CM Kaushalya Karnataka Yojane: ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ (CMKKY) ಕರ್ನಾಟಕ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ರಾಜ್ಯದ ಯುವಜನರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗಾವಕಾಶಗಳನ್ನು ಒದಗಿಸುವುದು ಉದ್ದೇಶವಾಗಿದೆ. 2016-17 ರಲ್ಲಿ ಪ್ರಾರಂಭವಾದ ಈ ಯೋಜನೆಯು, ರಾಜ್ಯದಲ್ಲಿ ಕೌಶಲ್ಯ ಅಭಿವೃದ್ಧಿ ಉದ್ಯೋಗದ ಬೇಡಿಕೆಗೆ ಅನುಗುಣವಾಗಿ ಯುವಜನರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ.
ಕೌಶಲ್ಯಾಭಿವೃದ್ದಿ ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ನೇರವಾಗಿ ಜಾರಿಗೆ ತಂದ ಯೋಜನೆಗಳಡಿ 2.5 ಲಕ್ಷ ಯುವಕ/ ಯುವತಿಯರಿಗೆ ಮತ್ತು ಇತರ ಇಲಾಖೆಗಳಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಡಿ 2.50 ಲಕ್ಷ ಯುವಜನತೆಗೆ ಕೌಶಲ್ಯ ತರಬೇತಿ ನೀಡುವ ಉದ್ದೇಶವನ್ನು ಈ ಯೋಜನೆಯ ಮೂಲಕ ಹೊಂದಿದೆ.
ಈ ಯೋಜನೆ ಮೂಲಕ ನೊಂದಾಯಿಸಿಕೊಂಡ ಯುವಕ ಯುವತಿಯರಿಗೆ ಉದ್ಯೋಗಕ್ಕೆ ಉಪಯೋಗವಾಗುವ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿ ಮುಗಿದ ನಂತರ ಅಭ್ಯರ್ಥಿಗಳಿಗೆ ತರಬೇತಿ ಪಡೆದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಮತ್ತು ಉದ್ಯೋಗವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ನಿರುದ್ಯೋಗಿ ಯುವಕ ಯುವತಿಯರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು ಸುಲಭವಾಗಿ ಉದ್ಯೋಗವನ್ನು ಪಡೆಯಬಹುದಾಗಿದೆ. ಈ ಯೋಜನೆ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.
Objectives of the CM Kaushalya Karnataka Yojane 2024
ಯೋಜನೆಯ ಉದ್ದೇಶಗಳು;
- ವಾರ್ಷಿಕವಾಗಿ 5 ಲಕ್ಷ ಯುವಜನರಿಗೆ ಕೌಶಲ್ಯ ತರಬೇತಿ ನೀಡುವುದು.
- ಉದ್ಯಮ-ಸಂಬಂಧಿತ ಕೌಶಲ್ಯಗಳ ಮೇಲೆ ಕೇಂದ್ರೀಕರಿಸುವ ಮೂಲಕ ಉದ್ಯೋಗಾವಕಾಶಗಳಿಗೆ ಅಭ್ಯರ್ಥಿಗಳನ್ನು ಸಿದ್ಧಪಡಿಸುವುದು.
- ಕೌಶಲ್ಯಾಭಿವೃದ್ಧಿ ಸಂಸ್ಥೆಗಳು ಮತ್ತು ಉದ್ಯಮಗಳ ನಡುವಿನ ಸಂಪರ್ಕವನ್ನು ಉತ್ತೇಜಿಸುವುದು.
- ರಾಜ್ಯದಲ್ಲಿ ಕೌಶಲ್ಯ ಅಭಿವೃದ್ಧಿ ಮೂಲಸೌಕರ್ಯವನ್ನು ಬಲಪಡಿಸುವುದು.
