What is PM SHRI Scheme?: ಪಿಎಂ ಶ್ರೀ ಯೋಜನೆ, ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿನೂತನ ಯೋಜನೆ

Follow Us:

PM SHRI Scheme

ಪಿಎಂ ಶ್ರೀ (PM SHRI) ಯೋಜನೆ ಭಾರತದಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಮೇಲ್ದರ್ಜೆಗೇರಿಸುವ ಒಂದು ಮಹತ್ವದ ಯೋಜನೆವಾಗಿದೆ. ಈ ಯೋಜನೆಯ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಸರಿಸುತ್ತದೆ ಮತ್ತು ದೇಶಾದ್ಯಂತ 14,500 ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ.

ಈ ಯೋಜನ ಮೂಲಕ PM SHRI ಶಾಲೆಗಳು (PM ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಎಂದು ಕರೆಯಲಾಗುತ್ತದೆ. ಕೇಂದ್ರ ಸರ್ಕಾರದ ಕೇಂದ್ರ ಶಿಕ್ಷಣ ಸಚಿವಾಲಯವು ಈ ಯೋಜನೆಯನ್ನು ಪ್ರಾರಂಭಿಸಿತು.
ಇದರ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನ್ವಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 14,500 ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ 5 ವರ್ಷಗಳ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಯೋಜನೆ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ಲೇಖನವನ್ನು ಗಮನವಿಟ್ಟು ಓದಿರಿ.

Pm Shri Scheme
Pm Shri Scheme

Benefits of PM Shri Schools Yojana:

ಪಿಎಂ ಶ್ರೀ ಯೋಜನೆಯ ಪ್ರಯೋಜನಗಳು;

  • ಉತ್ತಮ ಗುಣಮಟ್ಟದ ಶಿಕ್ಷಣ: ಈ ಯೋಜನೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತದೆ.
  • ಸಮಾನತೆ: ಪಿಎಂ ಶ್ರೀ ಯೋಜನೆಯು ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
  • ದೇಶದ ಅಭಿವೃದ್ಧಿ: ಉತ್ತಮ ಶಿಕ್ಷಿತ ನಾಗರಿಕರನ್ನು ಸೃಷ್ಟಿಸುವ ಮೂಲಕ ಈ ಯೋಜನೆಯು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.

Also Read: PMEGP Loan Scheme 2024: ಸ್ವಂತ ಉದ್ಯಮ ಪ್ರಾರಂಭಿಸಲು ಸರ್ಕಾರದಿಂದ 10 ರಿಂದ 25ಲಕ್ಷ ರೂಪಾಯಿ ಸಾಲ ಸೌಲಭ್ಯ!

Specialties of PM SHRI Schools:

ಪಿಎಂ ಶಾಲೆಗಳ ವಿಶೇಷತೆ;

  • ಆಧುನಿಕ ಕೌಶಲ್ಯಕ್ಕೆ ಆದ್ಯತೆ.
  • ಹೂಸ ಬೋಧನಾ ಶಾಸ್ತ್ರ ಮತ್ತು ತಂತ್ರಜ್ಞಾನ.
  • ಸರ್ಕಾರಿ ಶಾಲೆಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳು.
  • ಪರಿಸರ ಸ್ನೇಹಿ ವ್ಯವಸ್ಥೆ ಹಾಗೂ ಇಂಧನ ಕ್ಷಮತೆ ಮೂಲಸೌಕರ್ಯ.
  • ಆಧುನಿಕ ತಂತ್ರಜ್ಞಾನ, ಸ್ಮಾರ್ಟ್ ತರಗತಿಗಳು.
  • ಕ್ರೀಡೆ ಹಾಗೂ ಪಠ್ಯೇತ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ಮತ್ತು ಪ್ರೋತ್ಸಾಹ
  • ಕಲಿಕೆಗೆ ಉತ್ತಮ ದರ್ಜೆಯ ಗ್ರಂಥಾಲಯ.
  • ಕಲಾ ಕೊಠಡಿಗಳು ಸೇರಿದಂತ ಮೂಲಭೂತ ಸೌಕರ್ಯಗಳು ಈ ಶಾಲೆಗಳಲ್ಲಿ ಇರಲಿವೆ.

ಯೋಜನೆಯ ಲಾಭ ಪಡೆಯಲು, ಶಾಲೆಗಳು ಸ್ವತಃ ಆನ್ ಲೈನ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆಯ್ಕೆಯಾದ ಶಾಲೆಗಳ ಪಟ್ಟಿಯನ್ನು ಕೇಂದ್ರ ಶಿಕ್ಷಣ ಇಖಾಲೆಯು ಪ್ರಕಟಿಸುತ್ತದೆ.

Important Direct Links:

Official WebsitePM SHRI Official
More UpdatesKarnataka Help.in

Leave a Comment