರೀಯ ಸೇವೆ ಕೋರ್ಸ್ (ISS) ಹುದ್ದೆಗೆ; ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಖ್ಯಾಶಾಸ್ತ್ರ/ಗಣಿತ ಸಂಖ್ಯಾಶಾಸ್ತ್ರ/ಅನ್ವಯಿಕ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

ವಯೋಮಿತಿ:

01-08-2026 ರಂತೆ;

ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು

ವಯೋಮಿತಿ ಸಡಿಲಿಕೆ; ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10 ವರ್ಷಗಳು.

ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ
  • ಸಂದರ್ಶನ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಕೇಂದ್ರ ಸರ್ಕಾರಿ ನಿಯಮಗಳ ಅನುಸಾರ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಬಿಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
ಇತರೆ ಎಲ್ಲಾ ಅಭ್ಯರ್ಥಿಗಳಿಗೆ – ₹200

ಆನ್ ಲೈನ್ ಮೂಲಕ ಅರ್ಜಿ‌ ಸಲ್ಲಿಸುವ ವಿಧಾನ

• ಅಭ್ಯರ್ಥಿಗಳು ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ https://upsc.gov.in/ ಗೆ ಭೇಟಿ ನೀಡಿ.

• ನಂತರ *ಹೊಸದೇನಿದೆ* ಶೀರ್ಷಿಕೆಯ ಕೆಳಗೆ ನೀಡಲಾಗಿರುವ “ಪರೀಕ್ಷಾ ಅಧಿಸೂಚನೆ: ಭಾರತೀಯ ಆರ್ಥಿಕ ಸೇವೆ – ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ, 2026” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ನಂತರ *ಭಾರತೀಯ ಆರ್ಥಿಕ ಸೇವೆ – ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ, 2026* ವಿಭಾಗದಲ್ಲಿ ನೀಡಲಾಗಿರುವ “ಇಲ್ಲಿ ಕ್ಲಿಕ್ ಮಾಡಿ” ಆಯ್ಕೆಯ ಮೇಲೆ ಟ್ಯಾಪ್ ಮಾಡಿ. (ಅಥವಾ ನೇರವಾಗಿ https://upsconline.nic.in/ಗೆ ಭೇಟಿ ನೀಡಿ ಈ ಕೆಳಗಿನ ಹಂತಗಳನ್ನು ಅನುಸರಿಸಿ)

Upsc Online Portal
UPSC Online Portal

• ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ಹೊಸದಾಗಿ ನೋಂದಾಯಿಸಿ.

• ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವವಿವರ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.

• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websiteupsc.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

2 thoughts on “UPSC IES, ISS ಸೇವೆಗಳ ಪರೀಕ್ಷೆ 2026ರ ನೋಂದಣಿ ಆರಂಭ”

Leave a Comment