Some Key Features of the Chief Minister’s Kaushalya Karnataka Yojane (CMKKY)
ಯೋಜನೆಯ ಪ್ರಮುಖ ಲಕ್ಷಣಗಳು;
- ವಿವಿಧ ಕೌಶಲ್ಯ ತರಬೇತಿ ಕೋರ್ಸ್‌ಗಳು: ಸಿಎಂಕೆಕೆವೈ ಯೋಜನೆಯು ಐಟಿ, ಐಟಿಐ, ಬ್ಯಾಂಕಿಂಗ್, ಹಣಕಾಸು, ಉತ್ಪಾದನೆ, ಸೇವಾ ಉದ್ಯಮಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಕೌಶಲ್ಯ ತರಬೇತಿ ಕೋರ್ಸ್‌ಗಳನ್ನು ನೀಡುತ್ತದೆ.
- ಉಚಿತ ತರಬೇತಿ: ಸರ್ಕಾರವು ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿಯನ್ನು ಒದಗಿಸುತ್ತದೆ.
- ವಿದ್ಯಾರ್ಥಿವೇತನ ಮತ್ತು ಇತರ ಸೌಲಭ್ಯಗಳು: ತರಬೇತಿ ಪಡೆಯುತ್ತಿರುವ ಕೆಲವು ಅಭ್ಯರ್ಥಿಗಳಿಗೆ ಸರ್ಕಾರವು ವಿದ್ಯಾರ್ಥಿವೇತನ, ಉಚಿತ ವಸತಿ ಮತ್ತು ಇತರ ಸೌಲಭ್ಯಗಳನ್ನು ಒದಗಿಸುತ್ತದೆ.
- ಉದ್ಯೋಗ ಖಾತರಿ: ಸರ್ಕಾರವು ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗ ಖಾತ್ರಿ ನೀಡುವ ಗುರಿ ಹೊಂದಿದೆ.
Eligibility Criteria for Chief Minister Kaushalya Karnataka Scheme
ಯಾರು ಅರ್ಜಿ ಸಲ್ಲಿಸಬಹುದು..?: ಈ ಯೋಜನೆಯನ್ನು ವಿಶೇಷವಾಗಿ 18 ರಿಂದ 35 ವರ್ಷ ವಯಸ್ಸಿನ ನಿರುದ್ಯೋಗಿ ಯುವಕರಿಗೆ ವಿನ್ಯಾಸಗೊಳಿಸಲಾಗಿದೆ. ನಿರುದ್ಯೋಗಿ ಯುವಕರು, ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸದೆ ತಮ್ಮ ಶಾಲಾ/ ಕಾಲೇಜುಗಳಿಂದ ಹೊರಗುಳಿದಿರುವವರು ಕೂಡ ಯೋಜನೆಯಡಿ ಕೌಶಲ್ಯ ತರಬೇತಿ ಕಾರ್ಯಕ್ರಮಗಳಿಗೆ ನೋಂದಾಯಿಸಿಕೊಳ್ಳಬಹುದು. ST ಅಭ್ಯರ್ಥಿಗಳಿಗೆ 20%, SC ಗಳಿಗೆ 7% ಮತ್ತು OBC ಗಳಿಗೆ 15% ಮೀಸಲಾತಿ ಇದೆ.
How to Apply for CM Kaushalya Karnataka Scheme 2024
ಅರ್ಜಿ ಸಲ್ಲಿಕೆ ಹೇಗೆ?: ಕೌಶಲ್ಯ ಕರ್ನಾಟಕ ಯೋಜನೆಗೆ ಅಧಿಕೃತ ಪೋರ್ಟಲ್ (www.kaushalkar.com) ಮೂಲಕ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬಹುದು. ಆಕಾಂಕ್ಷಿಗಳು, ತರಬೇತಿ ನೀಡುವವರು ಮತ್ತು ಉದ್ಯೋಗದಾತರಿಗೆ ಆನ್‌ಲೈನ್ ನೋಂದಣಿಗಳನ್ನು ಒಂದೇ ಅಧಿಕೃತ ವೆಬ್‌ಸೈಟ್ ಮೂಲಕ ಆಹ್ವಾನಿಸಲಾಗುತ್ತಿದೆ. ಕೌಶಲ್ಯ, ಶಿಷ್ಯವೃತ್ತಿ, ಉದ್ಯೋಗ ಅಥವಾ ಸ್ವಯಂ ಉದ್ಯೋಗಾವಕಾಶಗಳಿಗಾಗಿ ಕೌಶಲ್ಯ ಕರ್ನಾಟಕ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
- ಮೊದಲು ಅಧಿಕೃತ ವೆಬ್‌ಸೈಟ್‌ಗೆ (www.kaushalkar.com) ಭೇಟಿ ನೀಡಿ.
- “ನೋಂದಣಿಗಳು” ಟ್ಯಾಬ್ ಮೇಲೆ ಸ್ಕ್ರಾಲ್ ಮಾಡಿ ಮತ್ತು ನಂತರ ಮುಖಪುಟದಲ್ಲಿ ಕಾಣುವ “ಆಕಾಂಕ್ಷಿ” ಲಿಂಕ್ ಅನ್ನು ಕ್ಲಿಕ್ ಮಾಡಿ.
- ನಂತರ ಆಕಾಂಕ್ಷಿಗಳ ನೋಂದಣಿ ನಮೂನೆಯ ಪ್ರಕಾರದ ಪುಟವು ಕಾಣಿಸಿಕೊಳ್ಳುತ್ತದೆ. ಅರ್ಜಿದಾರರು ತಾವು ಯಾವ ಪ್ರಕಾರದ ಅರ್ಜಿ ನಮೂನೆ ಸಲ್ಲಿಸಬೇಕು ಎಂಬುದನ್ನು ಆಯ್ಕೆ ಮಾಡಿ.
- ಅಭ್ಯರ್ಥಿಗಳು ಕೌಶಲ್ಯ, ಅಪ್ರೆಂಟಿಸ್‌ಶಿಪ್, ಉದ್ಯೋಗ ಅಥವಾ ಸ್ವಯಂ ಉದ್ಯೋಗಾವಕಾಶಗಳ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು.
- ಮುಂದುವರೆಸಲು, ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
- ಅರ್ಜಿ/ನೋಂದಣಿ ನಮೂನೆಯಲ್ಲಿ ವೈಯಕ್ತಿಕ ವಿವರಗಳು, ಪೋಷಕರ ವಿವರಗಳು, ವಿಳಾಸ ವಿವರಗಳು, ಶಿಕ್ಷಣದ ವಿವರಗಳಂತಹ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
- ವೆರಿಫಿಕೇಶನ್‌ಗಾಗಿ ಸ್ವೀಕರಿಸಲು “ಒಟಿಪಿ ಕಳುಹಿಸು” ಲಿಂಕ್ ಮಾಡಿ.
- OTPಯನ್ನು ನಮೂದಿಸಿ ಮತ್ತು ಆನ್‌ಲೈನ್ ಅಪ್ಲಿಕೇಶನ್ / ನೋಂದಣಿ ಫಾರ್ಮ್‌ನ ಕೆಳಗಿನ ಬಲಭಾಗದಲ್ಲಿರುವ “ಸಲ್ಲಿಸು” ಬಟನ್ ಕ್ಲಿಕ್ ಮಾಡಿ.
Also Read: ಲೇಬರ್ ಕಾರ್ಡ್ 60,000 ರೂ. ಮದುವೆ ಸಹಾಯಧನ | Labour Card Marriage Assistance 2024 Apply Online
Important Direct Links:
CM Kaushalya Karnataka Yojane 2024 Online Application Link | kaushalkar.karnataka |
More Updates | KarnatakaHelp.in |
Application done here Sir/Madam where are you
Office name and address send me